ತಮಿಳುನಾಡಿನಲ್ಲಿ ಕೊರೊನಾ ಪ್ರಕರಣ ಇಳಿಕೆ: ಕೊಯಮತ್ತೂರಿನಲ್ಲಿ ಯಥಾಸ್ಥಿತಿ ಮುಂದುವರಿಕೆ
ಚೆನ್ನೈ, ಸೆಪ್ಟೆಂಬರ್ 25: ತಮಿಳುನಾಡಿನಲ್ಲಿ 5679 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 5,69,370 ಪ್ರಕರಣಗಳಿವೆ. ಚೆನ್ನೈನಲ್ಲಿ 1193 ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ 1,60,926 ಪ್ರಕರಣಗಳಿವೆ.
ಶುಕ್ರವಾರ 72 ಮಂದಿ ಮೃತಪಟ್ಟಿದ್ದಾರೆ. ಒಟ್ಟು 9148 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 46,386 ಸಕ್ರಿಯ ಪ್ರಕರಣಗಳಿವೆ. 3,43,470 ಪುರುಷರು, 2,25,870 ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ.
30 ಮಂದಿ ತೃತೀಯ ಲಿಂಗಿಗಳಿಗೂ ಸೋಂಕು ತಗುಲಿದೆ. ಇಲ್ಲಿಯವರೆಗೆ 69,10,521 ಮಂದಿಯ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದೆ. ಇಂದು 94,877 ಮಂದಿಯ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಇಂದು 5623 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ, ಇದುವರೆಗೆ 5,13,836 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಚೆಂಗಲ್‌ಪಟ್ಟುವಿನಲ್ಲಿ 277, ಕಾಂಚೀಪುರಂನಲ್ಲಿ 165, ತಿರುವಳ್ಳೂರು 229, ಅರಿಯಲೂರು 28, ಕೊಯಮತ್ತೂರು 661 ಪ್ರಕರಣಗಳು ಪತ್ತೆಯಾಗಿವೆ.
ನೊವೆಲ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 58 ಲಕ್ಷದ ಗಡಿ ದಾಟಿದೆ. ಭಾರತದಲ್ಲಿ 24 ಗಂಟೆಗಳಲ್ಲೇ 86052 ಜನರಿಗೆ ಕೊವಿಡ್-19 ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ಖಾತ್ರಿಯಾಗಿದೆ.
ಗುರುವಾರ ಬೆಳಗ್ಗೆ 9 ಗಂಟೆಯಿಂದ ಗುರುವಾರ ಬೆಳಗ್ಗೆ 9 ಗಂಟೆವರೆಗೂ ಕೊರೊನಾವೈರಸ್ ಗೆ 1129 ಜನರು ಬಲಿಯಾಗಿದ್ದು, ದೇಶದಲ್ಲಿ ಕೊವಿಡ್-19 ನಿಂದ ಪ್ರಾಣ ಬಿಟ್ಟವರ ಸಂಖ್ಯೆ 92290ಕ್ಕೆ ಏರಿಕೆಯಾಗಿದೆ.












Click it and Unblock the Notifications