ಬಾಗೇಪಲ್ಲಿ ಶಾಸಕರು ಕ್ಷೇತ್ರದ ಅಭಿವೃದ್ಧಿಗಿಂತ ಬೇನಾಮಿ ಆಸ್ತಿ ಸಂಪಾದನೆಗೆ ಹೆಚ್ಚಿನ ಆದ್ಯತೆ ನೀಡ್ತಾರೆ: ಸಿ.ಮುನಿರಾಜು
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಬೇನಾಮಿ ಆಸ್ತಿಗಳನ್ನು ಸಂಪಾದಿಸುವಲ್ಲಿ ನಿರತರಾಗಿದ್ದಾರೆ ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸಿ.ಮುನಿರಾಜು ಆರೋಪಿಸಿದರು.
ಚಿಕ್ಕಬಳ್ಳಾಪುರ, ಮಾರ್ಚ್, 16: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಸರ್ಕಾರಗಳಿಂದ ಅನುದಾನ ತರಬಹುದಿತ್ತು. ಆದರೆ ಅವರು ಭ್ರಷ್ಟಾಚಾರ, ಅವ್ಯವಹಾರಗಳಲ್ಲಿ ತೊಡಗಿಸಿಕೊಂಡು ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡಿ, ಬೇನಾಮಿ ಆಸ್ತಿಗಳನ್ನು ಸಂಪಾದಿಸುವಲ್ಲಿ ನಿರತರಾಗಿದ್ದಾರೆ ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸಿ.ಮುನಿರಾಜು ಆರೋಪಿಸಿದರು.
ಸರ್ವಾಂಗೀಣ ಅಭಿವೃದ್ಧಿ ಮಾಡಲಿದೆ
ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿದರೆ ತ್ರಿಬಲ್ ಇಂಜಿನ್ ಸರ್ಕಾರ ಬಾಗೇಪಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಲಿದೆ. ಈ ಮೂಲಕ ಸಂಪೂರ್ಣವಾಗಿ ಕ್ಷೇತ್ರವನ್ನು ಬದಲಾಯಿಸಲಾಗುವುದೆಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸಿ.ಮುನಿರಾಜು ತಿಳಿಸಿದರು.

ಘಟಾನುಘಟಿ ನಾಯಕರು ಭಾಗಿ
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ವಿಜಯ ಸಂಕಲ್ಪಯಾತ್ರೆಯಲ್ಲಿ ಬಿಜೆಪಿ ಪಕ್ಷದ ಘಟಾನುಘಟಿ ನಾಯಕರಾದ ಡಾ.ಅಶ್ವತ್ಥ್ ನಾರಾಯಣ್, ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ಪಿ.ಸಿ.ಮೋಹನ್ ಸೇರಿದಂತೆ ಪಕ್ಷದ ನೂರಾರು ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬೃಹತ್ ಹಾರವನ್ನು ಹಾಕಲಾಯಿತು. ಪಟ್ಟಣದ ಪ್ರಮುಖ ಬೀದಿಯಲ್ಲಿ ಸುಮಾರು 2 ಗಂಟೆಗಳ ಕಾಲ ಸಾಗಿದ ಯಾತ್ರೆಯು ತಿರುಮಲ ನಗರದ ಬಳಿ ಮುಕ್ತಾಯಗೊಳಿಸಲಾಯಿತು.
ಬಿಜೆಪಿ ಇತಿಹಾಸವನ್ನು ನಿರ್ಮಿಸಲಿದೆ
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ವಿಜಯಪತಾಕೆ ಹಾರಿಸುವ ಮೂಲಕ ತ್ರಿಬಲ್ ಇಂಜಿನ್ ಸರ್ಕಾರವು ಅಭಿವೃದ್ಧಿಯ ಇತಿಹಾಸವನ್ನು ನಿರ್ಮಿಸಲಿದೆ. ಗುಡಿಬಂಡೆ ತಾಲೂಕಿನ ಸುಮಾರು 69 ಬೂತ್‌ಗಳಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಾಗರೋಪಾದಿಯಲ್ಲಿ ಜನರನ್ನು ಕಾರ್ಯಕ್ರಮಕ್ಕೆ ಸೇರಿಸುವ ಮೂಲಕ ಸ್ಥಳಿಯ ಶಾಸಕರಿಗೆ ನಡುಕ ಹುಟ್ಟಿಸಲಾಗಿದೆ ಎಂದರು.

ನಾವು ಮುಸ್ಲಿಂ ಸಮುದಾಯದವರಿಗೆ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ನೀಡಿದ್ದೆವೆ. ಇದು ನಮ್ಮ ಬದ್ಧತೆಯಾಗಿದೆ ಎಂದರು. ಹಾಗೆಯೇ ಮುಂದಿನ ದಿನಗಳಲ್ಲಿ ಶಾಸಕರಿಗೆ ಸೋಲುಣಿಸುವ ಮೂಲಕ ದರ್ಗಾ ಒಂದನ್ನು ಕಟ್ಟಿಸಿ ಅಲ್ಲಾ ಕೂಗಲು ಕಳುಹಿಸಿಬಿಡೋಣ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿನ ಯುವಕರಿಗೆ ಹಾಗೂ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಲು 4ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಮಹಿಳೆಯರಿಗಾಗಿ ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಸ್ಥಳಿಯವಾಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿ, ಹೊರ ಜಿಲ್ಲೆಗಳಿಂದ ಬಾಗೇಪಲ್ಲಿಗೆ ಉದ್ಯೋಗ ಅರಸಿ ಬರುವಂತೆ ಮಾಡಲಾಗುತ್ತದೆ ಎಂದರು.
ಬಯಲುಸೀಮೆ ಪ್ರದೇಶದ ಹಲವು ವರ್ಷಗಳ ಬೇಡಿಕೆಯಾದ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡಲು ನಿರ್ಧರಿಸಿದ್ದೇವೆ. ಕೃಷ್ಣಾನದಿಯ ನೀರನ್ನು ತರುವ ಕೆಲಸವನ್ನು ಮುಂದಿನ 5 ವರ್ಷಗಳಲ್ಲಿ ಮಾಡಲಾಗುವುದು. ಹಾಗೆಯೇ ರೈತರ ಅಭಿವೃದ್ಧಿಗಾಗಿ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುವುದು. ಅದಕ್ಕಾಗಿ ನೀರನ್ನು ಶೇಖರಿಸಲು ಬೇಕಾಗುವಷ್ಟು ದೊಡ್ಡ ಡ್ಯಾಂಗಳನ್ನು ನಿರ್ಮಿಸಲಾಗುತ್ತದೆ. ಮತ್ತು ರೈತರು ಬೆಳೆದ ಕೃಷಿ ಬೆಳೆಗಳನ್ನು ಸಂರಕ್ಷಣೆ ಮಾಡಲು ಬೇಕದ ಕ್ಲೋಡ್ ಸ್ಟೋರೇಜ್ ಘಟಕಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತದೆ ಎಂದರು.
ಚಾಣಾಕ್ಷನ ನೀತಿಯಂತೆ ದೇಶ ಸುಭದ್ರ ವ್ಯಕ್ತಿಯ ಕೈಯಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ವಿಶ್ವದಲ್ಲಿ ಎಲ್ಲೂ ಇಲ್ಲದಿರುವ ಲೀಥಿಯಂ ನಿಕ್ಷೇಪ ಜಮ್ಮು ಕಾಶ್ಮೀರದಲ್ಲಿ ದೊರೆತಿದೆ. ಇದು ವಿಶ್ವದ ಶ್ರೀಮಂತ ರಾಷ್ಟ್ರವಾಗಲು ಸಹಕಾರಿಯಾಗಲಿದೆ. ಮುಂದಿನ ದಿನಗಳನ್ನು ದೇಶದಲ್ಲಿ ನಮ್ಮ ರಾಜ್ಯ ನಂಬರ್ 1 ಸ್ಥಾನವನ್ನು ಪಡೆಯಲಿದೆ. ಅದೇ ರೀತಿ ಜಿಲ್ಲೆಯಲ್ಲಿ ಬಾಗೇಪಲ್ಲಿ ನಂಬರ್ 1 ಆಗಿ ಅಭಿವೃದ್ಧಿ ಹೊಂದಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ ನಾಗರಾಜ್ ಮಾತನಾಡಿ, ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಮೂಲಕ ವಿಜಯ ಪತಾಕೆ ಹಾರಿಸುವಂತೆ ಮನವಿ ಮಾಡಿದರು.
ಕುಣಿದು ಕುಪ್ಪಳಿಸಿದ ನಾಯಕರು
ವಿಜಯ ಸಂಕಲ್ಪ ಯಾತ್ರೆಯ ಸಂಧರ್ಭದಲ್ಲಿ ಮುಖಂಡರಾದ ಸಿ.ಮುನಿರಾಜು ಹಾಗೂ ರಾಮಲಿಂಗಪ್ಪ ಅವರನ್ನು ಅಭಿಮಾನಿಗಳು ಯಾತ್ರೆಯ ಉದ್ದಗಲಕ್ಕುೂ ಭುಜದ ಮೇಲಿ ಹೊತ್ತುಕೊಡು ನೃತ್ಯ ಮಾಡಿದರು. ಇದೇ ಸಂದರ್ಭದಲ್ಲಿ ಮುಖಂಡರು ಸಹ ಕುಣಿದು ಕುಪ್ಪಳಿಸಿದರು. ಆದರೆ ಈ ವೇಳೆ ಯಾರು ಮಾತನಾಡಿಸದ ಕಾರಣ ಟಿ.ಕೋನಪ್ಪರೆಡ್ಡಿ ಸಚಿವರ ಜೊತೆಯಲ್ಲೇ ಹೊರಟು ಹೋದರು.












Click it and Unblock the Notifications