• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರ್ತಿ ಚಿದಂಬರಂ ಸೇರಿ ಮೂವರು ಸಂಸದರಿಗೆ ಕೊವಿಡ್-19 ಸೋಂಕು!

|

ಚೆನ್ನೈ, ಆಗಸ್ಟ್.03: ತಮಿಳುನಾಡಿನಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸಕ್ಕೆ ಸಾಮಾನ್ಯ ಜನರಷ್ಟೇ ಅಲ್ಲದೇ ಜನಪ್ರತಿನಿಧಿಗಳೂ ತತ್ತರಿಸಿ ಹೋಗಿದ್ದಾರೆ. ಕಳೆದ 24 ಗಂಟೆಗಳಲ್ಲೇ ರಾಜ್ಯದ ಮೂವರು ಲೋಕಸಭಾ ಸದಸ್ಯರು ಮತ್ತು ಒಬ್ಬ ಬಿಜೆಪಿ ಮುಖಂಡರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ.

   ರಾಮ ಮಂದಿರದಲ್ಲಿ ಬೆರೆಯಲಿದೆ ನೆಲಮಂಗಲ ಮಣ್ಣು | Oneindia Kannada

   ಸಿವಗಂಗಾ ಸಂಸದ ಕಾರ್ತಿ ಪಿ ಚಿದಂಬರಂ, ಮಾಯಿಲಾದುಥರೈ ಸಂಸದ ಎಸ್ ರಾಮಲಿಂಗಮ್, ನಾಗಪಟ್ಟಿನಂ ಸಂಸದ ಎಂ.ಸೆಲ್ವರಾಜ್ ಹಾಗೂ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರ ಅವರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

   38 ಬ್ಯಾಂಕ್ ಸಿಬ್ಬಂದಿಗೆ ಸೋಂಕು; ಗ್ರಾಹಕರಿಗೆ ಆತಂಕ

   ಭಾನುವಾರವೇ ನಾಗಪಟ್ಟಿನಂ ಸಂಸದ ಎಂ.ಸೆಲ್ವರಾಜ್ ಅವರಿಗೆ ಸೋಂಕು ಪತ್ತೆಯಾಗಿದ್ದು, ತಂಜಾವೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಂದೆಡೆ ತಮಗೆ ಕೊವಿಡ್-19 ಸೋಂಕು ತಗಲಿರುವ ಬಗ್ಗೆ ಸಂಸದ ಕಾರ್ತಿ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.

   ಸಂಸದ ಕಾರ್ತಿ ಚಿದಂಬರಂ ಟ್ವಿಟರ್ ಸಂದೇಶ:

   ನನಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಸೋಂಕಿನ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ವೈದ್ಯರು ನೀಡಿರುವ ಸಲಹೆ ಮೇರೆಗೆ ನಾನು ಗೃಹ ದಿಗ್ಬಂಧನದಲ್ಲಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಜೊತೆಗೆ ಸಂಪರ್ಕ ಹೊಂದಿದ್ದವರೆಲ್ಲ ಶಿಷ್ಟಾಚಾರದ ಪ್ರಕಾರ ಒಮ್ಮೆ ಕೊರೊನಾವೈರಸ್ ಸೋಂಕಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕಾರ್ತಿ ಚಿದಂಬರಂ ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

   English summary
   Tamil Nadu: Karti Chidambaram And Other Two MP's, One BJP Leader Tested Covid-19 Positive.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X