ವಿಡಿಯೋ: ಚಲಿಸುವ ರೈಲಿನಿಂದ ಬಿದ್ದರೂ ಬದುಕಿದ, ನಡೆಯಿತು ಪವಾಡ!
Recommended Video

ಚೆನ್ನೈ, ನವೆಂಬರ್ 14: ಚಲಿಸುವ ರೈಲೊಂದನ್ನು ಹತ್ತುವುದಕ್ಕೆಂದು ಹೋಗಿ ಇನ್ನೇನು ವ್ಯಕ್ತಿಯೊಬ್ಬ ಹಳಿಯ ಮೇಲೆ ಬೀಳಬೇಕು, ಅಷ್ಟರಲ್ಲಿ ಪವಾಡಸದೃಶವಾಗಿ ಬದುಕುಳಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ರೈಲ್ವೇ ಸುರಕ್ಷತಾ ದಳದ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಮಿಳುನಾಡಿನ ಇಗ್ಮೋರ್ ರೈಲ್ವೇ ನಿಲ್ದಾಣಕ್ಕೆ ರೈಲೊಂದು ಬಂದ ಸಂದರ್ಭದಲ್ಲಿ ಅದು ನಿಲ್ಲುವ ಮೊದಲೇ ಅದನ್ನು ಹತ್ತಲು ವ್ಯಕ್ತಿಯೊಬ್ಬ ಪ್ರಯತ್ನಿಸಿದ್ದಾನೆ.
#WATCH: Railway Protection Force (RPF) personnel saved a passenger's life by rescuing him from falling, while he was boarding a train at Egmore Railway Station's platform. The passenger didn't suffer any injury. #TamilNadu (12.11.18) pic.twitter.com/OdNDYMdu2y
— ANI (@ANI) November 14, 2018
ರೈಲು ವೇಗವಾಗಿ ಚಲಿಸುತ್ತಿದ್ದರಿಂದ ಆಯತಪ್ಪಿ ರೈಲಿನ ಬಾಗಿಲಲ್ಲಿ ಬಿದ್ದಿದ್ದಾನೆ. ಇನ್ನೇನು ರೈಲ್ವೇ ಹಳಿ ಮತ್ತು ಫ್ಲಾಟ್ ಫಾರ್ಮ್ ನಡುವಿನ ಜಾಗದಲ್ಲಿ ಬೀಳಬೇಕು, ಅಷ್ಟರಲ್ಲಿ ರೈಲ್ವೇ ಸುರಕ್ಷತಾ ದಳದ ಸಿಬ್ಬಂದಿಯೊಬ್ಬರು ಸಮಯಪ್ರಜ್ಞೆ ಮೆರೆದು ಆತನನ್ನು ರಕ್ಷಿಸಿದ್ದಾರೆ.
ರೈಲ್ವೇ ನಿಲ್ದಾಣಗಳಲ್ಲಿ ರೈಲು ನಿಲ್ಲುವ ಮೊದಲೇ ಹತ್ತುವುದಕ್ಕೆ ಅಥವಾ ಇಳಿಯುವುದಕ್ಕೆ ಪ್ರಯತ್ನಿಸುವುದರಿಂದ ಈಗಾಗಲೇ ಹಲವು ಅವಘಡಗಳ ಘಟಿಸಿದ್ದರೂ ಎಷ್ಟೋ ಜನ ನಿರ್ಲಕ್ಷ್ಯ ತೋರುತ್ತಿರುವುದರಿಂದ ಇಂಥ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ.

ಮುಂಬೈಯ ಪಾನ್ವೇರ್ ರೈಲ್ವೇ ನಿಲ್ದಾಣದಲ್ಲೂ ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ವ್ಯಕ್ತಿಯನ್ನು ರೈಲ್ವೇ ಪೊಲೀಸ್ ಸಮಯ ಪ್ರಜ್ಞೆಯಿಂದ ಬದುಕುಳಿಸಿದ ಘಟನೆ ಇತ್ತೀಚೆಗೆ ನಡೆದಿತ್ತು.












Click it and Unblock the Notifications