ಗುಡಿಬಂಡೆ ನೌಕರರ ಸಂಘಕ್ಕೆ 23 ಮಂದಿ ಅವಿರೋಧ ಆಯ್ಕೆ: ಇಂದೇ ಮತದಾನ, ಮತ ಎಣಿಕೆ ಹಾಗೂ ಫಲಿತಾಂಶ

ಚಿಕ್ಕಬಳ್ಳಾಪುರ ಆಕ್ಟೋಬರ್ 27: ರಾಜ್ಯ ಸರಕಾರಿ ನೌಕರರ ಸಂಘದ ಗುಡಿಬಂಡೆ ತಾಲೂಕು ಘಟಕಕ್ಕೆ 2024 ರಿಂದ 2029 ರ ಅವಧಿಯ ಚುನಾವಣೆಯು ಆ.28ರಂದು ನಡೆಯುವ ಚುನಾವಣೆಯಲ್ಲಿ 27 ನಿರ್ದೇಶಕ ಸ್ಥಾನಗಳ ಪೈಕಿ ವಿವಿಧ ಇಲಾಖೆಗಳಿಂದ 23 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ 4 ನಿರ್ದೇಶಕರ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ.

ಪಟ್ಟಣದ ಬಾಲಕ ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದ್ದು, ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಲಿದ್ದು ಒತ್ತು 9 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಒಟ್ಟು 196 ಜನ ಶಿಕ್ಷಕರು ಮತದಾನದ ಹಕ್ಕು ಪಡೆದಿದ್ದು ಪ್ರತಿಯೊಬ್ಬ ಮತದಾರರು ನಾಲ್ಕು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

23 unopposed elected to Gudibande Employees Union Voting today counting and result

ಸೋಮವಾರ ಬೆಳಿಗ್ಗೆ 9 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭವಾಗಲಿದ್ದು ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ನಂತರ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿಯಾದ ಕೆಪಿಎಸ್ ಶಾಲೆಯ ಪ್ರಾಂಶುಪಾಲ ಎ. ರವೀಂದ್ರ ತಿಳಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರು:

ಎ. ಕೇಶವರೆಡ್ಡಿ, ಕೃಷಿ ಇಲಾಖೆ, ಡಾ. ಡಿ.ನಟರಾಜ್, ಪಶು ಸಂಗೋಪನೆ , ಕಂದಾಯ ಇಲಾಖೆ ತಾಲೂಕು ಕಚೇರಿ ಕ್ಷೇತ್ರ ಭಾಗ್ಯಶ್ರೀ ಸದಾಶಿವ ಹಾವಿನಳ, ಜಿ. ಎನ್. ಮಂಜುಳಾ ಕ್ಷೇತ್ರ ಸಿಬ್ಬಂದಿ ಕ್ಷೇತ್ರ , ಎಚ್. ವೆಂಕಟರಮಣಪ್ಪ ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ, ಬಿ. ಆರ್. ಮಂಜುನಾಥ್ ಪ್ರೌಢಶಾಲಾ ವಿಭಾಗ, ಎಂ. ಎನ್.ಹರ್ಷ ಸರ್ಕಾರಿ ಶಿಕ್ಷಣ ಇಲಾಖೆ ಆಡಳಿತ ಕಚೇರಿ, ಪಿ. ವಿ.ವೀಣಾ ಪದವಿ ಪೂರ್ವ ಕಾಲೇಜು, ಎಸ್. ಎನ್. ನಾಗೇಂದ್ರ ಸರ್ಕಾರಿ ಕೈಗಾರಿಕಾ ತರಭೇತಿ ಸಂಸ್ಥೆ , ಎಸ್. ಎನ್.ರವೀಂದ್ರ ಕುಮಾರ್ ಸಮಾಜ ಕಲ್ಯಾಣ ಇಲಾಖೆ , ಜಿ. ವಿ. ಕನಕರಾಜ್ ವಲಯ ಅರಣ್ಯ ಇಲಾಖೆ , ಶಿವಶರಣಪ್ಪ, ಎಚ್. ನರಸಿಂಹಯ್ಯ, ಜೆ. ಎನ್.ಗಂಗಾಧರ, ವೈ. ಎ. ಯಾಸ್ಮಿನ್ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷ್ಣಮೂರ್ತಿ ತೋಟಗಾರಿಕೆ, ಎ. ಎಂ. ನಾಗರಾಜ್ ಉಪ ಖಜಾನೆ ಇಲಾಖೆ, ಬಿ. ಎನ್.ರಘುಪತಿ ಭೂಮಾಪನ ಇಲಾಖೆ , ಜೆ. ಎಂ. ಸುನಿಲ್ ನ್ಯಾಯಾಂಗ ಇಲಾಖೆ, ಗ್ರಾಮೀಣ ಮತ್ತು ಪಂಚಾಯತ್ ಇಲಾಖೆಯ ತಾಲೂಕು ಪಂಚಾಯತಿ ಕಚೇರಿ ಕ್ಷೇತ್ರಕ್ಕೆ ಜೈಬುನ್ನಿಸಾ ಮತ್ತು ಕ್ಷೇತ್ರ ಸಿಬ್ಬಂದಿ ಕ್ಷೇತ್ರಕ್ಕೆ ರಾಮಾಂಜಿನಪ್ಪ, ಸಿ. ಎ. ಶಾರದಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಂ. ಕೆ.ಗಾಯಿತ್ರಿ ಉಪಾನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ಸೇರಿದಂತೆ ಒಟ್ಟು 23 ನಿರ್ದೇಶಕ ಸ್ಥಾನಗಳಿಗೆ ವಿವಿಧ ಇಲಾಖೆಗಳಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

23 unopposed elected to Gudibande Employees Union Voting today counting and result

ಕಣದಲ್ಲಿ ಉಳಿದ ಅಭ್ಯರ್ಥಿಗಳು:

ಪ್ರಾಥಮಿಕ ಶಾಲಾ ವಿಭಾಗಕ್ಕೆ ಒಟ್ಟು ನಾಲ್ಕು ನಿರ್ದೇಶಕರ ಸ್ಥಾನಗಳಿದ್ದು, ಹಾಲಿ ನೌಕರರ ಸಂಘದ ಅಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ ಬಣದಿಂದ ಕೆ.ವಿ. ನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ಕೃಷ್ಣಪ್ಪ, ಪಿ.ಎನ್. ರಾಜಶೇಖರ್ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಬಣದಿಂದ ಬಾಲಾಜಿ, ನಾಗಲಿಂಗಪ್ಪ, ಜೆ.ವಿ.ಮುರಳಿ, ನಾರಾಯಣಸ್ವಾಮಿ ಬಣದ ಅಭ್ಯರ್ಥಿಗಳಾಗಿದ್ದು, ನಾರಾಯಣಪ್ಪ ಎಂಬುವವರು ಸೇರಿ ಒಟ್ಟು ಒಂಬತ್ತು ಅಭ್ಯರ್ಥಿಗಳ ಅದೃಷ್ಟ ಇಂದು ನಿರ್ಧಾರವಾಗಲಿದೆ.

ಕಳೆದ 15 ವರ್ಷಗಳಿಂದ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷನರಾಗಿ ಸೇವೆ ಸಲ್ಲಿಸಿದ್ದು, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ನೌಕರರು ಭಾಗವಹಿಸಲು ಅಪಾರ ಪ್ರೋತ್ಸಾಹ ನೀಡಿದ್ದಾರೆ, ನೌಕರರ ಸಮಸ್ಯೆಗಳ ಇಥ್ಯರ್ಥಕ್ಕಾಗಿ ಹಗಲಿರುಳು ಶ್ರಮಿಸುತ್ತಾ ಬಂದಿದ್ದಾರೆ, ನೌಕರರಿಗಾಗಿ 5ನೇ ವೇತನ, 6 ವೇತನ ಹಾಗೂ 7 ವೇತನ ಆಯೋಗ ಜಾರಿ ಮಾಡುವಲ್ಲಿ ನೌಕರರನ್ನು ಒಗ್ಗೂಡಿಸಿ ಹೆಚ್ಚಿನ ಶ್ರಮ ಹಾಕಿದ್ದಾರೆ, ನೌಕರರ ಮಕ್ಕಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕೊಡಿಸುವಲ್ಲಿ ವಿಶೇಷ ಕಾಳಜಿ ವಹಿಸಿದ್ದು, ನೌಕರರಿಗಾಗಿ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರ ಆಯೋಜನೆ ಮಾಡಿದ್ದಾರೆ ಹಾಗಾಗಿ ಈ ಬಾರಿಯೂ ಸಹ ನೌಕರರ ಸಂಘದ ಹಾಲಿ ಅಧ್ಯಕ್ಷರಾದ ಕೆ. ವಿ. ನಾರಾಯಣಸ್ವಾಮಿ ಬಣಕ್ಕೆ ತಾಲೂಕಿನ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಹೆಚ್ಚಿನ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಲಿದ್ದಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶ್ರೀರಾಮರೆಡ್ಡಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+