• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂಡಿಗೋ ವಿಮಾನದಲ್ಲೊಂದು ಭಾವನಾತ್ಮಕ ಕ್ಷಣ: ವಿಡಿಯೋ ವೈರಲ್

|

ಚೆನ್ನೈ, ನವೆಂಬರ್ 20: ಆ ಇಂಡಿಗೋ ವಿಮಾನದಲ್ಲಿ ಕುಳಿತಿದ್ದವರೆಲ್ಲ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಆ ವಿಮಾನ ಮುನ್ನಡೆಸಬೇಕಿದ್ದ ಪೈಲೆಟ್ ಪ್ರಯಾಣಿಕರು ಕೂರುವ ಸೀಟಿನತ್ತ ಧಾವಿಸಿ ಬರುತ್ತಿದ್ದರು. ನೋಡು ನೋಡುತ್ತಿದ್ದಂತೆಯೇ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದು ಮತ್ತೆ ವಾಪಸ್ ಹೊರೆಟರು. ಕೆಲವೇ ಕ್ಷಣಗಳಲ್ಲಿ ವಿಮಾನ ಟೇಕಾಫ್ ಆಯ್ತು...!

ಮನಮಿಡಿಯುತ್ತಿದೆ ಎಡಿಜಿಪಿ ಭಾಸ್ಕರ್ ರಾವ್ ಟ್ವೀಟಿಸಿದ್ದ ಅದ್ಭುತ ಭಾವಚಿತ್ರ!

ಪ್ರದೀಪ್ ಕೃಷ್ಣನ್ ಎಂಬ ಯುವಕನಿಗೆ ಚಿಕ್ಕಂದಿನಿಂದಲೂ ಪೈಲೆಟ್ ಆಗಬೇಕೆಂಬ ಆಸೆ. ಆತನ ಆಸೆಗೆ ನೀರೆರೆಯುತ್ತಿದ್ದ ತಾಯಿ ಮತ್ತು ಆತನ ಅಜ್ಜಿ ಇಬ್ಬರೂ, 'ನೀನು ಪೈಲೆಟ್ ಆಗಿ ವಿಮಾನ ಚಾಲನೆ ಮಾಡುವವರೆಗೂ ನಾವು ವಿಮಾನ ಹತ್ತುವುದಿಲ್ಲ' ಎಂದು ಶಪಥ ಮಾಡಿದ್ದರು.

ಬ್ಯಾಗೇಜ್ ಮರೆತ ಗೋಏರ್ ವಿಮಾನ, ಪ್ರಯಾಣಿಕರ ಪರದಾಟ!

ಚೆನ್ನೈನಿಂದ ಸಿಂಗಪುರಕ್ಕೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಮೊಟ್ಟ ಮೊದಲ ಬಾರಿಗೆ ಕುಳಿತಿದ್ದ ಪ್ರದೀಪ್ ಕೃಷ್ಣನ್ ಅವರ ತಾಯಿ ಮತ್ತು ಅಜ್ಜಿಗೆ ಇನ್ನಿಲ್ಲದ ಸಂಭ್ರಮ. ಯಾಕಂದ್ರೆ, ಆ ವಿಮಾನ ಚಲಾಯಿಸುತ್ತಿದ್ದುದು ಅದೇ ಪ್ರದೀಪ್ ಕೃಷ್ಣನ್. ತಮ್ಮ ಮೊದಲ ವಿಮಾನ ಹಾರಾಟ ಆರಂಭಿಸುವ ಮುನ್ನ ತಾಯಿ ಮತ್ತು ಅಜ್ಜಿಯ ಆಶೀರ್ವಾದ ಪಡೆದ ಪ್ರದೀಪ್ ಕೃಷ್ಣನ್ ಅವರ ನಡೆ ಇಂಡಿಗೋ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರೆಲ್ಲರ ಮೆಚ್ಚುಗೆ ಗಳಿಸಿತು.

ಪತನವಾದ ಇಂಡೋನೇಷ್ಯಾ ವಿಮಾನದ ಪೈಲೆಟ್ ದೆಹಲಿಯವರು!

ಈ ವಿಡಿಯೋ ಇದೀಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 'ಒಬ್ಬ ತಾಯಿಗೆ ಮಗ ಇದಕ್ಕಿಂತ ಉತ್ತಮ ಉಡುಗೊರೆ ನೀಡುವುದಕ್ಕೆ ಸಾಧ್ಯವೇ?' ಜನ ಪ್ರಶ್ನಿಸುತ್ತಿದ್ದಾರೆ.

English summary
In a heartwarming story, an IndiGo pilot touched his mother's and grandmother's feet before he flew them to Singapore on their first flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X