ಚೆನ್ನೈಯಲ್ಲಿ ಐಟಿ ದಾಳಿ: ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿರುವುದೇಕೆ?

Posted By:
Subscribe to Oneindia Kannada
   ಚೆನ್ನೈ ಐಟಿ ದಾಳಿಗೂ ಮೋದಿ ಏನ್ ಸಂಬಂಧ? | Oneindia Kannada

   ಚೆನ್ನೈ, ನವೆಂಬರ್ 09: ಪ್ರಧಾನಿ ನರೇಂದ್ರ ಮೋದಿ, ಡಿಎಂಕೆ ನಾಯಕ ಕರುಣಾನಿಧಿಯವರನ್ನು ಭೇಟಿಯಾಗಿದ್ದಕ್ಕೂ, ಇಂದು ಚೆನ್ನೈನಲ್ಲಿ ನಡೆಯುತ್ತಿರುವ ಐಟಿದಾಳಿಗೂ ಏನಾದರೂ ಸಂಬಂಧವಿದೆಯಾ? ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೌದು ಎನ್ನುತ್ತಿದ್ದಾರೆ.

   ಶಶಿಕಲಾ ಸಾಮ್ರಾಜ್ಯದ ಮೇಲೆ ಐಟಿ ಕಣ್ಣು: ಚೆನ್ನೈನ 187 ಕಡೆ ಐಟಿ ದಾಳಿ

   ಸಾಮಾಜಿಕ ಜಾಲತಾಣಗಳಲ್ಲಿ ಐಟಿ ರೇಡ್ ಟ್ರೆಂಡಿಂಗ್ ಆಗಿದೆ. ಟ್ವಿಟ್ಟರ್ ನಲ್ಲಿ ಐಟಿ ದಾಳಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದು ಬಿಜೆಪಿಯ ಕೀಳುಮಟ್ಟದ ರಾಜಕೀಯ ಆಟ ಎಂದು ಕೆಲವರು ಬರೆದುಕೊಂಡಿದ್ದಾರೆ. ಅದರಲ್ಲೂ ಅಪನಗದೀಕರಣದ ವಿರುದ್ಧ ಕರಾಳ ದಿನ ಆಚರಿಸಲು ಮುಂದಾಗಿದ್ದ ಡಿಎಂಕೆ, ಮೋದಿ-ಕರುಣಾನಿಧಿ ಬೇಟಿಯ ನಂತರ ತನ್ನ ನಿರ್ಧಾರವನ್ನು ಬದಲಿಸಿದ್ದಕ್ಕೂ, ಈ ದಾಳಿಗೂ ತಳುಕು ಹಾಕುವ ಪ್ರಯತ್ನವೂ ನಡೆಯುತ್ತಿದೆ.

   ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರದ ಭಾಗವೇ ಐಟಿ ದಾಳಿ: ದಿನಕರನ್

   "ಈ ದಾಳಿ ಆದದ್ದು ಒಳ್ಳೆಯದಾಯಿತು. 'ಅಮ್ಮಾ'ಅವರಿಗೆ ಶಶಿಕಲಾ ನಟರಾಜನ್ ಮಾಡಿದ ಮೋಸಕ್ಕೆ ತಕ್ಕ ಶಾಸ್ತಿಯಾಗುತ್ತಿದೆ" ಎಂದವರೂ ಇದ್ದಾರೆ. ಒಟ್ಟಿನಲ್ಲಿ ದಾಳಿಗೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಕೆಲವರು ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದರೆ ಮತ್ತೆ ಕೆಲವರು ಶಶಿಕಲಾ ನಟರಾಜನ್, ತಾವು ಮಾಡಿದ ಪಾಪಕ್ಕೆ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

   ಶಶಿಕಲಾ ಸಾಮ್ರಾಜ್ಯದ ಮೇಲೆ ಐಟಿ ಕಣ್ಣು: ಚೆನ್ನೈನ 187 ಕಡೆ ಐಟಿ ದಾಳಿ

   ಬಿಜೆಪಿಯ ಕೀಳು ರಾಜಕೀಯ!

   'ಅಮ್ಮ' ಮರಣದ ನಂತರ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಮೋದಿ ಮತ್ತು ಬಿಜೆಪಿಯ ರಾಜಕೀಯ ಆಟ ತಮಿಳುನಾಡಿನಲ್ಲಿ ನಡೆಯೋದಿಲ್ಲ. ಮುಂದಿನ ಚುನಾವಣೆಯಲ್ಲು ಬಿಜೆಪಿ ಠೇವಣಿ ಕಳೆದುಕೊಳ್ಳೋದು ಗ್ಯಾರಂಟಿ ಎಂದು ಕಣ್ಣನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಜಯಾ ಅವರ ಕೊಡ್ನಾಡ್ ಎಸ್ಟೇಟ್ ಸೇರಿ ಎಲ್ಲೆಲ್ಲಿ ಐಟಿ ದಾಳಿ?

   ಹಳೆಯ ದಾಳಿಗಳ ಕತೆ ಏನಾಯ್ತು?

   ಜಯ ಟಿವಿ ಮೇಲೆ ಐಟಿ ದಾಳಿ ನಡೆದಿದ್ದು ಒಳ್ಳೆಯದೇ. ಆದರೆ ಇದಕ್ಕೂ ಮುನ್ನ ನಡೆದ ಐಟಿ ದಾಳಿಗಳೆಲ್ಲ ಏನಾದವು? ಈಗಲೂ ನಾವು ಆದಾಯ ತೆರಿಗೆ ದಾಳಿಗಳು ಯಾವುದೇ ರಾಜಕೀಯ ಪ್ರೇರಿತವಲ್ಲ ಎಂದು ನಂಬಿದ್ದೇವೆ ಎಂದು ಝಿತ್ ಹುಸೇನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಚಿತ್ರಗಳು: ಶಶಿಕಲಾ ನಟರಾಜನ್ ಸಾಮ್ರಾಜ್ಯದ ಮೇಲೆ ಐಟಿ ದಾಳಿ

   ಐಟಿ ದಾಳಿ ಎಂಬ ಆಯುಧಗಳು

   ಐಟಿ ದಾಳಿ ಎಂಬುದು ಆಡಳಿತ ಪಕ್ಷ ತನ್ನ ಶತ್ರುಗಳ ಮೇಲೆ ಪ್ರಯೋಗಿಸುವ ಆಯುಧ. ಎದ್ದೇಳಿ ಜನರೇ, ಇದು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ಅರವಿಂದನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ನಮಗೆ ಭಯವಿಲ್ಲ!

   ನಮಗೆ ಯಾರನ್ನು ಬಂಧಿಸಿದರೂ, ಯಾರ ಮೇಲೆ ಐಟಿ ದಾಳಿ ನಡೆಸಿದರೂ ಭಯವಿಲ್ಲ. ಕೇಂದ್ರ ಸರ್ಕಾರ ಐಟಿ ದಾಳಿ ಮೂಲಕ ನಮ್ಮನ್ನು ಮೌನವಾಗಿಸಲು ನೋಡುತ್ತಿದೆ. ಆದರೆ ಅವರ ಉದ್ದೇಶ ಈಡೇರುವುದಕ್ಕೆ ಸಾಧ್ಯವಿಲ್ಲ. ತನಿಖಾ ದಳಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಅಪನಗದೀಕರಣ ಎಂಬುದು ಒಂದು ದೊಡ್ಡ ವೈಫಲ್ಯ ಎಂದು ಮುಗಿಲನ್ ಚಂದ್ರಕುಮಾರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   BJP has any role in IT raid in Chennai? Some twitterians say their opininon like this.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ