ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಪಳನಿಸ್ವಾಮಿಗೆ ಸರ್ಕಾರ ರಚನೆಗೆ ರಾಜ್ಯಪಾಲರಿಂದ ಆದೇಶ

ತಮಿಳುನಾಡಿನ ಲೋಕೋಪಯೋಗಿ ಸಚಿವ ಇ ಪಳನಿಸ್ವಾಮಿ ಅವರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಕಾಲ ಕೂಡಿ ಬಂದಿದೆ. ಗುರುವಾರ ಬೆಳಗ್ಗೆ 11.30ಕ್ಕೆ ಭೇಟಿಯಾಗಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಕಾಲಾವಕಾಶ ನೀಡಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಫೆಬ್ರವರಿ 16: ತಮಿಳುನಾಡಿನ ಲೋಕೋಪಯೋಗಿ ಸಚಿವ ಇ ಪಳನಿಸ್ವಾಮಿ ಅವರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಕಾಲ ಕೂಡಿ ಬಂದಿದೆ. ಗುರುವಾರ ಬೆಳಗ್ಗೆ 11.30ಕ್ಕೆ ವಿದ್ಯಾಸಾಗರ್ ರಾವ್ ರನ್ನು ಭೇಟಿಯಾಗಿದ್ದ ಎಡಪ್ಪಡಿ ಕೆ ಪಳನಿಸ್ವಾಮಿಗೆ ಸರಕಾರ ರಚಿಸುವಂತೆ ರಾಜ್ಯಪಾಲರು ಹೇಳಿದ್ದಾರೆ. ಈ ಮೂಲಕ ಶಶಿಕಲಾ ಬಂಟ ಪಳನಿಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ.

ರಾಜಭವನದತ್ತ ಬೆಂಬಲಿಗರೊಡನೆ ತೆರಳಲಿರುವ ಇ ಪಳನಿಸ್ವಾಮಿ ಅವರು ರಾಜ್ಯಪಾಲರ ಭೇಟಿ ನಂತರ ತಮ್ಮ 'ಚಿನ್ನಮ್ಮ' ಶಶಿಕಲಾ ನಟರಾಜನ್ ರನ್ನು ಕಾಣಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಗುರುವಾರ ಸಂಜೆ ವೇಳೆಗೆ ಬರುವ ಸಾಧ್ಯತೆಯಿದೆ.[ತಮಿಳುನಾಡಿನ ಬಿಕ್ಕಟ್ಟು ಪರಿಹಾರಕ್ಕೆ 3 ಕಾನೂನು ತಜ್ಞರ ಸಲಹೆ]

ಈ ಸಂದರ್ಭದಲ್ಲಿ ಸರ್ಕಾರ ರಚಿಸಲು ಪಳನಿಸ್ವಾಮಿ ಅವರಿಗೆ ಆಹ್ವಾನ ನೀಡುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಪಳನಿಸ್ವಾಮಿ ತಮ್ಮ ಬಳಿ 124 ಶಾಸಕರ ಬೆಂಬಲ ಇದೆ, ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು.

The Governor has invited E Palaniswamy for meeting at Raj Bhavan at 11.30 am on Thursday. During the meeting, the Governor is expected to invite him to form the government. This is the second meeting in as many days between EPS and Governor Vidyasagar Rao.

ರಾಜ್ಯಪಾಲರಿಂದ ಕರೆ ಬಂದ ಬಳಿಕ ಎಐಎಡಿಎಂಕೆ ಕಚೇರಿ ಬಳಿ ಹಬ್ಬದ ವಾತಾವರಣ ಉಂಟಾಗಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಚೆನ್ನೈ ಇಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ತೆರಳುವುದಕ್ಕೂ ಮುನ್ನ ಇ ಪಳನಿಸ್ವಾಮಿ ಅವರನ್ನು ನಿಯೋಜಿತ ಸಿಎಂ ಆಗಿ ಆಯ್ಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.[ತಮಿಳುನಾಡು ರಾಜ್ಯಪಾಲರ ಮುಂದಿರುವ 6 ಆಯ್ಕೆಗಳು]

ತಮಿಳುನಾಡು ವಿಧಾನಸಭೆ ವಿಶೇಷ ಅಧಿವೇಶನ ಕರೆದು, ಬಹುಮತ ಸಾಬೀತುಪಡಿಸಲು ಉಭಯ ಬಣಕ್ಕೂ ಸಮಾನ ಅವಕಾಶ ನೀಡಬೇಕು ಎಂದು ಅಟಾರ್ನಿ ಜನರಲ್ ಮುಕುಲ್ ಹೇಳಿದ್ದಾರೆ. ಅದರಂತೆ ಒಂದು ವೇಳೆ ಓ ಪನ್ನೀರ್ ಸೆಲ್ವಂ ಬಣ ಕೂಡಾ ಸರ್ಕಾರ ರಚನೆಗೆ ಮುಂದಾದರೆ ಎರಡು ಬಣಕ್ಕೂ ಸಮಾನ ಅವಕಾಶ ನೀಡಲಾಗುತ್ತದೆ.

English summary
The Governor has invited E Palaniswamy for meeting at Raj Bhavan at 11.30 am on Thursday. During the meeting, the Governor is expected to invite him to form the government. This is the second meeting in as many days between EPS and Governor Vidyasagar Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X