ನಡುರಸ್ತೆಯಲ್ಲಿ ಚಿರತೆ ತಿಂದ ಕಾಡುಹಂದಿಗಳು: ಶಾಕಿಂಗ್ ವಿಡಿಯೋ ವೈರಲ್
ತಮಿಳುನಾಡು ಮೇ 9: ಚಿರತೆ ಅಂತಹ ಪ್ರಾಣಿಯನ್ನು ನೋಡಿದರೆ ಇತರ ಪ್ರಾಣಿಗಳು ಮತ್ತು ಮನುಷ್ಯರು ಭಯಪಡುತ್ತಾರೆ. ಯಾವುದೇ ಪ್ರಾಣಿ ಅಥವಾ ಮನುಷ್ಯ ತಮ್ಮ ಮುಂದೆ ಚಿರತೆ ಕಂಡರೆ ಸಾವಿನ ಬಾಗಿಲು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಹೀಗಿರುವಾಗ ಕಾಡುಹಂದಿಗಳ ಹಿಂಡು ಚಿರತೆಯನ್ನು ಕಚ್ಚಿ ತಿನ್ನಲು ಯತ್ನಿಸುತ್ತಿದೆ ಎಂದರೆ ನೀವು ನಂಬಬಹುದೇ? ನಂಬುವುದಿಲ್ಲ ಅಂತಾದರೆ ಒಮ್ಮೆ ಈ ವಿಡಿಯೋ ನೋಡಿ.
ಸಾಮಾನ್ಯವಾಗಿ ಚಿರತೆಯೊಂದು ಕಾಡುಹಂದಿಗಳನ್ನು ಬೇಟೆಯಾಡುವುದು ಸಾಮಾನ್ಯವಾದ ವಿಚಾರ, ಆದರೆ ಚಿರತೆಯನ್ನೇ ಕಾಡುಹಂದಿಗಳು ಬೇಟೆಯಾಡುವುದು ಅಂದ್ರೆ ಹೇಗಿರುತ್ತೆ? ಇದೊಂದು ಕಲ್ಪನೆಗೂ ಮೀರಿದ ವಿಚಾರ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ವಿಡಿಯೊದಲ್ಲಿ ಕಾಡಾನೆಗಳ ಗುಂಪೊಂದು ಚಿರತೆಯನ್ನು ಕಚ್ಚಿ ತಿನ್ನಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಮೂರು ಕಾಡು ಹಂದಿಗಳು ಚಿರತೆಯನ್ನು ಅಟ್ಟಾಡಿಸಿಕೊಂಡು ಬಂದು ನಡು ರಸ್ತೆಯಲ್ಲಿ ಅದನ್ನು ಹಿಡಿದು ಕಚ್ಚಿ ತಿನ್ನಲು ಪ್ರಯತ್ನಿಸುತ್ತಿರುವುದ ಕಂಡು ಬಂದಿದೆ. ಈ ಅಪರೂಪದ ದೃಶ್ಯವನ್ನು ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಆದರೆ ಈ ಹಂದಿಗಳು ಚಿರತೆಯನ್ನು ಕೊಂದಿವೆಯೇ ಇಲ್ಲವೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

ಈ ವಿಡಿಯೋ ತಮಿಳುನಾಡಿನ ಪಳನಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿರತೆ ಕಾಡುಹಂದಿಗಳ ಕೈಯಲ್ಲಿ ಸಿಕ್ಕು ವಿವಲವಿಲ ಒದ್ದಾಡಿದ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸಿದೆ. ಹಂದಿಗಳ ಹಿಂಡು ಚಿರತೆಯ ದೇಹವನ್ನು ತಿನ್ನಲು ಪ್ರಾರಂಭಿಸಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ವೈಲ್ಡ್ ಲೆನ್ಸ್ ಇಂಡಿಯಾದ ಟ್ವಿಟರ್ ಹ್ಯಾಂಡಲ್‌ನಿಂದ ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.
Disturbing Visuals
— WildLense® Eco Foundation 🇮🇳 (@WildLense_India) May 5, 2022
Claimed to be from Palani to Kodaikanal road. Probable reason might be RTA. pic.twitter.com/z79BNm4lsZ

ನಡುರಸ್ತೆಯಲ್ಲಿ ನಡೆದ ಈ ಭಯಾನಕ ದೃಶ್ಯವನ್ನು ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. ಕಾಡುಹಂದಿಗಳು ಚಿರತೆಯನ್ನು ತಿನ್ನಲು ಯತ್ನಿಸುತ್ತಿರುವ ರೀತಿ ನೋಡಿದರೆ ಆ ಚಿರತೆ ಬದುಕಿರಲು ಸಾಧ್ಯವಿಲ್ಲ ಎಂದು ಭಾವಿಸಬಹುದು.












Click it and Unblock the Notifications