ಕುಶಾವತಿ ನದಿ ನೀರು ಅಂಧ್ರಕ್ಕೆ ಹೋಗುವುದನ್ನು ತಪ್ಪಿಸಿ- ಚಿಕ್ಕಬಳ್ಳಾಪುರ ರೈತರ ಮನವಿ
ಚಿಕ್ಕಬಳ್ಳಾಪುರ ಅಕ್ಟೋಬರ್ 27: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ನುಲಿಗುಂಬ, ಯರ್ರಹಳ್ಳಿ, ಗುಂಡ್ಲಹಳ್ಳಿ, ನಲ್ಲಗೊಂಡಯ್ಯಗಾರಹಳ್ಳಿ, ಪುಲಸಾನಿವೊಡ್ಡು, ಹಂಪಸಂದ್ರ, ಬೆಣ್ಣೆಪರ್ತಿ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಕುಶಾವತಿ ನದಿ ನೀರಿನಿಂದ ಬಹಳಷ್ಟು ಅನುಕೂಲವಾಗುತ್ತಿದ್ದೂ ರೆಸಾರ್ಟ್ ಹಾಗೂ ಫಾರ್ಮ್ ಹೌಸ್ ಮಾಲೀಕರು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಕುಶಾವತಿ ನದಿ ನೀರು ಆಂಧ್ರ ರಾಜ್ಯದ ಪಲಾಗುತ್ತಿದ್ದೂ ತಡೆಯಬೇಕೆಂದು ಕೋರಿ ಹಲವು ಗ್ರಾಮಗಳ ಮುಖಂಡರು ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಕಚೇರಿಯ ತಹಸೀಲ್ದಾರ್ ಕೊಠಡಿಯಲ್ಲಿ ಜಮಾಯಿಸಿದ ಹಲವು ಗ್ರಾಮಗಳ ರೈತರು, ಮುಖಂಡರು ಸೇರಿ ಗುಡಿಬಂಡೆ ಪಟ್ಟಣದ ಅಮಾನಿಭೈರಸಾಗರ ಕೆರೆ ಕೋಡಿ ಹರಿಯುತ್ತಿದ್ದು ಕುಶಾವತಿ ನದಿ ನೀರು ಯಥೇಚ್ಛ ಪ್ರಮಾಣದಲ್ಲಿ ಪೋಲಾಗುತ್ತಿದೆ ಇದಕ್ಕೆಲ್ಲಾ ಕಾರಣ ಕುಶಾವತಿ ನದಿ ನೀರು ಹರಿಯುವ ರಾಜಕಾರಣಿಗಳನ್ನ ಒತ್ತುವರಿ ಮಾಡಿಕೊಂಡು ನೀರು ತಾಲೂಕಿನ ಹಲವು ಕೆರೆಗಳಿಗೆ ಹರಿಯುವುದನ್ನು ತಪ್ಪಿಸಿದ್ದು ಕೂಡಲೇ ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆಗಳನ್ನು ತೆರವು ಮಾಡಿಸುವಂತೆ ಆಗ್ರಹಿಸಿದರು.

ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಕುಶಾವತಿ ನದಿ ಹರಿಯುತ್ತಿದ್ದು, ಈ ನೀರು ಹರಿಯುವ ಅನೇಕ ಕಾಲುವೆಗಳು ಒತ್ತುವರಿಯಾಗಿದೆ. ಇದರಿಂದಾಗಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ಅದರ ಬದಲು ರಾಜಕಾಲುವೆಯ ಒತ್ತುವರಿ ತೆರವುಗೊಳಿಸಿದರೇ ಆ ನೀರು ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಈ ಕುರಿತು ಕ್ರಮ ವಹಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ನುಲಿಗುಂಬ ಸೇರಿದಂತೆ ಹಲವು ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಕುಶಾವತಿ ನದಿ ಹರಿಯುವ ನೀರು ತಾಲೂಕಿನ ಸುಮಾರು 4 ಕೆರೆಗಳಿಗೆ ಜೀವನದಿಯಾಗಿದೆ. ಕೆರೆಗಳಿಗೆ ನೀರು ತುಂಬಿಸಲು ಪೂರ್ವಜರು ರಾಜಕಾಲುವೆಗಳ ನ್ನು ಸಹ ನಿರ್ಮಿಸಿದ್ದಾರೆ ಆದರೆ ಕೆಲ ರಿಯಲ್ ಎಸ್ಟೇಟ್ ಮಾಲೀಕರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ, ಇದಕ್ಕೆ ತಾಜಾ ಉದಾಹರಣೇ ಎಂದರೆ ವಿಜಯರೆಡ್ಡಿ ಫಾರ್ಮಾ ಬಳಿ ರಾಜಕಾಲುವೆ ಮುಚ್ಚಿಹಾಕಿದ್ದಾರೆ. ರೆಸಾರ್ಟ್ ನಿರ್ಮಾಣ ಮಾಡಲು ರಾಜಕಾಲುವೆ ಒತ್ತುವರಿಯಾಗಿದೆ, ಕುಶಾವತಿ ನದಿ ಹರಿಯುವ ರಾಜಕಾಲುವೆ ಅಕ್ಕ ಪಕ್ಕ ರೈತರು ಸಹ ಒತ್ತುವರಿ ಮಾಡಿಕೊಂಡಿದ್ದು, ಕೆರೆಗಳಿಗೆ ನೀರು ಹರಿದು ಬರುವ ಬದಲು ನೀರು ಆಂಧ್ರಪ್ರದೇಶದ ಕಡೆ ಹರಿಯುತ್ತಿದೆ ಎಂದರು.

ಎಷ್ಟೇ ಮಳೆಯಾದರು ಸಹ ಕೆರೆಗಳಿಗೆ ನೀರು ಹರಿಯದೇ ಇರುವ ಕಾರಣದಿಂದ, ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗಿದೆ, ಕೊಳವೆ ಬಾವಿಗಳು ಬತ್ತಿಹೋಗಿದೆ. ಈ ಕೆರೆಗಳಿಗೆ ನೀರು ತುಂಬಿದರೆ ರೈತರಿಗೆ, ಧನ ಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಅನುಕೂಲ ಆಗುತ್ತದೆ ಆದರೆ ಅಕ್ಕಪಕ್ಕದ ಕೆಲ ರೈತರು ಹಾಗೂ ರೆಸಾರ್ಟ್‌ನವರು ಅವರು ಕಾಮಗಾರಿ ಮಾಡುವ ಸಂದರ್ಭದಲ್ಲಿ ಸದರಿ ಕಾಲುವೆಯನ್ನು ನಾಶಪಡಿಸಿರುವುದರಿಂದ ನೀರು ಕಾಲುವೆಯಲ್ಲಿ ಹರೆಯದೆ ಪೋಲಾಗುತ್ತಿರುತ್ತದೆ ಎಂದರು.
ಕೂಡಲೇ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಿ ರಾಜಕಾಲುವೆಯಲ್ಲಿ ಹೂಳು ತೆಗೆಸಿ ಸರಿಪಡಿಸಿದಲ್ಲಿ ರೈತರ ಕೊಳವೆಬಾವಿಗಳು ಹಾಗೂ ಅರಣ್ಯ ಪಕ್ಕದಲ್ಲಿರುವ ಕೆರೆಗಳಿಂದ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುತ್ತದೆಂದು ಮನವಿ ಸಲ್ಲಿಸಿದರು. ಈ ವೇಳೆ ವಿವಿಧ ಗ್ರಾಮಗಳ ಮುಖಂಡರಾದ ಸುದರ್ಶನ್ ರೆಡ್ಡಿ, ಬಾಬುರೆಡ್ಡಿ, ಮುರಳಿ, ನಾರಾಯಣಸ್ವಾಮಿ, ನಾಗರಾಜಪ್ಪ, ನರಸಿಂಹಮೂರ್ತಿ, ಕೃಷ್ಣಪ್ಪ ಸೇರಿದಂತೆ ಹಲವರು ಇದ್ದರು.












Click it and Unblock the Notifications