ವೈರಲ್ ವಿಡಿಯೋ ಶೂಟ್ ಮಾಡಿದ್ದು ಪೋಯೆಸ್ ಗಾರ್ಡನ್ ನಲ್ಲಿ!

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 20 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಜ್ಯೂಸ್ ಹೀರುತ್ತಿರುವ ವೈರಲ್ ವಿಡಿಯೋ, ತಮಿಳುನಾಡಿನಾದ್ಯಂತ ಧೂಳೆಬ್ಬಿಸುತ್ತಿದ್ದರೆ, ಈ ವಿಡಿಯೋ ಅಪೋಲೋ ಆಸ್ಪತ್ರೆಯಲ್ಲಿ ಮಾಡಿಯೇ ಇಲ್ಲ ಎಂದು ನಾಯಕರೊಬ್ಬರು ಟಿಟಿವಿ ದಿನಕರನ್ ಬಣದ ಉತ್ಸಾಹಕ್ಕೆ ತಣ್ಣೀರೆರಚಿದ್ದಾರೆ.

ವಿಧುತಲೈ ಚಿರುಥೈಗಳ್ ಕಚ್ಚಿ (ವಿಸಿಕೆ) ಪಕ್ಷದ ಧುರೀಣ ತಿರುಮಾವಳವನ್ ಅವರು, ಈ ವಿಡಿಯೋವನ್ನು ಅಪೋಲೋ ಆಸ್ಪತ್ರೆಯಲ್ಲಿ ಚಿತ್ರೀಕರಿಸಿಯೇ ಇಲ್ಲ. ಇದನ್ನು ಜಯಲಲಿತಾ ಅವರ ಪೋಯೆಸ್ ಗಾರ್ಡನ್ ಮನೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿ ಶಶಿಕಲಾ ನಟರಾಜನ್ ಬೆಂಬಲಿಗರಿಗೆ ಶಾಕ್ ನೀಡಿದ್ದಾರೆ.

ವಿರೋಧಿಗಳನ್ನು ಬೆಚ್ಚಿಬೀಳಿಸುವ ಜಯಲಲಿತಾ ವಿಡಿಯೋ!

ಆರ್ ಕೆ ನಗರ ಉಪಚುನಾವಣೆ ಡಿಸೆಂಬರ್ 21ರಂದು ನಡೆಯುತ್ತಿರುವುದರಿಂದ, ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಬೇಕೆಂಬ ಉದ್ದೇಶದಿಂದ ಈ ವಿಡಿಯೋವನ್ನು ಸಮಯ ನೋಡಿಕೊಂಡು ಟಿಟಿವಿ ದಿನಕರನ್ ಅವರ ಬೆಂಬಲಿಗ ವೆಟ್ರಿವೇಲ್ ಬಿಡುಗಡೆ ಮಾಡಿದ್ದರು. ಈ ವಿಡಿಯೋವನ್ನು ನಂಬಿದರೆ ಮತ ಸೆಳೆಯುವುದು ಕಷ್ಟಕರವೂ ಆಗಲಾರದು.

Thirumavalavan

ಆದರೆ, ಜಯಲಲಿತಾ ಅವರು ಜ್ಯೂಸ್ ಹೀರುತ್ತಿರುವ ವಿಡಿಯೋ ಶೂಟ್ ಆಗಿದ್ದು ಎಲ್ಲಿ, ಎಂದು, ಯಾವ ಸಮಯದಲ್ಲಿ? ಇದನ್ನು ದೃಢೀಕರಿಸುವವರು ಯಾರು? ಇದು ಆರ್ ಕೆ ನಗರ ಉಪಚುನಾವಣೆಯಲ್ಲಿ ಎಷ್ಟು ಮಹತ್ವ ಪಡೆಯಲಿದೆ? ಎಂಬುದು ಚುನಾವಣೆ ಫಲಿತಾಂಶ ಪ್ರಕಟವಾದ ನಂತರವೇ ತಿಳಿಯಲಿದೆ.

ತಮಿಳುನಾಡಿನ ಜನರು ಎಷ್ಟು ಭಾವುಕರು, ಅದರಲ್ಲಿಯೂ ಜಯಲಲಿತಾ ವಿಷಯದಲ್ಲಿ ಎಷ್ಟು ಭಾವನಾತ್ಮಕವಾಗಿ ಅಂಟಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಜಯಲಲಿತಾ ಅವರು ಜೈಲಿಗೆ ಹೋದರೇ ಗೋಳೋ ಎಂದು ಅಳುವವರಿದ್ದರು. ಇನ್ನು ಅವರು ತೀರಿಕೊಂಡಾಗ ಶೋಕಸಾಗರವೇ ತಮಿಳುನಾಡಿನಲ್ಲಿ ಉಕ್ಕಿ ಹರಿದಿತ್ತು.

ಇದೆಲ್ಲವನ್ನು ಮನಗಂಡು, ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಪ್ರತಿಷ್ಠಿತ ಕಣವಾದ ಡಾ. ರಾಧಾಕೃಷ್ಣ ನಗರಕ್ಕೆ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಅತ್ಯಂತ ಜಾಣತನದಿಂದ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಆರ್ ಕೆ ನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಎಐಎಡಿಎಂಕೆ ಪಕ್ಷದಿಂದ ಈ ಮಧುಸೂಧನ್, ಪಕ್ಷದಿಂದ ಉಚ್ಛಾಟಿತರಾಗಿರುವ ವಿವಾದಾತ್ಮಕ ನಾಯಕ ಟಿಟಿವಿ ದಿನಕರನ್ ಮತ್ತು ಡಿಎಂಕೆ ಪಕ್ಷದಿಂದ ಎನ್ ಮರುಧು ಗಣೇಶ್ ಅವರು ಸ್ಪರ್ಧೆಗಿಳಿಸಿದ್ದಾರೆ. ಡಿಸೆಂಬರ್ 21ರಂದು ಚುನಾವಣೆ ನಡೆಯುತ್ತಿದ್ದರೆ, ಡಿಸೆಂಬರ್ 24ರಂದು ಭಾನುವಾರ ಫಲಿತಾಂಶ ಹೊರಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Viduthalai Chiruthaigal Katchi leader Thirumavalavan says, Jayalalitha treatment video might be shooted at Poes garden house and not at Apollo hospital, where Jayalalithaa was treated and breathed her last on December 5, 2016.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ