ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್ ಚುನಾವಣೆ; ಒಳ ಒಪ್ಪಂದದ ರಹಸ್ಯ ಬಿಚ್ಚಿಟ್ಟ ಎಚ್‌ಡಿಕೆ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ನವೆಂಬರ್ 26; "ಕೋಲಾರ-ಚಿಕ್ಕಬಳ್ಳಾಪುರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಒಳ ಒಪ್ಫಂದ ಮಾಡಿಕೊಂಡಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

Recommended Video

ರಾಜ್ಯದಲ್ಲಿ ACB ದಾಳಿ ಬಗ್ಗೆ B S Yediyurappa ಹೇಳಿಕೆ | Oneindia Kannada

ಶುಕ್ರವಾರ ಚಿಕ್ಕಬಳ್ಳಾಪುರದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಕೋಲಾರ-ಚಿಕ್ಕಬಳ್ಳಾಪುರ ಅಭ್ಯರ್ಥಿ ವಕ್ಕಲೇರಿ ರಾಮು ಪರವಾಗಿ ಪ್ರಚಾರ ನಡೆಸಲು ಕುಮಾರಸ್ವಾಮಿ ಆಗಮಿಸಿದ್ದರು. ಡಿಸೆಂಬರ್ 10ರಂದು ಮತದಾನ ನಡೆಯಲಿದ್ದು, 14ರಂದು ಮತ ಎಣಿಕೆ ನಡೆಯಲಿದೆ.

ಪರಿಷತ್; ರಾತ್ರೋರಾತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿ! ಪರಿಷತ್; ರಾತ್ರೋರಾತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿ!

ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕೊಡಗು ವಾಪಸ್ ಪಡೆದಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರು, ರಾಮನಗರ, ಮಂಡ್ಯ ಸೇರಿದಂತೆ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕಿದ್ದೇವೆ" ಎಂದರು.

ಪರಿಷತ್ ಫೈಟ್; ಸರ್ಕಾರಿ ಅಧಿಕಾರಿ ಕೈಯಲ್ಲಿ ಕಾಂಗ್ರೆಸ್ ಬಿ-ಫಾರಂ! ಪರಿಷತ್ ಫೈಟ್; ಸರ್ಕಾರಿ ಅಧಿಕಾರಿ ಕೈಯಲ್ಲಿ ಕಾಂಗ್ರೆಸ್ ಬಿ-ಫಾರಂ!

BJP Congress Alliance In MLC Election Alleged HD Kumaraswamy

"ಈ ಚುನಾವಣೆಯಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಕೆಲ ಕಾಂಗ್ರೆಸ್ ನಾಯಕರು ಆರೋಪಿಸಿರುವುದು ಸುಳ್ಳು. ನಾವು ಒಳ ಒಪ್ಪಂದ ಮಾಡಿಕೊಂಡಿದ್ದರೆ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಏಕೆ ಹಾಕಿದ್ದೇವೆ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಪರಿಷತ್ ಫೈಟ್; ಕುಟುಂಬ ರಾಜಕೀಯದ ಬಗ್ಗೆ ಬಿಜೆಪಿ ಟ್ವೀಟ್! ಪರಿಷತ್ ಫೈಟ್; ಕುಟುಂಬ ರಾಜಕೀಯದ ಬಗ್ಗೆ ಬಿಜೆಪಿ ಟ್ವೀಟ್!

"2019ರ ಲೊಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಬಿಜೆಪಿ‌ ಅಭ್ಯರ್ಥಿಯನ್ನು ‌ಗೆಲ್ಲಿಸಿದರು. ಆ ಋಣ ತೀರಿಸಲೆಂದು ಈಗ ಬಿಜೆಪಿ ಅಲ್ಲಿ ಅಭ್ಯರ್ಥಿ‌ಯನ್ನು‌ ನಿಲ್ಲಿಸಿಕೊಂಡಿದ್ದಾರೆ. ಇಂತಹ ವಿಶೇಷ ‌ರಾಜಕಾರಣ‌ ಈ‌ ಜಿಲ್ಲೆಗಳಲ್ಲಿ ‌ನಡೆಯುತ್ತೆ" ಎಂದು ತಿಳಿಸಿದರು.

"ಕೋಲಾರ ಲೋಕಸಭೆ ಚುನಾವಣೆಯಲ್ಲಿ 6 ಬಾರಿ ಗೆದ್ದಿದ್ದ ದಲಿತ ಲೋಕಸಭಾ ಸದಸ್ಯರನ್ನು ಹಾಗೂ ವೀರಪ್ಪ ಮೊಯ್ಲಿ ಸೋಲಿಸಲು ಕಾಂಗ್ರೆಸ್ ಮುಖಂಡರು ಕಾರಣ" ಎಂದು ಕುಮಾರಸ್ವಾಮಿ ಆರೋಪ ಮಾಡಿದರು.

"ಉತ್ತರ ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ನಿರ್ಣಾಯಕವಾಗುತ್ತದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಹಿರಂಗವಾಗಿ ಜೆಡಿಎಸ್ ಬೆಂಬಲ ಕೋರಿ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗೆ ಬೆಂಬಲ ನೀಡುವ ನಿರ್ಣಯ ತೆಗೆದುಕೊಳ್ಳುತ್ತೇವೆ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

"2019ರ ಲೋಕಸಭಾ ‌ಚುನಾವಣೆಯಲ್ಲಿ ಮೈತ್ರಿಬೇಡ ಎಂದು ಹೇಳಿದ್ದೆ. ಆದರೆ ದೇವೇಗೌಡರನ್ನು ಮನವೊಲಿಸಿ ಮೈತ್ರಿ ಮಾಡಿಕೊಂಡರು. ಇನ್ನೂ ಕೆ. ‌ಎಚ್. ಮುನಿಯಪ್ಪ, ಮೊಯ್ಲಿ‌ ಸೋಲಿಸಿದ್ದು ಕಾಂಗ್ರೆಸ್‌ನವರು. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸಂಪೂರ್ಣ ಸಹಕಾರ ನೀಡಿತ್ತು. ಆದರೆ ನಮ್ಮ ಕತ್ತು ಕೊಯ್ದಿದ್ದು ಮಾತ್ರ ಕಾಂಗ್ರೆಸ್ ಪಕ್ಷದವರು" ಎಂದು ಕುಮಾರಸ್ವಾಮಿ ದೂರಿದರು.

ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಕೆ. ಎನ್. ವೇಣುಗೋಪಾಲ್ ಮತ್ತು ಕಾಂಗ್ರೆಸ್‌ನಿಂದ ಎಂ. ಎಲ್. ಅನಿಲ್ ಕುಮಾರ್ ಅಭ್ಯರ್ಥಿಯಾಗಿದ್ದಾರೆ.

ಬೆಳೆ ಹಾನಿ; ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಬಗ್ಗೆ ಮಾತನಾಡಿದ ಕುಮಾರಸ್ವಾಮಿ "ಶಿಢ್ಲಘಟ್ಟದ ಮೇಲೂರಿನ ರವಿಕುಮಾರ್ ಮನೆಗೆ ಭೇಟಿ, ನೀಡಿ ಸ್ವಾಂತನ ಹೇಳಲು ಬಂದಾಗ ರಸ್ತೆ ಬದಿ ಬೆಳೆ ನೆಲಕ್ಕಚ್ಚಿರುವುದನ್ನು ನೋಡಿದ್ದೇನೆ. ರಾಜ್ಯದಲ್ಲಿ ವಾಣಿಜ್ಯ, ತೋಟಗಾರಿಕೆ ಬೆಳೆಗಳು, ಹೂ, ದ್ರಾಕ್ಷಿ, ಕಾಫಿ ಇತರ ಬೆಳೆಗಳು ನಾಶವಾಗಿ ಅನ್ನದಾತನಿಗೆ ನಷ್ಟವಾಗಿದೆ" ಎಂದರು.

"ರಸ್ತೆ ಬದಿ ವ್ಯಾಪಾರಿಗಳು ಸಹ ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಕೂಡಲೇ ನಿಯಮ ಬದಿಗಿಟ್ಟು ರೈತ ಖರ್ಚು ಮಾಡಿರುವ ಹಣ ನೀಡಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಕಬ್ಬು ಬೆಳೆಗಾರರಿಗೆ ಹೆಕ್ಟೇರ್‌ಗೆ 25,000 ರೂ. ನಂತೆ 240 ಕೋಟಿ ನೀಡಿದ್ದೇನೆ" ಎಂದು ಹೇಳಿದರು.

"ಬೆಂಗಳೂರಿನ‌ ಕೊಳಚೆ ನೀರನ್ನು ಶುದ್ಧೀಕರಿಸದೆ ಬಿಡಬೇಡಿ ಎಂದು ಹೇಳಿದ್ದೆ. ಆದರೆ ಕೊಳಚೆ ನೀರನ್ನು ಬಿಟ್ಟು ವಿಷಮಯ ಮಾಡುತ್ತಿದ್ದಾರೆ. ಸದ್ಯ ಕೋಲಾರ, ಚಿಕ್ಕಬಳ್ಳಾಪುರ ತರಕಾರಿಗಳನ್ನು ಕೊಳ್ಳಲು ಜನರು ಹಿಂದೆ-ಮುಂದೆ ನೋಡುತ್ತಿದ್ದಾರೆ" ಎಂದು ಕುಮಾರಸ್ವಾಮಿ ಆರೋಪಿಸಿದರು.

English summary
BJP and Congress alliance in legislative council election alleged former chief minister of Karnataka H. D. Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X