ಐದು ವರ್ಷದಲ್ಲಿ ಒಮ್ಮೆಯೂ ಮಾತನಾಡದ ಚಿಕ್ಕಬಳ್ಳಾಪುರ ಸಂಸದ!
ಚಿಕ್ಕಬಳ್ಳಾಪುರ ಫೆಬ್ರವರಿ 19: ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿ ಐದು ವರ್ಷದ ಈ ಅವಧಿಯಲ್ಲಿ ಒಮ್ಮೆಯೂ ಸದನದಲ್ಲಿ ಮಾತನಾಡದ ಒಟ್ಟು ಒಂಬತ್ತು ಸಂಸದರಲ್ಲಿ ಕರ್ನಾಟಕದ ನಾಲ್ವರಿದ್ದು, ಚಿಕ್ಕಬಳ್ಳಾಪುರ ಸಂಸದರು ಸಹ ಒಬ್ಬರಾಗಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇಲ್ಲಿಯವರೆಗೆ ನಡೆದ ಚುನಾವಣೆಗಳಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿರುವ ಮತ್ತು ಎದುರಾಳಿ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳಿಂದ ಸೋಲಿಸಿದ ಹೆಗ್ಗಳಿಕೆ ಸಂಸದ ಬಿ.ಎನ್. ಬಚ್ಚೇಗೌಡ ಅವರ ಹೆಸರಿನಲ್ಲಿ ಇದೆ.

ನಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ನಮ್ಮ ಪರವಾಗಿ ಸದನದಲ್ಲಿ ಮಾತನಾಡಲಿ. ನಮ್ಮ ಸಮಸ್ಯೆಗಳಿಗೆ ಕೇಂದ್ರ ಮಟ್ಟದಲ್ಲಿ ದನಿಯಾಗಲಿ ಎನ್ನುವ ಆಶಯದೊಂದಿಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಅದರಲ್ಲೂ ಲೋಕಸಭಾ ಸದಸ್ಯರೆಂದರೆ ಇನ್ನೂ ಜವಾಬ್ದಾರಿ ಹೆಚ್ಚು. ಆದರೆ ಕರ್ನಾಟಕದಿಂದ ಲೋಕಸಭೆಗೆ ಈ ಬಾರಿ ಆಯ್ಕೆಯಾಗಿ ಹೋದ ಅತ್ಯಂತ ಹಿರಿಯ ಸದಸ್ಯರು ಒಮ್ಮೆಯೂ ಸದನದಲ್ಲಿ ಮಾತನಾಡೇ ಇಲ್ಲ. ಕ್ಷೇತ್ರದ ಪರಿವಾಗಿ ಒಂದೂ ಪ್ರಶ್ನೆಯನ್ನು ಕೇಳಿಲ್ಲ. ಚರ್ಚೆಗಳಲ್ಲೂ ಭಾಗಿಯಾಗಿಲ್ಲ. ಅವರಿಗೆ ಸಿಕ್ಕ ಅವಕಾಶಗಳನ್ನೂ ಬಳಸಿಕೊಂಡಿಲ್ಲ.
ಹೌದು ಈ ದಾಖಲೆಯ ಜೊತೆಗೆ ಬಚ್ಚೇಗೌಡ ಅವರು ಮತ್ತೊಂದು ಅಪಕೀರ್ತಿಯ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. 17ನೇ ಲೋಕಸಭೆಯಲ್ಲಿ ಯಾವುದೇ ಚರ್ಚೆಯಲ್ಲಿಯೂ ಭಾಗಿಯಾಗದ. ಒಮ್ಮೆಯೂ ಸದನದಲ್ಲಿ ಮಾತನಾಡದ ಸಂಸದರು ಎನ್ನುವ ಹಣೆಪಟ್ಟಿ ಸಹ ಹೊತ್ತಿದ್ದಾರೆ.

17ನೇ ಲೋಕಸಭೆಯಲ್ಲಿ ಅವಧಿಯಲ್ಲಿ ಒಟ್ಟು 524 ಸದಸ್ಯರು ಎಷ್ಟು ಸಕ್ರಿಯವಾಗಿದ್ದರು. ಎಷ್ಟು ಪ್ರಶ್ನೆಗಳನ್ನು ಕೇಳಿದರು. ಚರ್ಚೆಯಲ್ಲಿ ಎಷ್ಟು ಹೊತ್ತು ಭಾಗಿಯಾದರು ಎನ್ನುವ ಮಾಹಿತಿಯನ್ನು ಸಂಸತ್ತಿನಲ್ಲಿ ನಿಖರವಾಗಿ ಸಂಗ್ರಹಿಸಲಾಗುತ್ತದೆ. ಪ್ರಸ್ತುತ ನಡೆಯುತ್ತಿರುವ 17ನೇ ಲೋಕಸಭೆಯ ಈ ಐದು ವರ್ಷಗಳಲ್ಲಿ ಒಟ್ಟು 1,354 ಗಂಟೆ ಕಲಾಪ ನಡೆದಿದೆ.
ಈ ಅವಧಿಯಲ್ಲಿ ಕರ್ನಾಟಕದ ನಾಲ್ವರು ಸೇರಿದಂತೆ ಒಂಬತ್ತು ಸದಸ್ಯರು ಒಂದು ಮಾತು ಸಹ ಆಡಿಲ್ಲ ಅಲ್ಲದೆ ಯಾವುದೇ ಚರ್ಚೆಯಲ್ಲೂ ಭಾಗವಹಿಸಿಲ್ಲ. ಹೀಗೆ ಮಾತನಾಡದ ಕರ್ನಾಟಕದ ನಾಲ್ಕು ಸಂಸದರಲ್ಲಿ ಬಿ.ಎನ್.ಬಚ್ಚೇಗೌಡ ಸಹ ಒಬ್ಬರು. ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ, ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಹಾಗೂ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಉಳಿದ ಮೂವರಾಗಿದ್ದಾರೆ.

ಉಳಿದಂತೆ ಲೋಕಸಭೆಯ ಸಂಸದರಲ್ಲಿ ಒಬ್ಬರಾದ ರಮೇಶ್ ಜಿಗಜಿಣಗಿ ಅವರು ಪ್ರಶ್ನೆಯನ್ನು ಕೇಳಿಲ್ಲ. ಕಲಾಪದಲ್ಲಿ ಮಂಡಿಸಲು ಪ್ರಶ್ನೆ ಕಳುಹಿಸಿಲ್ಲ. ಬಚ್ಚೇಗೌಡ ಸೇರಿದಂತೆ ಉಳಿದ ಮೂವರು ಚರ್ಚೆಯಲ್ಲಿ ಪಾಲ್ಗೊಳ್ಳದಿದ್ದರೂ ಕಲಾಪದಲ್ಲಿ ಭಾಗವಹಿಸಿದ್ದಾರೆ.
ಯಾವುದೇ ಜನಪ್ರತಿನಿಧಿ ಸದನದಲ್ಲಿ ತಮ್ಮ ಕ್ಷೇತ್ರ, ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು, ಪ್ರಸ್ತಾಪಿಸುವು-ದು ಸಾಮಾನ್ಯ, ಸಂಸತ್ತಿನಲ್ಲಿ ರಾಜ್ಯದ ಆಗುಹೋಗುಗಳು, ನೀರಾವರಿ, ಕೃಷಿ ಸೇರಿದಂತೆ ಬಹಳಷ್ಟು ವಿಚಾರಗಳ ಬಗ್ಗೆ ಧ್ವನಿ ಎತ್ತಬಹುದು. ಆದರೆ ಚಿಕ್ಕಬಳ್ಳಾಪುರ ಸಂಸದರು ಮಾತ್ರ ಕಲಾಪಗಳಲ್ಲಿ ಪಾಲ್ಗೊಂಡರೂ ಮೌನಕ್ಕೆ ಜಾರಿದ್ದಾರೆ. ಚರ್ಚೆಯಲ್ಲಿಯೇ ಪಾಲ್ಗೊಂಡಿಲ್ಲ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕೃಷಿ ಪ್ರಧಾನವಾಗಿದೆ. ಇಂತಹ ಕಡೆಗಳಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳು ಕುಸಿದಾಗ ಆ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸುವ ಅವಕಾಶಗಳು ಗೌಡರಿಗೆ ಇದ್ದವು ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕ- ಬಳ್ಳಾಪುರ ಜಿಲ್ಲೆಯನ್ನು ಒಳಗೊಂಡ ಲೋಕಸಭಾ ಕ್ಷೇತ್ರದಲ್ಲಿ ನೀರಾವರಿ ಸಮಸ್ಯೆ ಬೃಹತ್ ಪ್ರಮಾಣದಲ್ಲಿಯೇ ಇದ್ದವು.
ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಈ ಎರಡೂ ಜಿಲ್ಲೆಗಳ ಕೆರೆಗಳಿಗೆ ಹರಿಸಲಾ- ಗುತ್ತಿದೆ. ಕೊಳಚೆ ನೀರನ್ನು ಸಂಸ್ಕರಿಸುವ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂ ಚಿಗಳನ್ನು ರಾಜ್ಯ ಸರ್ಕಾರ ಪಾಲಿಸುತ್ತಿಲ್ಲ ಎನ್ನುವ ಆರೋಪವನ್ನು ನೀರಾವರಿ ಹೋರಾಟಗಾರರು ಮಾಡುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಷಯಗಳನ್ನು ಸಹ ಸಂಸತ್ತಿನಲ್ಲಿ ಪ್ರಸ್ತಾಪಿಸಲು ಅವಕಾಶಗಳು ಆದರೆ ಬಚ್ಚೇಗೌಡರು ಸದನದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಸಮಸ್ಯೆಗಳು ಸೇರಿದಂತೆ ರಾಜ್ಯದ ಯಾವುದೇ ವಿಚಾರಗಳ ಬಗ್ಗೆ ಮಾತನಾಡಿಲ್ಲ.
ಗರಿಷ್ಠ ಮತದ ಗೆಲುವು:
2019ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರು ಬಚ್ಚೇಗೌಡ ಅವರಿಗೆ ದೊಡ್ಡ ಮಟ್ಟದಲ್ಲಿಯೇ ಬೆಂಬಲ ನೀಡಿದ್ದಾರೆ. ಲೋಕಸಭಾ ಕ್ಷೇತ್ರಕ್ಕೆ ಈವರೆಗೆ ಒಟ್ಟು 12 ಚುನಾವಣೆಗಳು ನಡೆದಿವೆ. 198000 ನಡೆದ ಚುನಾವಣೆಯಲ್ಲಿ 1,46,943 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ಪ್ರಸನ್ನ ಕುಮಾರ್ ಅವರ ದಾಖಲೆಯನ್ನು ಮುರಿಯಲು 2019ರ ಚುನಾವಣೆವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.
ಬಚ್ಚೇಗೌಡರು ಚುನಾವಣೆಯಲ್ಲಿ 20190 7,45,912 ಮತಗಳನ್ನು ಪಡೆದರು. ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್‌ನ ವೀರಪ್ಪ ಮೊಯಿಲಿ 2대 1.82.110 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದ ಇತಿಹಾಸದಲ್ಲಿ ಗರಿಷ್ಠ ಮತಗಳಿಂದ ಗೆಲುವು ಸಾಧಿಸಿದ ಹೆಗ್ಗಳಿಕೆ ಅವರ ಹೆಸರಿನಲ್ಲಿ ಇದೆ. ಗರಿಷ್ಠ ಮತದಿಂದ ಗೆಲುವು ಸಾಧಿಸಿದ ಹೆಗ್ಗಳಿಕೆ ಹೆಸರಿನಲ್ಲಿ ಇದ್ದಂತೆ ಕಡಿಮೆ ಅಂತರದಲ್ಲಿ ಸೋತವರೂ ಅವರೇ shad. 2014 ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ವಿರುದ್ಧ 9.520 ಮತಗಳ ಅಂತರದಿಂದ ಸೋಲು ಅನು ಭವಿಸಿದ್ದರು.
ಹೀಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರು ಗೌಡರಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದ್ದರೂ ಸಂಸತ್ತಿನಲ್ಲಿ ಮಾತ್ರ ಜನರ ಪರವಾಗಿ ಮಾತನಾಡದೆ ಮೌನಕ್ಕೆ ಜಾರಿದ್ದಾರೆ.
ಬಿಜೆಪಿ ಮುಖಂಡರಿಂದಲೇ ಬೇಸರ:--
ಬಚ್ಚೇಗೌಡ ಅವರು ಈಗಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಬಿಜೆಪಿಯೂ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು ಎನ್ನುತ್ತವೆ ಪಕ್ಷದ ಮೂಲಗಳು.
ಬಚ್ಚೇಗೌಡ ಅವರು ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನೂ ನಡೆಸಲಿಲ್ಲ. ಬಿಜೆಪಿ ವೇದಿಕೆಗಳಿಂದಲೇ ಪೂರ್ಣವಾಗಿ ದೂರ ಸರಿದಿದ್ದಾರೆ. ಸಂಸದರ ಈ ನಡೆ ಬಿಜೆಪಿ ಮುಖಂಡರಲ್ಲಿಯೇ ಬೇಸರ ಮೂಡಿಸಿದೆ.
-
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications