Pradeep Eshwar: ಚಿಕ್ಕಬಳ್ಳಾಪುರದಲ್ಲಿ ಇಂದಿನಿಂದ 'ಅಮ್ಮ ಆಂಬ್ಯುಲೆನ್ಸ್' ಸೇವೆ ಪ್ರಾರಂಭ, ಪ್ರದೀಪ್ ಈಶ್ವರ್ ಅವರಿಂದ ಚಾಲನೆ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್, 12: ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಪ್ರತಿ ಹೋಬಳಿಗೆ ಒಂದೊಂದು ಆಂಬ್ಯುಲೆನ್ಸ್ ಉಚಿತವಾಗಿ ಕಲ್ಪಿಸುವ ಯೋಜನೆಯನ್ನು ಘೋಷಣೆ ಮಾಡಿದ್ದರು. ಅದರಂತೆಯೇ ಶಾಸಕರಗಿ ಗೆದ್ದು ಮೂರು ತಿಂಗಳು ಕಳೆದು, ತಮ್ಮ ತಾಯಿಯ ಜನ್ಮ ದಿನವಾದ ಇಂದು (ಸೆಪ್ಟೆಂಬರ್ 12) ಕ್ಷೇತ್ರದ ಜನರಿಗೆ ಶಾಸಕ ಪ್ರದೀಪ್ ಈಶ್ವರ್ ಅವರು ಅಮ್ಮ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡುರುವ ಅವರು ಸೆಪ್ಟೆಂಬರ್ 12ರಂದು ನನ್ನ ತಾಯಿಯ ಹುಟ್ಟು ಹಬ್ಬದ ಅಂಗವಾಗಿ ಅಮ್ಮ ಹೆಸರಿನ ಐದು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸುತ್ತಿದ್ದು, ಇದು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರವಲ್ಲ ಅಶಕ್ತರಿಗೆ ದಿನವಿಡೀ ಲಭ್ಯವಾಗಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಗರ ಹೊರವಲಯದ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕ್ರಮದಲ್ಲಿ ತಂದೆ-ತಾಯಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟರು. ಹೀಗಾಗಿ ನನ್ನ ಕ್ಷೇತ್ರದ ಯಾರಿಗೂ ಕೂಡ ಅಂತಹ ಪರಿಸ್ಥಿತಿ ಬರಬಾರದು ಎಂಬ ಕಾರಣಕ್ಕೆ ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಇರುವ 5 ಆಂಬ್ಯುಲೆನ್ಸ್‌ಗಳನ್ನು ಸೇವೆಗೆ ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದರು.
ಕೇವಲ ತುರ್ತು ಸಂದರ್ಭಗಳಲ್ಲಿ ಮಾತ್ರವಲ್ಲ, ಅಶಕ್ತರಿಗೆ ಆಸ್ಪತ್ರೆಗೆ ಬರಲಾಗದಂತಹ ಸ್ಥಿತಿ ಇದ್ದರೂ, ಆಂಬ್ಯುಲೆನ್ಸ್ ಸೇವೆಯನ್ನು ಬಳಸಿಕೊಳ್ಳಬಹುದು. ಪ್ರತಿ ತಿಂಗಳು ನನಗೆ 10 ಲಕ್ಷ ರೂಪಾಯಿ ಖರ್ಚು ಬರಲಿದೆ. ಆದರೆ ನನ್ನ ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗಾಗಿ ಈ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಸೆಪ್ಟೆಂಬರ್ 12ರಂದು ಬೆಳಗ್ಗೆ 10 ಗಂಟೆಗೆ ನಂದಿಯ ಶ್ರೀ ಭೋಗನಂದೀಶ್ವರ ದೇಗುಲದಲ್ಲಿ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಲಿದ್ದು, ಆನಂತರ ಮಂಚೇನಹಳ್ಳಿ ಸರಕಾರಿ ಆಸ್ಪತ್ರೆ 'ಆಚರಣ, ಚಿಕ್ಕಬಳ್ಳಾಪುರ ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ ತನ್ನ ಹುಟ್ಟುರಾದ ಪೆರೇಸಂದ್ರ ಗ್ರಾಮದಲ್ಲಿ ಒಟ್ಟು 5 ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.












Click it and Unblock the Notifications