ಇರುವೆ ಗೂಡು ಸುಡಲು ಹೋಗಿ ತಾನೇ ದಹನವಾದ ಮಹಿಳಾ ಟೆಕ್ಕಿ
ಚೆನ್ನೈ, ನವೆಂಬರ್ 24: ಇರುವೆ ಗೂಡಿಗೆ ಬೆಂಕಿ ಹಚ್ಚಲು ಹೋದ 27 ವರ್ಷದ ಮಹಿಳೆ ತನ್ನನ್ನು ತಾನೇ ಸುಟ್ಟುಕೊಂಡು ಗಂಭೀರ ಗಾಯಗಳಿಂದ ಮೃತಪಟ್ಟ ಘಟನೆ ಚೆನ್ನೈನ ಅಮಿಂಜಿಕರೈನ ಪೆರುಮಾಳ್ ಕೋಯಿಲ್ ಸ್ಟ್ರೀಟ್‌ನಲ್ಲಿ ನಡೆದಿದೆ. ಘಟನೆ ವೇಳೆ ಮಹಿಳೆ ಪಾಲಿಸ್ಟರ್ ಬಟ್ಟೆ ಧರಿಸಿದ್ದರು. ಇದರಿಂದ ಬೆಂಕಿ ವೇಗವಾಗಿ ಅವರ ಮೇಗೆ ಆವರಿಸಿಕೊಂಡಿದೆ. ಶೇ 90ರಷ್ಟು ಸುಟ್ಟಗಾಯಕ್ಕೆ ಒಳಗಾಗಿದ್ದ ಅವರು, ಭಾನುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಮಿಂಜಿಕರೈ ನಿವಾಸಿಯಾಗಿದ್ದ ಎಸ್. ಸಂಗೀತಾ, ಶೋಲಿಂಗನಲ್ಲೂರ್‌ನಲ್ಲಿ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ವೃತ್ತಿಯಿಂದ ಚಾಲಕರಾಗಿರುವ ತಂದೆ ಸತ್ಯಮೂರ್ತಿ ಲಾಕ್‌ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದರಿಂದ ಸಂಗೀತಾ ಅವರೇ ಮನೆಯ ಏಕೈಕ ಆಧಾರವಾಗಿದ್ದರು.
ಕೋವಿಡ್ ಕಾರಣದಿಂದ ಸಂಗೀತಾ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಶನಿವಾರ ಅವರು ತಮ್ಮ ಕೊಠಡಿಯಲ್ಲಿ ಇರುವೆಗಳು ಓಡಾಡುತ್ತಿರುವುದನ್ನು ಗಮನಿಸಿದರು. ಅವರಿಗೆ ಇರುವೆ ಗೂಡು ಕಂಡಿತ್ತು. ನೆಲವನ್ನು ಸ್ವಚ್ಛಗೊಳಿಸಿದ ಅವರು ಸೀಮೆ ಎಣ್ಣೆ ಸುರಿದು ಇರುವೆ ಗೂಡನ್ನು ಸುಡಲು ನಿರ್ಧರಿಸಿದ್ದರು. ಅಮ್ಮನ ಜತೆ ಸೇರಿ ಕಾಗದ ಒಂದಕ್ಕೆ ಸೀಮೆಎಣ್ಣೆ ಸುರಿದು ಗೂಡಿಗೆ ಬೆಂಕಿ ಹಚ್ಚಿದ್ದರು. ಕೂಡಲೇ ಗೂಡಿನಿಂದ ಹೊರಬಂದ ಇರುವೆಗಳು ಕೊಠಡಿಯ ತುಂಬೆಲ್ಲಾ ಓಡತೊಡಗಿದವು.

ಕೆಲವು ಇರುವೆಗಳು ಸಂಗೀತಾ ಅವರೆಡೆಗೆ ಧಾವಿಸಿ ಅವರ ಕಾಲುಗಳ ಮೇಲೆ ಹತ್ತತೊಡಗಿದವು. ಇದರಿಂದ ಗಾಬರಿಗೊಂಡ ಸಂಗೀತಾ ಅವುಗಳಿಂದ ತಪ್ಪಿಸಿಕೊಳ್ಳಲು ಜಿಗಿಯಲು ಪ್ರಯತ್ನಿಸಿದರು. ಆಗ ಬೆಂಕಿಯ ಸಮೀಪದಲ್ಲಿಯೇ ಸೀಮೆಎಣ್ಣೆ ಕ್ಯಾನ್ ಬಿದ್ದಿದೆ. ಆಗ ಸೀಮೆಎಣ್ಣೆ ಅವರ ಉಡುಪಿನ ಮೇಲೆ ಚೆಲ್ಲಿದ್ದರಿಂದ ಕ್ಷಣಮಾತ್ರದಲ್ಲಿಯೇ ಬೆಂಕಿ ಹೊತ್ತಿಕೊಂಡಿದೆ.
ಸಂಗೀತಾ ಅವರ ಕಿರುಚಾಟ ಕೇಳಿ ತಂದೆ ಸತ್ಯಮೂರ್ತಿ ರಕ್ಷಣೆಗೆ ಧಾವಿಸಿದರೂ ಆಗಾಗಲೇ ಬೆಂಕಿಯ ಜ್ವಾಲೆ ಅವರನ್ನು ಬಹುತೇಕ ಸುಟ್ಟುಹಾಕಿತ್ತು. ಸತ್ಯಮೂರ್ತಿ, ಸಂಗೀತಾರ ಹೋದರ ಮತ್ತು ನೆರೆಹೊರೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಒದ್ದೆ ಬ್ಲಾಂಕೆಟ್ ಅನ್ನು ಮೈಮೇಲೆ ಹಾಕಿದರೂ ಬೆಂಕಿಯನ್ನು ಆರಿಸಲು ತುಂಬಾ ಸಮಯ ಬೇಕಾಯಿತು. ಅವರ ತಾಯಿಗೂ ಸಣ್ಣಪುಟ್ಟ ಸುಟ್ಟ ಗಾಯಗಳಾಯಿತು. ಅವರನ್ನು ಶನಿವಾರ ರಾತ್ರಿ ಕಿಲ್ಪೌಕ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ 2.30ರ ಸುಮಾರಿಗೆ ಅವರು ಮೃತಪಟ್ಟರು.
-
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral












Click it and Unblock the Notifications