Get Updates
Get notified of breaking news, exclusive insights, and must-see stories!

ಚಿಕ್ಕಬಳ್ಳಾಪುರ: ಪಡಿತರ ತಿದ್ದುಪಡಿಗೆ ಮುಗಿದ ಗಡುವು, ಸರ್ವರ್ ಸಮಸ್ಯೆಯಲ್ಲೇ ಕಾಲಾವಧಿ ಮುಕ್ತಾಯ

ಚಿಕ್ಕಬಳ್ಳಾಪುರ, ಸೆಪ್ಟೆಂಬರ್‌ 11: ಪಡಿತರ ಕಾರ್ಡುಗಳಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ, ಸೇರಿದಂತೆ ಇತರೆ ತಿದ್ದುಪಡಿಗೆ ಸರಕಾರ ಆಡಳಿತಕ್ಕೆ ಬಂದ ಮೂರು ತಿಂಗಳ ನಂತರ ಅವಕಾಶ ನೀಡಿತ್ತಾದರೂ ಸರ್ವರ್‌ ಸಮಸ್ಯೆಯಿಂದಾಗಿ ಬೆರಳೆಣಿಕೆಯಷ್ಟು ಗ್ರಾಹಕರಿಗೆ ಮಾತ್ರ ಇದರ ಪ್ರಯೋಜನ ಸಿಕ್ಕಿದ್ದು ಬಹುತೇಕರು ಅವಕಾಶ ವಂಚಿತರಗಿದ್ದಾರೆ.

ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಗೊಂಡ ಬಳಿಕ ಪಡಿತರ ಚೀಟಿ ತಿದ್ದುಪಡಿ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ. ಚುನಾವಣೆ ಮುಗಿದು ಮೂರು ನಾಲ್ಕು ತಿಂಗಳನಂತರ ತಿದ್ದುಪಡಿ ಮಾಡಿಸಲು ಇಲಾಖೆ ಚಾಲನೆ ನೀಡಿರಲಿಲ್ಲ. ಆದರೆ ಸೆಪ್ಟೆಂಬರ್ 6 ರಿಂದಸೆ.9ರ ತನಕ ಅವಕಾಶ ನೀಡಲಾಗಿತ್ತಾದರೂ ಒಂದೊಂದು ಸೈಬರ್ ಕೇಂದ್ರದಲ್ಲಿ ದಿನವೊಂದಕ್ಕೆ ಕೇವಲ ಐದಾರು ಗ್ರಾಹಕರು ಮಾತ್ರ ಪಡಿತರ ತಿದ್ದುಪಡಿ, ಸೇರ್ಪಡೆ, ತೆರವು ಗೊಳಿಸಲು ನೀಡಲಾಗಿದ್ದ ಅವಕಾಶ ಪಡೆದು ಕೊಂಡಿದ್ದು ಶೇ.80% ರಷ್ಟು ಮಂದಿ ಈ ಸೌಲಭ್ಯದಿಂದ ಮುಂಚಿತರಾಗಿದ್ದಾರೆ.

chikkaballapur-ration-card-correction

ಸೆಪ್ಟೆಂಬರ್ 10 ತನಕ ಪಡಿತರ ತಿದ್ದುಪಡಿಗೆ ನೀಡಲಾಗಿದ್ದ ಸಮಯದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿರುವ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಸೇರಿದಂತೆ ವಿವಿಧ ಸೈಬರ್ ಕೇಂದ್ರಗಳತ್ತ ಸರ್ವರ್ ಸಮಸ್ಯೆಯಿಂದ ಸುತ್ತಾಡುವಂತಾಗಿದ್ದು ಸರ್ವರ್ ಸಮಸ್ಯೆ ನೀವಾರಣೆಯಾಗುವ ಮೊದಲೇ ಸರಕಾರದ ಗಡುವು ಮುಗಿದಿದ್ದು ಇಲಾಖೆ ಹಾಗೂ ಸರ್ಕಾರದ ವಿರುದ್ಧ ಸಮಾನ್ಯ ಜನತೆ ಆಕ್ರೋಶ ಹೊರಹಾಕುತ್ತಿದ್ದಾರೆ.

ಪ್ರಾರಂಭದಲ್ಲಿ ಸೆ.1 ರಿಂದ ಸೆ.10ರ ತನಕ ಮಾತ್ರ ಹೊಸ ಸೇರ್ಪಡೆ, ತಿದ್ದುಪಡಿ ಸೇರಿದಂತೆ ಅವಕಾಶ ನೀಡಲಾಗಿತ್ತು, ಅದೂ ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ಮಾತ್ರ ಅವಕಾಶ ಮಾಡಿಕೊಟ್ಟಿದ್ದು, ಈಗ ಹೊಸದಾಗಿ ವಿವಾಹವಾಗಿರುವವರ ಹೆಸರು, ಮರಣ ಹೊಂದಿರುವವರ ಹಾಗೂ ಮಕ್ಕಳ ಹೆಸರುಗಳನ್ನು ಸೇರಿಸಲು ಮತ್ತು ತೆಗೆಸಲು ಸೈಬರ್ ಸೆಂಟರ್ ಮುಂದೆ ಬೆಳಿಗ್ಗೆಯಿಂದ ಸಂಜೆವರೆಗೂ ಸರತಿ ಸಾಲಿನಲ್ಲಿ ನಿಂತೂ ನಿಂತೂ ಜನ ಸುಸ್ತಾಗಿ ನಾಳೆ, ನಾಳಿದ್ದು ಆಗಬಹುದೆಂಬ ಆಶಾ ಭಾವನೆಯಿಂದ ಇದ್ದವರಿಗೆ ಗಡುವು ಮುಗಿದ ಪರಿಣಾಮ ಕೈಹಿಸಿಕೊಳ್ಳುವಂತಾಗಿದೆ.

ದಿನಪೂರ್ತಿ ಕಾದರು ದೊರೆಯದ ಲಾಭ

ಸಂಜೆ ಬನ್ನಿ, ನಾಳೆ ಬನ್ನಿ, ನಾಡಿದ್ದು ಕೊನೆ, ನೆನ್ನೆಗೆ ಮುಗಿಯಿತು ಹೀಗೆ ತಮ್ಮ ಪಡಿತರ ಚೀಟಿ ಹಾಗೂ ದಾಖಲೆಗಳನ್ನು ಹೊತ್ತು ತಂದವರಿಗೆ ಸೈಬರ್ ಸೆಂಟರ್ ಮಾಲೀಕರು ನೀಡುತ್ತಿದ್ದ ಉತ್ತರಗಳು ಸಾಮಾನ್ಯವಾಗಿದ್ದವು. ನಾವು 3ದಿನಗಳಿಂದ ಬಂದರೂ ನಮ್ಮ ಕೆಲಸ ಮಾಡಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದಾಗ ಸರ್ವರ್ ಸಮಸ್ಯೆ ಇದೆ ನಾವು ಏನು ಮಾಡಲು ಆಗುವುದಿಲ್ಲ, ಆಹಾರ ಇಲಾಖೆ ಸರ್ವಗಳನ್ನು ಹಾಗೂ ಕಾಲಾವಕಾಶ ಒದಗಿಸಿದರೆ ಪಡಿತರ ಚೀಟಿಯಲ್ಲಿ ಹೆಸರು ಸೇರಿಸಬಹುದು ಮತ್ತು ತೆಗೆಯಬಹುದು ಎಂದು ಉತ್ತರಿಸುತ್ತಾರೇ ಹೀಗಾದಾಗ ನಾವು ಯಾರನ್ನು ಕೇಳುವುದು ಎನ್ನುತ್ತಾರೆ ಜನ ಸಾಮಾನ್ಯರು.

ಪುನಃ ಅವಕಾಶ ನೀಡುವಂತೆ ಅಗ್ರಹ

ಸರಕಾರದ ಸೂಚನೆಯಂತೆ ಆಹಾರ ಇಲಾಖೆ ಹಲವು ತಿಂಗಳ ನಂತರ ತಿದ್ದುಪಡಿಗೆ 3 ದಿನ ಅವಕಾಶ ಕಲ್ಪಿಸಿತ್ತು . ಆದರೆ ಸರ್ವರ್‌ ಸಮಸ್ಯೆಯಿಂದ ದಿನಗಳು ಕಳೆಯಿತೇ ಹೊರತು ಪಡಿತರ ಪಲಾನುಭವಿಗಳಿಗೆ ಏನು ಪ್ರಯೋಜನವಾಗಲಿಲ್ಲ.

ಜನಸಾಮಾನ್ಯರಿಗೆ ಅನಾನುಕೂಲವಾಗಿದೆ ಎಂಬ ವಿಚಾರ ಗೊತ್ತಿದ್ದರೂ ಅಧಿಕಾರಿಗಳಗಳು ಸರಕಾರದ ಗಮನಕ್ಕೆ ತರುವಲ್ಲಿ ವಿಫಲವಾಗಿದ್ದರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರ ವಿಚಾರದಲ್ಲಿ ಸರ್ಕಾರ ‌ನಿರ್ಲಕ್ಷವಹಿಸುತ್ತಿದೆ, ಕೆಲಸ ನಿರ್ವಹಿಸದ ಸರ್ವರ್ ಗಳನ್ನು ಯಾಕೆ ಕಲ್ಪಿಸಿಕೊಡಬೇಕು, ಕೂಡಲೇ ಸರ್ಕಾರ ಮತ್ತು ಆಹಾರ ಇಲಾಖೆ‌ ಎಚ್ಚೆತ್ತುಕೊಂಡು ಹೆಚ್ಚು ಸರ್ವರ್ ಗಳನ್ನು ಅಳವಡಿಸಿ ಮತ್ತೊಮ್ಮೆ ಪಡಿತರ ತಿದ್ದುಪಡಿಗೆ ಅವಕಾಶ ಕಲ್ಪಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕಾಗಿದೆಂದು ಜನತೆಯ ಪರವಾಗಿ ತಾಲೂಕು ಸಿಪಿಐಎಂ ಪಕ್ಷದ ಕಾರ್ಯದರ್ಶಿ ಉಪ್ಪಾರಹಳ್ಳಿ ಶ್ರೀನಿವಾಸ್ ಸರ್ಕಾರ ಮತ್ತು ಆಹಾರ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪಡಿತರ ತಿದ್ದುಪಡಿಗೆ ಬೇಡಿಕೆ ಏಕೆ..?

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆಗೆ ಪಡಿತರ ಚೀಟಿಯಲ್ಲಿನ ಯಜಮಾನಿ ಫಲಾನುಭವಿ ಆಗುತ್ತಾರೆ. ಅಲ್ಲದೆ, ಅನ್ನಭಾಗ್ಯ ಯೋಜನೆಯಲ್ಲಿ ಒಬ್ಬರಿಗೆ 10 ಕೆ.ಜಿ ಪಡಿತರ ವಿತರಿಸಲಾಗುತ್ತದೆ. ಈ ಎರಡೂ ಯೋಜನೆಯ ಸದ್ಬಳಕೆಗೆ ಪಡಿತರ ಚೀಟಿ ಅತೀ ಮುಖ್ಯವಾಗಿದೆ. ಹಾಗಾಗಿ, ಯಜಮಾನನ ಬದಲು ಯಜಮಾನಿ ಮಾಡಲು, ಹೊಸದಾಗಿ ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡಲು ಜನ ಸೇವಾ ಕೇಂದ್ರದ ಮುಂದೆ ಜಮಾಯಿಸುತ್ತಿದ್ದಾರೆ.

ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಅಲೆದಾಟ

ದೈನಂದಿನ ಕೂಲಿ ಕೆಲಸ ಬಿಟ್ಟು ಹಳ್ಳಿಗಳಿಂದ ಜನರು ಪಟ್ಟಣದ ತಾಲೂಕು ಕಚೇರಿ, ವಿವಿಧ ಸೇವಾ ಕೇಂದ್ರ, ಸೈಬರ್ ಕೇಂದ್ರಗಳಿಗೆ ಆಗಮಿಸಿ ಪಡಿತರ ಚೀಟಿ ತಿದ್ದುಪಡಿ ಬಗ್ಗೆ ವಿಚಾರಿಸಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬೇಸರದಿಂದ ಹಿಡಿಶಾಪ ಹಾಕುತ್ತಾ ಹಿಂದಿರುಗುವುದು ಸಾಮಾನ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+