ಗುಡಿಬಂಡೆಯ 21 ಶಾಲೆಗಳಲ್ಲಿ ಏಕೋಪಾಧ್ಯಯ: 18 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ- ಮೌನವಹಿಸಿದ ಶಿಕ್ಷಣ ಇಲಾಖೆ
ಚಿಕ್ಕಬಳ್ಳಾಪುರ ಮೇ 31: ಜ್ಞಾನ ದೇಗುಲವೆಂದೇ ಕರೆಯುವ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಮರೀಚಿಕೆ ಹಾಗೂ ಶಿಕ್ಷಕರ ಕೊರತೆಯಿಂದ ಗುಣಮಟ್ಟ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ. ಕೊಠಡಿಗಳ ಶಿಥಿಲಾವಸ್ಥೆ, ದೊಡ್ಡ ಹಾಗೂ ಸಣ್ಣಪುಟ್ಟ ದುರಸ್ತಿಯಿಂದಾಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಆಗದ ಸ್ಥಿತಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿದೆ.
ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ 65 ಕಿರಿಯ ಪ್ರಾಥಮಿಕ ಶಾಲೆಗಳು, 29 ಹಿರಿಯ ಪ್ರಾಥಮಿಕ ಶಾಲೆಗಳು, 12 ಪ್ರಾಢಶಾಲೆಗಳು, 2 ವಸತಿ ಹಾಗೂ ಒಂದು ಅನುದಾನಿತ ಪ್ರೌಢಶಾಲೆ ಸೇರಿ ಒಟ್ಟು 109 ಶಾಲೆಗಳಲ್ಲಿ 467 ತರಗತಿ ಕೋಣೆಗಳಿದ್ದು ಇವುಗಳಲ್ಲಿ 370 ಸುಸ್ಥಿತಿಯಲ್ಲಿರುವುದು ಗೊತ್ತಾಗಿದೆ. ಇವುಗಳಲ್ಲಿ 97 ಕ್ಕೂ ಅಧಿಕ ಕೊಠಡಿಗಳ ದುರಸ್ತಿಯಾಗಬೇಕಾಗಿದೆ. 15 ಕೊಠಡಿಗಳ ನೆಲಸಮಕ್ಕೆ ಮನವಿ ಮಾಡಲಾಗಿದೆ.

ಮತ್ತೊಂದೆಡೆ ಶಿಕ್ಷಕರ ಕೊರತೆಯೂ ಸಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ತಾಲೂಕಿನ 12 ಸರಕಾರಿ ಪ್ರೌಢಶಾಲೆಗಳಿಗೆ 119 ಶಿಕ್ಷಕರ ಹುದ್ದೆ ಮಂಜೂರಾಗಿದ್ದು 72 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು 47 ಹುದ್ದೆಗಳು ಖಾಲಿ ಇವೆ. ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಗೆ 253 ಹುದ್ದೆಗಳು ಮಂಜೂರಾಗಿದ್ದು, 191 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಉಳಿದ 62 ಹುದ್ದೆಗಳು ಖಾಲಿ ಇವೆ. ತಾಲೂಕಿನ 21 ಶಾಲೆಗಳಲ್ಲಿ ಕೇವಲ ಒಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರೆ, 18 ಶಾಲೆಗಳು ಶಿಕ್ಷಕ ರಹಿತ ಶಾಲೆಗಳಾಗಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ.
ಇಚ್ಚಾ ಶಕ್ತಿ ಕೊರತೆ :-
ನಾನಾ ಕಾರಣಗಳಿಂದ ತಾಲೂಕಿನ ಶಾಲೆಗಳ ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿದ್ದು, ಮೊದಲೇ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ, ಮೈದಾನ, ಶೌಚಾಲಯ, ಮೂಲ ಸೌಕರ್ಯಗಳ ಕೊರತೆ ಕಂಡು ಬರುತ್ತದೆ. ಇದರ ನಡುವೆ ಇರುವ ಕೊಠಡಿಗಳು ಉಪಯೋಗಕ್ಕೆ ಬಾರದಿರುವುದು ಸರಕಾರಿ ಶಾಲೆಗಳ ಬಗ್ಗೆ ಸರಕಾರ ಹಾಗೂ ಅಧಿಕಾರಿಗಳ ಇಚ್ಛಾ ಶಕ್ತಿಯನ್ನು ತೋರಿಸುತ್ತದೆ.

ಸಿಎಸ್‌ಆರ್ ನೆರವು:
ತಾಲೂಕಿನ ದಪ್ಪರ್ತಿ, ಚೆಂಡೂರು, ಸೋಮೇನಹಳ್ಳಿ ಸೇರಿದಂತೆ ಕೆಲವು ಶಾಲೆಗಳನ್ನು ಖಾಸಗಿ ಐಟಿ, ಬಿಟಿ ಕಂಪನಿಗಳು, ಉದ್ಯಮಿಗಳು ಮತ್ತಿತರ ಸಂಘ ಸಂಸ್ಥೆಗಳು ದತ್ತು ಪಡೆದು ಅಭಿವೃದ್ಧಿಪಡಿಸಿವೆ. ಕಂಪ್ಯೂಟರ್, ಸೋಲಾರ್ ಮತ್ತಿತರ ಸೌಲಭ್ಯ ಒದಗಿಸಿದ ಉದಾಹರಣೆಗಳಿವೆ.
ಅಕ್ರಮ ಚಟುವಟಿಕೆ:
ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಿಗೆ ಕಾಂಪೌಂಡ್, ದೀಪದ ಬೆಳಕಿನ ಸೌಲಭ್ಯ, ಸೇರಿದಂತೆ ಭದ್ರತೆ ಇಲ್ಲದಂತಾಗಿದೆ. ಇದರಿಂದ ರಾತ್ರಿ ವೇಳೆ ಕೆಲ ಪುಂಡರ ಗುಂಪುಗಳು ಶಾಲೆ ಆವರಣದಲ್ಲಿ ಮದ್ಯ ಕುಡಿಯುತ್ತಿದ್ದು, ಖಾಲಿ ಬಾಟಲ್, ಒಡೆದ ಬಾಟಲ್ ದರ್ಶನ ಆಗುತ್ತಿದೆ.
ಶೌಚಾಲಯಗಳ ಕೊರತೆ :
ಮೇಲ್ನೋಟಕ್ಕೆ ತಾಲೂಕಿನ ಎಲ್ಲ ಶಾಲೆಗಳಲ್ಲೂ ಶೌಚಾಲಯಗಳಿದ್ದರು, ಕೆಲ ಶಾಲೆಗಳಲ್ಲಿ ಮಾತ್ರ ಬಳಕೆಗೆ ಯೋಗ್ಯವಾಗಿವೆ , ಉಳಿದ ಶಾಲೆಗಳಲ್ಲಿ ಅಸಮರ್ಪಕ ನಿರ್ವಹಣೆ, ನೀರಿನ ಸಂಪರ್ಕ ಕೊರತೆ ಸೇರಿ ಇನ್ನಿತರೇ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಬಯಲು ಮೂತ್ರ ವಿಸರ್ಜನೆಯನ್ನೇ ರೂಢಿಯಾಗಿಸಿ ಕೊಂಡಿದ್ದಾರೆ.

ಮಳೆಗಾಲದಲ್ಲಿ ಶಿಕ್ಷಕರಿಗಿಲ್ಲ ನೆಮ್ಮದಿ:
ತಾಲೂಕಿನ ಕೆಲ ಶಾಲೆಗಳ ಮೇಲ್ಟಾವಣಿ ಮಳೆಗಾಲದಲ್ಲಿ ಸೋರುವುದು ಸಾಮಾನ್ಯವಾಗಿದೆ. ಅಡುಗೆ ಕೋಣೆಗಳಲ್ಲಿ ಬಿಸಿಯೂಟದ ಆಹಾರ ಪಧಾರ್ಥಗಳು, ಕಚೇರಿ ಸೋರಿಕೆಯಿಂದ ಶಾಲಾ ದಾಖಲೆಗಳ ರಕ್ಷಣೆ ಸವಲಾಗಿದ್ದು, ಮಳೆ ಬಂದರೆ ನೆಂದು ಹೋಗುವ ಬೀತಿ ಆವರಿಸಿದೆ.
ಬೋರ್ ವೆಲ್ ನೀರೇ ಗತಿ:
ತಾಲೂಕಿನಲ್ಲಿರುವ 106 ಶಾಲೆಗಳಲ್ಲಿ ಪೈಕಿ ಬೆರಳಣಿಕೆಯಷ್ಟು ಕಡೆ ಮಾತ್ರ ಕುಡಿಯುವ ನೀರಿನ ಘಟಕಗಳಿದ್ದು, ಬಹುತೇಕ ಕಡೆ ಕ್ಯಾನ್ ಗಳಲ್ಲಿ ಸಂಗ್ರಹಿಸಿ ಬಳಸುತ್ತಿದ್ದರೆ. ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆ ಬಾವಿ ನೀರನ್ನೇ ನಲ್ಲಿಗಳಲ್ಲಿನ ಸಂಗ್ರಹಣೆ ಮಾಡಿ ಬಿಸಿ ಊಟ ತಯಾರಿಕೆಗೆ ಬಳಕೆ ಮಾಡಲಾಗುತ್ತಿದೆ.

ಶಿಕ್ಷಕರ ಕೊರತೆ , ಭೋದನಾ ಕೊಠಡಿಗಳ ದುರಸ್ಥಿ, ಶೌಚಾಲಯ ನಿರ್ವಹಣೆ, ಶುದ್ಧ ಕುಡಿಯುವ ನೀರಿನ ಕೊರತೆ ಹಾಗೂ ಆಟದ ಮೈದಾನಗಳ ನಿರ್ಮಾಣ ಸೇರಿ ಇತರೆ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸಲು ಸರಕಾರ ಹೆಚ್ಚಿನ ಮಹತ್ವ ನೀಡಿದರೆ, ದಾಖಲಾತಿ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯವನ್ನು ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳ ಅಭಿಪ್ರಾಯವಾಗಿದೆ.
ಶಾಲಾ ಕೋಠಡಿಗಳ ದುರಸ್ತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ತರಗತಿ ನಡೆಸಲು ಹಿನ್ನಡೆ ಆಗದಂತೆ ಅತಿಥಿ ಉಪನ್ಯಾಸಕರನ್ನು ನೇಮಕವಾಗಲಿದೆ ಎಂದು ಗುಡಿಬಂಡೆ ಕ್ಷೇತ್ರಶಿಕ್ಷಣಾಧಿಕಾರಿ ಮುನೇಗೌಡ ಹೇಳಿದರು.
ಶಿಕ್ಷಕರ ಕೊರತೆ, ಮೂಲಭೂತ ಸೌಲಬ್ಯಗಳ ಕೊರತೆ ಹಾಗೂ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ ವಿಫಲವಾಗಿದ್ದು, ಪೋಷಕರು ಖಾಸಗಿ ಶಾಲೆಗಳತ್ತ ಆಕರ್ಷಿತರಗುತ್ತಿದ್ದಾರೆ ಎಂದು ಪೆಮ್ಮನಹಳ್ಳಿ ಪೋಷಕ ಮದ್ದರೆಡ್ಡಿ ಹೇಳುತ್ತಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications