'ಎರಡೆಲೆ ಚಿನ್ಹೆ' ನಮಗೆ ಕೊಡಿ, ಚುನಾವಣಾ ಆಯೋಗಕ್ಕೆ 3,10,000 ಅಫಿಡವಿಟ್!

ನವದೆಹಲಿ, ಜೂನ್ 12: ತಮಿಳುನಾಡು ರಾಜಕಾರಣವೇ ಹಾಗೆ ಅಲ್ಲಿ ನಗೆ ಉಕ್ಕುವ ಸನ್ನಿವೇಶಗಳಿಗೆ ಬರವೇ ಇಲ್ಲ. ಎಐಎಡಿಎಂಕೆಯ ಎರಡು ಬಣಗಳ ಜತೆ ಮಾತುಕತೆ ಮುರಿದು ಬೀಳುತ್ತಿದ್ದಂತೆ ಎರಡೆಲೆ ಚಿನ್ಹೆ ನಮಗೇ ಕೊಡಿ ಎಂದು ಮುಖ್ಯಮಂತ್ರಿ ಇ ಪಳನಿಸ್ವಾಮಿ ಬೆಂಬಲಿಗರು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.

ಆದರೆ ಇದಕ್ಕೆ ಅವರು ಬಳಸಿರುವ ಮಾರ್ಗ ಮಾತ್ರ ನಗು ತರಿಸುತ್ತಿದೆ. ಬರೋಬ್ಬರಿ 3,10,000 ಅಫಿಡವಿಟ್ ಗಳನ್ನು 4 ಟ್ರಕ್ ಗಳಲ್ಲಿ ತುಂಬಿ ತಮಿಳುನಾಡು ಕಾನೂನು ಸಚಿವ ಸಿವಿ ಶಣ್ಮುಗನ್ ಚುನಾವಣಾ ಆಯೋಗದ ಕಚೇರಿಗೆ ಸೋಮವಾರ ಭೇಟಿ ನೀಡಿದ್ದಾರೆ. ಇವರ ಅಫಿಡವಿಟ್ ಗಳನ್ನು ನೋಡಿ ಚುನಾವಣಾ ಆಯೋಗದ ಅಧಿಕಾರಿಗಳು ಸುಸ್ತು ಬೀಳುವುದೊಂದು ಬಾಕಿ.

The visit to the EC comes a day after former chief minister O panneerselvam, dissolved a seven-member panel.

ಈ ಅಫಿಡವಿಟ್ ಗಳಲ್ಲಿ ಇ ಪಳನಿಸ್ವಾಮಿಗೆ ಬೆಂಬಲ ಸೂಚಿಸಿ ಕಾರ್ಯಕರ್ತರು ಹಾಕಿರುವ ಸಹಿಗಳಿವೆ ಎನ್ನಲಾಗಿದೆ. ಮಾತ್ರವಲ್ಲ ತಮಗೆ 123 ಶಾಸಕರ ಬೆಂಬಲವಿದೆ ಎಂದು ಪಳನಿಸ್ವಾಮಿ ಪ್ರತಿಪಾದಿಸಿದ್ದಾರೆ.

ವಿಲೀನ ಪ್ರಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ತಾವು ರಚಿಸಿದ್ದ ಸಮಿತಿಯನ್ನು ವಿಸರ್ಜನೆ ಮಾಡುತ್ತಿದ್ದಂತೆ ಪಳನಿಸ್ವಾಮಿ ಬಣದ ಸದಸ್ಯರು ಈ ನಡೆ ಅನುಸರಿಸಿದ್ದಾರೆ.

ನಮಗೆ ಪಕ್ಷದ ಕಾರ್ಯಕರ್ತರ ಬೆಂಬಲವಿದೆ. ನಾವು ಎರಡೆಲೆ ಗುರುತು ಪಡೆದೇ ಪಡೆಯುತ್ತೇವೆ ಎಂದು ಪಳನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+