ಜಯಲಲಿತಾ ಸರ್ಕಾರದಿಂದ ಅಮ್ಮ 'ಮೊಬೈಲ್ ಫೋನ್'

ಚೆನ್ನೈ, ಸೆ.28: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ಜನಪ್ರಿಯ ಯೋಜನೆಗಳನ್ನು ಮುಂದುವರೆಸುತ್ತಾ ಸ್ವ ಸಹಾಯ ಸಂಘ (ಎಸ್ಎಚ್ ಜಿ) ತರಬೇತುದಾರರಿಗೆ ಶುಭ ಸುದ್ದಿ ನೀಡಿದ್ದಾರೆ.

ಅಮ್ಮ ಕ್ಯಾಂಟೀನ್, ಅಮ್ಮ ಮಿನರಲ್ ವಾಟರ್, ಅಮ್ಮ ಫಾರ್ಮಸಿ, ಅಮ್ಮ ಸಿಮೆಂಟ್..ಇತ್ಯಾದಿಗಳ ನಂತರ ತಾಯಂದಿರಿಗೆ ಮೊಲೆಯುಣಿಸಲು ತಂಗುದಾಣಗಳನ್ನು ನಿರ್ಮಿಸಿದ್ದರು.[ತಾಯಿ ಹಾಲಿನ ಬ್ಯಾಂಕುಗಳಿಗೆ ಚಾಲನೆ ನೀಡಿದ ಸಿಎಂ ಜಯಾ]

ಈಗ ಸ್ವಸಹಾಯ ಗ್ರೂಪ್ ನ ಮಹಿಳಾ ತರಬೇತುದಾರರಿಗೆ ಕಂಪ್ಯೂಟರೈಸ್ಡ್ ಮೊಬೈಲ್ ಫೋನ್ ಗಳನ್ನು ನೀಡಲು ನಿರ್ಧರಿಸಿದ್ದಾರೆ. ಇದರಲ್ಲಿ ವಿಶೇಷ ತಮಿಳು ಭಾಷೆ ತಂತ್ರಾಂಶ ಅಳವಡಿಸಲಾಗಿರುತ್ತದೆ. ಇದಕ್ಕಾಗಿ 15 ಕೋಟಿ ರು ಮೀಸಲಿಡಲಾಗಿದೆ.

TN CM Jayalalithaa announces 'Amma Mobile Phone' for SHG trainers

ಮೊದಲ ಹಂತದಲ್ಲಿ ಸುಮಾರು 20,000 ಮಹಿಳಾ ಕಾರ್ಯಕರ್ತರಿಗೆ 'ಅಮ್ಮ' ಮೊಬೈಲ್ ಫೋನ್ ಗಳನ್ನು ವಿತರಿಸಲಾಗುತ್ತದೆ ಎಂದು ಸರ್ಕಾರ ಪ್ರಕಟಿಸಿದೆ.

1991ರಿಂದ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ, ಬಡತನ ನಿರ್ಮೂಲನೆಗಾಗಿ ಈ ಸಂಘಟನೆ ಶ್ರಮಿಸುತ್ತಿದೆ. ಸುಮಾರು 6.08 ಲಕ್ಷ ಸ್ವಸಹಾಯ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, 92 ಲಕ್ಷ ಸದಸ್ಯರನ್ನು ಹೊಂದಿದೆ.

'ಅಮ್ಮ ಕ್ಯಾಂಟೀನ್' ನಲ್ಲಿ ಕಡಿಮೆ ವೆಚ್ಚದಲ್ಲಿ ಶುದ್ಧ ಸತ್ವಯುಕ್ತ ಆಹಾರ ನೀಡಲಾಗುತ್ತದೆ. 10 ರು ಪ್ರತಿ ಬಾಟಲಿಯಂತೆ ಖನಿಜಯುಕ್ತ ನೀರಿನ ಬಾಟಲಿ ನೀಡುವ 'ಅಮ್ಮ ಮಿನರಲ್ ವಾಟರ್', ಕಡಿಮೆ ವೆಚ್ಚದಲ್ಲಿ ಔಷಧಿ ನೀಡಲು 'ಅಮ್ಮ ಫಾರ್ಮಸಿ', 'ಅಮ್ಮ ಬೇಬಿ ಕೇರ್ ಕಿಟ್' ಮೂಲಕ ಶಿಶುಗಳಿಗೆ ಅಗತ್ಯವಾದ 16 ಸಾಮಾಗ್ರಿಗಳು ನೀಡಲಾಗುತ್ತಿದೆ.

ಇದಲ್ಲದೆ ಅಮ್ಮ ಟೀ, ಅಮ್ಮ ಉಪ್ಪು, ಅಮ್ಮ ಸಿಮೆಂಟ್, ಅಮ್ಮ ಸ್ಕೂಲ್ ಬ್ಯಾಗ್ ಇತ್ಯಾದಿಗಳು ಈಗಾಗಲೇ ಜನಪ್ರಿಯಗೊಂಡಿವೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+