ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿ ಶುಭಶ್ರಿ ಸಾವು ಪ್ರಕರಣ: ಸೊಸೆಯ ಸ್ವಾಗತಕ್ಕೆ ಮಗಳ ಬಲಿ ಎಂದ ಕೋರ್ಟ್!

|
Google Oneindia Kannada News

ಚೆನ್ನೈ, ಅಕ್ಟೋಬರ್ 16: ನ್ಯಾಯಾಲಯವನ್ನೂ ಭಾವುಕವಾಗಿಸಿದ ಟೆಕ್ಕಿ ಶುಭಶ್ರೀ ಸಾವಿನ ಕುರಿತಂತೆ ಮತ್ತೊಮ್ಮೆ ಮದ್ರಾಸ್ ಹೈಕೋರ್ಟ್ ವಿಷಾದವಾಗಿ ಪ್ರತಿಕ್ರಿಯೆ ನೀಡಿದೆ.

"ಸೊಸೆಯನ್ನು ಭರಮಾಡಿಕೊಳ್ಳುವಾಗ ಮಗಳ ಬಲಿ ನೀಡಲಾಗಿದೆ" ಎಂದಿರುವ ಕೋರ್ಟ್ ಶುಭಶ್ರೀ ಎಂಬ ಮುಗ್ಧ ಟೆಕ್ಕಿಯ ದಾರುಣ ಸಾವಿಗೆ ಸ್ವತಃ ಮರುಗಿದೆ.

ಎಐಎಡಿಎಂಕೆ ಮುಖಂಡ ಸಿ ಜಯಗೋಪಾಲ್ ಪುತ್ರನ ಮದುವೆಯ ಸಲುವಾಗಿ ಅತಿಥಿಗಳನ್ನು ಸ್ವಾಗತಿಸಿ, ದಂಪತಿಯನ್ನು ಅಭಿನಂದಿಸಿ ಹಾಕಿದ್ದ ಫ್ಲೆಕ್ಸ್ ಬಿದ್ದು ಶುಭಶ್ರಿ ಸಾವಿಗೀಡಾಗಿದ್ದರು.

ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ

ಈ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಜಯಗೋಪಾಲ್ ತಮ್ಮ ಸೊಸೆಯನ್ನು ಸ್ವಾಗತಿಸುವ ಸಂದರ್ಭದಲ್ಲಿ ಒಬ್ಬ ಮಗಳ ಸಾವಿಗೆ ಕಾರಣರಾಗಿದ್ದಾರೆ ಎಂದು ಅದು ಹೇಳಿದೆ.

ಕೋರ್ಟ್ ಆದೇಶಕ್ಕೆ ಕವಡೆ ಕಿಮ್ಮತ್ತಿಲ್ಲ!

ಕೋರ್ಟ್ ಆದೇಶಕ್ಕೆ ಕವಡೆ ಕಿಮ್ಮತ್ತಿಲ್ಲ!

ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಅವರ ಮೇಲೆ ಫ್ಲೆಕ್ಸ್ ಬಿದ್ದ ಪರಿಣಾಮ ಅವರು ರಸ್ತೆಯ ಮೇಲೆ ಬಿದ್ದಿದ್ದರು. ಅದೇ ಸಮಯಕ್ಕೆ ಸರಿಯಾಗಿ ಟ್ರಕ್ ವೊಂದು ವೇಗವಾಗಿ ಬಂದು ಅವರ ಮೇಲೆ ಹರಿದ ಕಾರಣ ಅವರು ಮೃತಪಟ್ಟಿದ್ದರು. ಅಕ್ರಮ ಫ್ಲೆಕ್ಸ್ ಬ್ಯಾನರ್ ಗಳನ್ನು ನಿಷೇಧಿಸಬೇಕು ಎಂದು ನ್ಯಾಯಾಲಯವೇ ಆದೇಶಿಸಿದ್ದರೂ ಅದನ್ನು ಧಿಕ್ಕರಿಸಿದ್ದು ಸ್ಪಷ್ಟವಾಗಿತ್ತು. ಕೋರ್ಟ್ ಆದೇಶಕ್ಕೆ ಕವಡೆ ಕಿಮ್ಮತ್ತಿಲ್ಲ ಎಂಬುದನ್ನು ಸ್ವತಃ ಎಐಎಡಿಎಂಕೆ ನಾಯಕರೇ ಸ್ಪಷ್ಟಪಡಿಸಿದ್ದರು!

'ಈ ಬೆಂಕಿಯುರಿಯನ್ನು ಸಹಿಸುತ್ತೀಯಾ?' ಶುಭಶ್ರೀ ಶವದ ಮುಂದೆ ತಂದೆಯ ರೋದನ'ಈ ಬೆಂಕಿಯುರಿಯನ್ನು ಸಹಿಸುತ್ತೀಯಾ?' ಶುಭಶ್ರೀ ಶವದ ಮುಂದೆ ತಂದೆಯ ರೋದನ

ಸಿ ಜಯಗೋಪಾಲ್ ಬಂಧನ

ಸಿ ಜಯಗೋಪಾಲ್ ಬಂಧನ

ಘಟನೆ ಬಳಿಕ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಆಡಳಿತಾರೂಢ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಮುಖಂಡ ಜಯಗೋಪಾಲ್ ಅವರನ್ನು ಕೃಷ್ಣಗಿರಿ ಜಿಲ್ಲೆಯಲ್ಲಿ ಬಂಧಿಸಲಾಗಿತ್ತು. ಇದೀಗ ಅವರು ವಿಚಾರಣೆ ಎದುರಿಸುತ್ತಿದ್ದಾರೆ.

Array

ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯ

ಹೆಲ್ಮೆಟ್ ಧರಿಸಿಯೇ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಶುಭಶ್ರೀ ಮೇಲೆ ಅಕ್ರಮ ಫ್ಲೆಕ್ಸ್ಸ ವೊಂದು ಬಿದ್ದ ಪರಿಣಾಮ ಆಕೆ ಗಾಡಿಯಿಂದ ರಸ್ತೆಗೆ ಉರುಳಿದ್ದರು. ಅದೇ ಸಂದರ್ಭದಲ್ಲಿ ವೇಗವಾಗಿ ಬಂದ ಟ್ರಕ್ ಅವರ ಮೇಲೆ ಹರಿದು ಆಕೆ ಅಸುನೀಗಿದ್ದರು. ಆಕೆಯ ಕೊನೆಯ ಕ್ಷಣಗಳು ಕ್ಯಾಮರಾವೊಂದರಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಶುಭಶ್ರೀ, ರಘು ಬಲಿಯಾಗಿದ್ದು ಒಂದೇ ರೀತಿ! ಮರುಕಳಿಸಿತು ಅದೇ ದೃಶ್ಯಶುಭಶ್ರೀ, ರಘು ಬಲಿಯಾಗಿದ್ದು ಒಂದೇ ರೀತಿ! ಮರುಕಳಿಸಿತು ಅದೇ ದೃಶ್ಯ

ಏನಿದು ಘಟನೆ?

ಏನಿದು ಘಟನೆ?

ಸೆಪ್ಟೆಂಬರ್ 12 ರಂದು ಗುರುವಾರಸಂಜೆ ಆಫಿಸಿನಿಂದ ಮನೆಗೆ ಮರಳುತ್ತಿದ್ದ ವೇಳೆ ಆಕೆಯ ಮೇಲೆ ಫ್ಲೆಕ್ಸ್ ಬಿದ್ದಿತ್ತು. ಅದೇ ಸಂದರ್ಭದಲ್ಲಿ ಆಕೆಯ ಮೇಲೆ ಟ್ರಕ್ ಹರಿದು ಆಕೆ ಅಸುನೀಗಿದ್ದರು. ಘಟನೆ ನಂತರ ಟ್ರಕ್ ಡ್ರೈವರ್ ನನ್ನು ಬಂಧೊಸಲಾಗಿತ್ತು.

English summary
Techie Subhasri Death: Daugter Lost On Welcoming Daughter In Law Says Madhras Court,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X