ಕನ್ನಡ ಭವನ ನಿರ್ಮಾಣಕ್ಕೆ 25 ಲಕ್ಷ ಅನುದಾನ- ಶಾಸಕ ಎಸ್‌ಎನ್ ಸುಬ್ಬಾರೆಡ್ಡಿ
ಗುಡಿಬಂಡೆ ಫೆಬ್ರವರಿ 23: ಕನ್ನಡ ಭವನ ನಿರ್ಮಾಣಕ್ಕೆ 25 ಲಕ್ಷ ಅನುದಾನ ನೀಡುವುದಾಗಿ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಅತೀ ಹೆಚ್ಚು ಕನ್ನಡ ಕವಿಗಳಿದ್ದು, ಇಂತಹವರಿಂದ ಕನ್ನಡ ಮತ್ತಷ್ಟು ಹೆಚ್ಚು ಶಕ್ತಿಯುತವಾಗಿ ಬೆಳೆಯಲಿ ಎಂಬ ಕಾರಣದಿಂದ ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಕನ್ನಡ ಭವನ ನಿರ್ಮಾಣಕ್ಕಾಗಿ 25 ಲಕ್ಷ ಅನುದಾನ ಕಲ್ಪಿಸಲಾಗುವುದು ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಿಳಿಸಿದರು.

ಗುಡಿಬಂಡೆ ಪಟ್ಟಣದ ಬಾಲಕ ಮತ್ತು ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿರುವ ಟಿ. ಪಿ. ಕೈಲಾಸಂ ವೇದಿಕೆಯಲ್ಲಿ ನಿರ್ಮಿಸಲಾಗಿದ್ದ ಶ್ರೀ ಕೂರ್ಮಗಿರಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣ ನೆರವೇರಿಸಿ ಮಾತನಾಡಿ ಶಾಸಕನಾಗಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಾಭಿಮಾನಿಗಳಿಗೆ ಸರಕಾರದಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಕೆಲಸ ಮಾಡಿಕೊಡುತ್ತೇನೆ ಎಂದರು.
ತಾಲೂಕಿಗೆ ಅವಶ್ಯವಿರುವ ಕ್ರೀಡಾಂಗಣ ನಿರ್ಮಾಣ, ಬಸ್ ಡಿಪೋ ನಿರ್ಮಾಣ, ಎಪಿಎಂಸಿ ನಿರ್ಮಾಣ , 17 ಕೋಟಿ ವೆಚ್ಚದಲ್ಲಿ ಅಮೃತ ಯೋಜನೆ ಮಿನೆಲಿಯಂ ಸ್ಕ್ಯಾನ್ ಅಡಿ ಮನೆ ಮನೆಗೂ ಶುದ್ಧ ಕುಡಿಯುವ ನೀರನ್ನು ಕಲ್ಪಿಸುವ ಯೋಜನೆ, ಬಾಡಿಗೆ ಕಟ್ಟಡಗಳಲ್ಲಿ ಕೆಲ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, 2 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ತಾಲೂಕು ಆಡಳಿತ ನಡೆಸಲು ಶ್ರಮವಹಿಸುತ್ತೇನೆ ಎಂದರು.
ನಂತರ ರಾಜಶೇಖರ್ ನಾಯ್ಡು ಮಾತನಾಡಿ
ಗುಡಿಬಂಡೆ ತಾಲೂಕಿನಲ್ಲಿ ಅನೇಕ ಸ್ಥಳಗಳು ಪ್ರವಾಸೋಧ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡಲು ಎಲ್ಲಾ ರೀತಿಯ ಅರ್ಹತೆಯನ್ನು ಪಡೆದುಕೊಂಡಿದ್ದು ಶಾಸಕರು ಹೆಚ್ಚಿನ ಕಾಳಜಿ ವಹಿಸಿ ಶಾಸಕರ ಭವನ ಹಾಗೂ ನಮ್ಮ ಮೆಟ್ರೋದಲ್ಲಿ ಗುಡಿಬಂಡೆ ತಾಲೂಕಿನ ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಪ್ರದರ್ಶನ ಮಾಡುವಂತೆ ಒತ್ತಾಯಿಸಿದರು. ಸಾರಿಗೆ ಸಚಿವ ರಾಮಲಿಂಗರೆಡ್ಡಿ ಬಳಿ ಒತ್ತಡ ಹಾಕಿ ಕೆಎಸ್. ಆರ್. ಟಿ. ಸಿ ಡಿಪೋ ನಿರ್ಮಾಣ ಮಾಡಿಕೊಡುವ ಭರವಸೆ ನೀಡುವಂತೆ ಅಗ್ರಹಿಸಿದರು.
ಗಾಣಿಗರಿಕೆಗೆ ವಿರೋಧ :-
ಪಂಚಗಿರಿಗಳ ಬೆಟ್ಟಗಳಲ್ಲಿ ಒಂದು ಕಲ್ಲನ್ನು ಮುಟ್ಟಲು ಬಿಡುವುದಿಲ್ಲ ಎಂದು ಘೋಷಣೆ ಮಾಡಿದ ಅವರು ಇತ್ತೀಚಿಗೆ ಪಟ್ಟಣದ ಕೂಗಳತೆ ದೂರದಲ್ಲಿರುವ ಚದುಮಲಾ ಬೆಟ್ಟದಲ್ಲಿ ಗಣಿಗಾರಿಕೆ ಮಾಡಲು ಅರ್ಜಿ ಸಲ್ಲಿಸಿರುವ ಕುರಿತು ಮಾಹಿತಿ ಬಂದಿದ್ದು ಕೂಡಲೇ ಮಾಡಿದರು.
6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸ.ನಾ. ನಾಗೇಂದ್ರ ಮಾತನಾಡಿ ಮೊದಲಿಗೆ ನಮ್ಮ ಗುಡಿಬಂಡೆಗೆ ಹೆಸರು ಬರಲು ಕಾರಣ ಗುಡಿಯ ಮೇಲೆ ಬಂಡೆ ಇರುವುದಕ್ಕೆ ಗುಡಿಬಂಡೆ ಎಂಬ ಹೆಸರು ಬಂದಿದ್ದು, ನಮ್ಮ ಗುಡಿಬಂಡೆಯಲ್ಲಿ ಪಂಚ ಕಲ್ಯಾಣ ಗಳನ್ನು ಹೊಂದಿದ್ದು ಪಂಚ ವೈಶಿಷ್ಟಗಳನ್ನು ಹೊಂದಿರುವ ತಾಲೂಕು ನಮ್ಮ ಗುಡಿಬಂಡೆ ಎಂದರು.

16ನೇಯ ಶತಮಾನದಲ್ಲಿ ಈ ಭಾಗವನ್ನು ಆಳಿದ ಹಾಗೂ ಈ ಊರಿನ ನಿರ್ಮಾಪಕರಾದ ಆವಳಿ ಬೈರೇಗೌಡರು ಭಾರತದ ಭೂಪಟವನ್ನು ಹೋಲುವಂತ ಅಮಾನಿಬೈರಸಾಗರ ಕೆರೆಯನ್ನು ನಿರ್ಮಿಸಿದ್ದಾರೆ, ಇನ್ನು ಸಾವಿರ ವರ್ಷಗಳ ಇತಿಹಾಸ ಇರುವ ಜೈನಬಸದಿ ಹಾಗೂ ಕೋಮುಸೌದರ್ಹತೆ ಸಾರುವಂತಹ ನಿಚ್ಚನಬಂಡಹಳ್ಳಿ ದರ್ಗ ಇವೆಲ್ಲವು ಸಹ ಗುಡಿಬಂಡೆಯ ಶ್ರೀಮಂತಿಕೆಯನ್ನು ಮತ್ತು ಕೋಮು ಸೌಹಾರ್ದತೆಯಲ್ಲಿ ಎತ್ತಿ ತೋರಲು ಅನೇಕ ಪುರಾವೆಗಳಿವೆ, ಇಂತಹ ವೇದಿಕೆಯಲ್ಲಿ ಸ್ವಾತಂತ್ರಿಯ ಪೂರ್ವದಿಂದ ಈ ಭಾಗಕ್ಕೆ ಕೊಡುಗೆ ನೀಡಿರುವ ಹಾಗೂ ಸ್ವಾತಂತ್ರಕ್ಕೆ ಹೋರಾಟ ಮಾಡಿರುವ ಶಾಮರಾಯರು ಮತ್ತು ರಾಮರಾಯರನ್ನು, ಆದಿನಾರಾಯಣಶೆಟ್ಟಿ, ಆವುಲಕೊಂಡಪ್ಪ, ಹನುಮಂತರಾವ್ ರನ್ನು ನೆನೆಯಬೇಕಾಗಿದೆಂದು ಸಭಿಕರಿಗೆ ತಿಳಿಸಿದರು.
ಕನ್ನಡ ಪರಂಪರೆ ಬಹು ಶ್ರೇಷ್ಠ:-
ನಮ್ಮ ಕನ್ನಡ ಪರಂಪರೆ ಬಹು ಶ್ರೇಷ್ಠವಾದುದು. ನಮ್ಮ ಕನ್ನಡ ಸಾಹಿತ್ಯ ಮೌಲಿಕವಾದುದು. ಈ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು. ಈ ನೆಲ, ಜಲ ಬಹಳ ಪವಿತ್ರವಾ ದುದು. ಇದನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಹೆಗಲಿಗಿದೆ. ಸಾಹಿತ್ಯ ಸಮ್ಮೇಳನ ನಾಡನ್ನು ಕಟ್ಟಲು ಒಂದು ಶ್ರೇಷ್ಠ ವೇದಿಕೆ. ಇಂತಹ ಸಮ್ಮೇಳನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಾಲೂಕಿನ ಅಭಿವೃದ್ಧಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಹೋರಾಟ ನಡೆಸಿದ ಮಹಾನುಭಾವರನ್ನು ನೆನೆಯಬೇಕು ಎಂದು ಗುಡಿಬಂಡೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸ. ನಾ. ನಾಗೇಂದ್ರ ಹೇಳಿದರು.
ಸಮ್ಮೇಳನ ಅಧ್ಯಕ್ಷರ ಹಕ್ಕೋತ್ತಾಯಗಳು : ಅಮಾನಿಬೈರಸಾಗರ ಕೆರೆಯನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾಡಬೇಕು, ನಮ್ಮ ಜವಳಿ ಗುಡಿಬಂಡೆಗೆ ಮತ್ತೆ ಸ್ಥಳಿಯ ಮಹಿಳೆಯ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜವಳಿ ಕೈಗಾರಿಕೆಗಳನ್ನು ಪ್ರಾರಂಭಿಸಬೇಕು, ಕೆ.ಎಸ್.ಆರ್.ಟಿ.ಸಿ ಬಸ್ ಘಟಕ ಪ್ರಾರಂಭಿಸಬೇಕು, ತಾಲೂಕಿನ ಅನೇಕ ಪ್ರವಾಸಿತಾಣಗಳಿದ್ದು ಅವುಗಳನ್ನು ಅಭಿವೃದ್ದಿ ಮಾಡಬೇಕೆಂದು ಒತ್ತಾಯ ಮಾಡಿದರು.
ವಿಚಾರ ಗೋಷ್ಠಿ
ವೇದಿಕೆ ಕಾರ್ಯಕ್ರಮ ನಂತರ ಬಾಗೇಪಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ 'ಗುಡಿಬಂಡೆ ಪ್ರವಾಸೋಧ್ಯಮ ಅಭಿವೃದ್ದಿಗೆ ಇರುವ ಅವಕಾಶಗಳು ಹಾಗೂ ಸವಾಲುಗಳು' ಎಂಬ ವಿಷಯದ ಬಗ್ಗೆ ವಿಚಾರ ಗೊಷ್ಠಿ ಆಯೋಜಿಸಿದ್ದು ವಿ.ಲಕ್ಷಿö್ಮÃನಾರಾಯಣ, ಸೈಯದ್ ರಫೀಕ್, ಜಿ.ವಿ.ಗಂಗಪ್ಪ ರವರು ವಿಷಯ ಮಂಡನೆ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡು ನಂತರ ಕವಿಗೋಷ್ಠಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು.












Click it and Unblock the Notifications