• search
  • Live TV
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಯಾಣ ಮಂಟಪದಿಂದ ಪ್ರಿಯಕರನ ಜೊತೆ ವಧು ಪರಾರಿ, ವರ ಕಂಗಾಲು

|
Google Oneindia Kannada News

ಚಿಕ್ಕಬಳ್ಳಾಪುರ, ಮೇ 25: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತಿದೆ. ಏಕೆಂದರೆ ಈ ಎರಡು ಕೆಲಸಗಳು ಸಾಕಷ್ಟು ಹಣ ಮತ್ತು ಜವಾಬ್ದಾರಿಗಳನ್ನು ಹೊಂದಿರುತ್ತದೆ. ಅದೆಷ್ಟೋ ಮದುವೆಗಳು ಮದುವೆ ಮಂಟಪದವರೆಗೂ ಬಂದು ನಿಂತು ಹೋಗಿರೋದು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.

ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ತಾಳಿ ಕಟ್ಟುವ ಕೊನೆ ಘಳಿಗೆಯಲ್ಲಿ ವಧು ತಲೆ ಸುತ್ತಿ ಬಿದ್ದು ನಾಟಕ ಮಾಡುವ ಮೂಲಕ ಮದುವೆ ಮುರಿದಿದ್ದ ಘಟನೆ ನಡೆದಿತ್ತು. ಇಂದು ಬುಧವಾರ ಚಿಕ್ಕಬಳ್ಳಾಪುರದಲ್ಲಿಯೂ ಅಂತಹದ್ದೇ ಒಂದು ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ರಾತ್ರಿ ಆರತಕ್ಷತೆಯಲ್ಲಿ ಭಾಗಿಯಾದ ವಧು ರಾತ್ರೋ ರಾತ್ರಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದರಿಂದ ಮದುವೆ ಮುರಿದುಬಿದ್ದಿದೆ.

ಚಿಕ್ಕಬಳ್ಳಾಪುರ; ಜವಳಿ ಪಾರ್ಕ್ ಸ್ಥಾಪನೆ ಹಿಂದೆ ಉದ್ಯೋಗ ಸೃಷ್ಟಿ ಗುರಿಚಿಕ್ಕಬಳ್ಳಾಪುರ; ಜವಳಿ ಪಾರ್ಕ್ ಸ್ಥಾಪನೆ ಹಿಂದೆ ಉದ್ಯೋಗ ಸೃಷ್ಟಿ ಗುರಿ

ಪ್ರಿಯಕರ ಸೋದರ ಮಾವ ಪ್ರವೀಣ್ ಜೊತೆ ವಧು ಎಸ್ಕೇಪ್ !

ಗೌರಿಬಿದನೂರು ನಾಗರೆಡ್ಡಿ ಬಡಾವಣೆಯ ಯುವತಿ ವೆನ್ನಲೆ ಎಂಬುವವಳ ವಿವಾಹ ಕರೇಕಲ್ಲಹಳ್ಳಿಯ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಗುರು ಹಿರಿಯರ ನಿಶ್ಚಯಿಸಿದಂತೆ ವಿದುರಾಶ್ವತ್ಥ ಗ್ರಾಮದ ಚನ್ನರಾಯಸ್ವಾಮಿ ಕಲ್ಯಾಣ ಮಂಟಪದಲ್ಲಿ ರಾತ್ರಿ ಆರತಕ್ಷತೆಯೂ ನೆರವೇರಿತ್ತು. ಆದರೆ ರಾತ್ರೋರಾತ್ರಿ ವಧು ತನ್ನ ಪ್ರಿಯಕರ ಸೋದರ ಮಾವ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾಳೆ. ಇದರಿಂದ ನಡೆಯಬೇಕಿದ್ದ ಮದುವೆ ಮುರಿದುಬಿದ್ದಿದೆ. ಹೀಗಾಗಿ ವರನ ಸಂಬಂಧಿಕರು ಗೌರಿಬಿದನೂರು ಗ್ರಾಮಾಂತರ ಪೊಲೀಸರ ಮೊರೆ ಹೋಗಿದ್ದು ವಧು ನಾಪತ್ತೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಸದ್ಯ ವಧುವರರ ಸಂಬಂಧಿಕರು ಪೊಲೀಸ್ ಠಾಣೆ ಬಳಿ ಸೇರಿದ್ದು. ಪರಾರಿಯಾದ ವಧು ಹಾಗೂ ಪ್ರಿಯಕರ ಪ್ರವೀಣ್ ಸಹ ಠಾಣೆಗೆ ಬರುವುದಾಗಿ ತಿಳಿಸಿದ್ದಾರೆ.

ಮೈಸೂರಲ್ಲಿ ಮದುವೆ ಮಂಟಪದಲ್ಲಿ ವಧು ಹೈಡ್ರಾಮ!

ತಾಳಿ ಕಟ್ಟುವ ಶುಭವೇಳೆಯಲ್ಲಿ ವಧು ಕುಸಿದು ಬಿದ್ದಂತೆ ನಟಿಸಿ ನಂತರ ನನಗೆ ಮದುವೆ ಬೇಡ. ನಾನು ನನ್ನ ಪ್ರಿಯಕರನನ್ನೇ ಮದುವೆಯಾಗುತ್ತೇನ ಎಂದು ಮದುವೆ ಮಂಟಪದಲ್ಲಿ ವಧು ಹೈಡ್ರಾಮ ನಡೆದಿದೆ. ಸಾಂಸ್ಕೃತಿಕ ನಗರಿ ಮೈಸೂರನಲ್ಲಿ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮೈಸೂರಿನ ಸುಣ್ಣದಕೇರಿ ನಿವಾಸಿಯಾಗಿರುವ ವಧು ಸಿಂಚನ ಮತ್ತು ಎಚ್.ಡಿ.ಕೋಟೆಯ ಯುವಕನ ಜೊತೆ ಮದುವೆ ನಡೆಯಬೇಕಿತ್ತು. ಆದರೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮುರಿದು ಬಿದ್ದಿದೆ.

ಚಿಕ್ಕಬಳ್ಳಾಪುರಕ್ಕೆ ಇಎಸ್ಐ ಆಸ್ಪತ್ರೆ; ಕೇಂದ್ರದ ಒಪ್ಪಿಗೆಚಿಕ್ಕಬಳ್ಳಾಪುರಕ್ಕೆ ಇಎಸ್ಐ ಆಸ್ಪತ್ರೆ; ಕೇಂದ್ರದ ಒಪ್ಪಿಗೆ

ವಧು ಸಿಂಚನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಇದಕ್ಕೆ ಕಾರಣ ಸಿಂಚಿನ ಪ್ರಿಯಕರ ತನ್ನ ಪ್ರಿಯತಮೆಯನ್ನು ನೀನು ಮದುವೆಯಾಗಬೇಡ ಎಂದು ಸಂದೇಶ ಕಳುಹಿಸಿದ್ದ. ಇದನ್ನು ನೋಡಿದ ವರನ ಕಡೆಯವರು ವಧುವನ್ನು ಪ್ರಶ್ನಿಸಿದ್ದಾರೆ.

Bride Elopes with Lover from the Wedding Hall in Gouribidanuru

ನಂತರ ಮದುವೆಗೆ ಖರ್ಚು ಮಾಡಿದ್ದ 5ಲಕ್ಷ ರೂಪಾಯಿ ಹಣವನ್ನು ಕಟ್ಟಿಕೊಡುವಂತೆ ಆಗ್ರಹಿಸಿ ವರನ ಕಡೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇನ್ನೂ ಕೆ.ಆರ್.ಠಾಣೆ ಪೊಲೀಸರ ಮಧ್ಯಸ್ಥಿಕೆಯಲಲ್ಇ ಪ್ರಕರಣ ಸುಖಾಂತ್ಯ ಕಂಡಿದ್ದು ಮದುವೆಗೆ ಖರ್ಚು ಮಾಡಿದ್ದ ಹಣವನ್ನು ಕೊಡಲು ವಧುವಿನ ಕಡೆಯವರು ಒಪ್ಪಿಕೊಂಡು ಹಣ ನೀಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
A bride has run away with her lover from the wedding hall, leaving the groom perplexed. This was after reception ceremony and night before wedding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X