ಲಾಕ್‌ಡೌನ್ : ದಿವ್ಯಾಂಗರ ಕುಟುಂಬಕ್ಕೆ ತಂತ್ರಜ್ಞಾನ ನೆರವಾಗಿದ್ದು ಹೇಗೆ?
ಚೆನ್ನೈ, ಏಪ್ರಿಲ್ 24: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕಣ್ಣಿದ್ದರೂ ಮನೆಯಿಂದ ಹೊರಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಿರಲಿಲ್ಲ.
ಹಾಗಾದರೆ ದಿವ್ಯಾಂಗರ ಕುಟುಂಬದ ಕತೆ ಏನಾಗಿರಬಹುದು ಎಂದು ಯಾರೂ ಆಲೋಚನೆ ಮಾಡಿರಲಿಕ್ಕಿಲ್ಲ. ಆಟೋಗಳಿಲ್ಲ, ಬಸ್‌ಗಳಿಲ್ಲ ಅಂಗಡಿವರೆಗೆ ಹೋಗುವುದಾದರೂ ಹೇಗೆ ಎಂದು ಆಲೋಚಿಸುತ್ತಿರುವಾಗ ಮಧುರೈನ ಉನ್ನಿಪ್ಪೋಳ್ ಒರುವನ್ ಸಂಸ್ಥೆ ಸಹಾಯಕ್ಕೆ ಬಂದಿದೆ.
ಈ ಸಂಸ್ಥೆಯು ಈಗಾಗಲೇ ದಿವ್ಯಾಂಗರಿಗಾಗಿಯೇ ವಾಟ್ಸಾಪ್, ಟೆಲಿಗ್ರಾಮ್ ಮಾದರಿಯ ಮೆಸೇಜಿಂಗ್ ವೇದಿಕೆಯನ್ನು ಸೃಷ್ಟಿಸಿದೆ.ಅದರಲ್ಲಿ ಇಡೀ ರಾಜ್ಯಾದ್ಯಂತ ಇರುವ ದಿವ್ಯಾಂಗರು ಸದಸ್ಯರಿದ್ದಾರೆ. ಅವರ ಮೂಲಕ ಲಾಕ್‌ಡೌನ್ ಸಮಯಲ್ಲಿ ದಿಬ್ಯಾಂಗರ ಕುಟುಂಬಗಳಿಗೆ ನೆರವು ನೀಡಲು ಸಹಕಾರಿಯಾಗಿದೆ.

ಎಲ್ಲರೂ ಸೇರಿ 90 ಸಾವಿರಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿದ್ದು 90ಕ್ಕೂ ಹೆಚ್ಚು ದಿವ್ಯಾಂಗರ ಕುಟುಂಬದಕ್ಕೆ ಸಹಾಯ ಮಾಡಿದ್ದಾರೆ.
ಯಾರ್ಯಾರ ಕುಟುಂಬದಲ್ಲಿ ಬ್ಯಾಂಕ್ ಖಾತೆ ಇದೆಯೋ ಅವರಿಗೆ ಸಾವಿರ ರೂ ಹಣ ವರ್ಗಾಯಿಸಲಾಗಿತ್ತು. ಖಾತೆ ಇಲ್ಲದವರ ಮನೆಗೆ ಖುದ್ದಾಗಿ ತೆರಳಿಯೂ ಹಣ ನೀಡಲಾಗಿತ್ತು ಎಂದು ಸಂಸ್ಥೆಯ ಅಡ್ಮಿನಿಸ್ಟ್ರೇಟರ್ ಕೆ. ಬಾಲಮುರುಗನ್ ತಿಳಿಸಿದ್ದಾರೆ.
ವಾಟ್ಸಾಪ್ ಗ್ರೂಪ್ ಒಂದರಲ್ಲಿ 190 ಮಂದಿ ಸದಸ್ಯರಿದ್ದಾರೆ 2015ರಲ್ಲಿ ಈ ಗ್ರೂಪ್ ತೆರೆಯಲಾಗಿತ್ತು. ಗಜ ಚಂಡ ಮಾರುತ ಬಂದಿದ್ದ ಸಮಯದಲ್ಲೂ ದೇಣಿಗೆಯನ್ನು ಸಂಗ್ರಹಿಸಿ ಸಾಕಷ್ಟು ಕುಟುಂಬಗಳಿಗೆ ನೀಡಿದ್ದೆವು.ನಾವು ಆದಷ್ಟು ದಿವ್ಯಾಂಗ ಕುಟುಂಬಗಳಿಗೆ ಸಹಾಯ ಮಾಡುವ ಆಶಯವನ್ನು ಹೊಂದಿದ್ದೇವೆ ಎಂದು ಬಾಲಮುರುಗನ್ ತಿಳಿಸಿದ್ದಾರೆ.












Click it and Unblock the Notifications