ಗಮನ ಸೆಳೆದ ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲಿನ ಸಾಲು!
Recommended Video

ಚೆನ್ನೈ, ಆಗಸ್ಟ್ 08 : ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ವಿಧಿವಶರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಕರುಣಾನಿಧಿ ಅವರ ಪಾರ್ಥಿವ ಶರೀರಿ ಇರುವ ಪೆಟ್ಟಿಗೆ ಮೇಲೆ ಬರೆದ ಸಾಲು ಗಮನ ಸೆಳೆಯುತ್ತಿದೆ.
5 ಬಾರಿ ಮುಖ್ಯಮಂತ್ರಿಯಾಗಿ, 13 ಬಾರಿ ಶಾಸಕರಾಗಿ ಎಂ.ಕರುಣಾನಿಧಿ ಜನರಿಗೊಸ್ಕರ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಸುಮಾರು 60 ವರ್ಷಗಳ ಕಾಲ ಸಕ್ರಿಯ ರಾಜಕಾರಣವನ್ನು ಮಾಡಿದ್ದಾರೆ. ಈಗ ಅವರು ಚಿರ ನಿದ್ರೆಗೆ ಜಾರಿದ್ದಾರೆ.
ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲೆ ಬರೆದಿರುವ ಸಾಲು ಎಲ್ಲರ ಗಮನ ಸೆಳೆಯುತ್ತಿದೆ. ಕರುಣಾನಿಧಿ ಅವರು ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಅವರ ಪಾರ್ಥಿವ ಶರೀರ ಇರುವ ಪೆಟ್ಟಿಗೆ ಮೇಲೆ ಬರೆದ ಸಾಲನ್ನು ಅಭಿಮಾನಿಗಳು ಕಂಡು ಭಾವುಕರಾಗಿದ್ದಾರೆ.

ಶವ ಪೆಟ್ಟಿಗೆಯ ಒಂದು ಕಡೆ 'A person who continued to work without rest, now takes rest' ಎಂದು ತಮಿಳಿನಲ್ಲಿ ಬರೆಯಲಾಗಿದೆ. ಮತ್ತೊಂದು ಬದಿಯಲ್ಲಿ ಕಲೈಂಗರ್ ಕರುಣಾನಿಧಿ, ಡಿಎಂಕೆ ಅಧ್ಯಕರು ಎಂದು ಬರೆಯಲಾಗಿದೆ.
'A person who continued to work without rest, now takes rest' written on the coffin of #Karunanidhi pic.twitter.com/diosM06Lbf
— ANI (@ANI) August 8, 2018
ಎಂ.ಕರುಣಾನಿಧಿ ಅವರ ಅಂತ್ಯ ಸಂಸ್ಕಾರದ ಬಗ್ಗೆ ಇದ್ದ ಗೊಂದಲ ಬಗೆಹರಿದಿದೆ. ಚೆನ್ನೈನ ಮರೀನಾ ಬಿಚ್‌ನಲ್ಲಿ ಸಂಜೆ 6 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಸಂಜೆ 4 ಗಂಟೆಗೆ ರಾಜಾಜಿ ಹಾಲ್‌ನಿಂದ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಲಿದೆ.











Click it and Unblock the Notifications