ತಮಿಳುನಾಡಿನಲ್ಲಿ ಅಕ್ಟೋಬರ್ 1 ರಿಂದ ಶಾಲೆಗಳು ಪುನರಾರಂಭ: ಮಾರ್ಗಸೂಚಿಯಲ್ಲೇನಿದೆ?
ಚೆನ್ನೈ, ಸೆಪ್ಟೆಂಬರ್ 24: ತಮಿಳುನಾಡಿನಲ್ಲಿ ಅಕ್ಟೋಬರ್ 1 ರಿಂದ ಶಾಲೆಗಳು ಪುನರಾರಂಭಗೊಳ್ಳಲಿದೆ.
10 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತೆರಳಬಹುದು ಎಂದು ಹೇಳಲಾಗಿದೆ. ತಮಿಳುನಾಡು ಸರ್ಕಾರವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ತಮ್ಮ ಸ್ವಿಚ್ಛೆಯಂತೆ ಶಾಲೆಗಳಿಗೆ ತೆರಳಬಹುದು.
ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾರ್ಗದರ್ಶನ ಬೇಕಿದ್ದರೆ, ಪೋಷಕರು ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬೇಕು. ಕಂಟೈನ್ಮೆಂಟ್ ಜೋನ್‌ಗಳಲ್ಲಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಾಲೆಗೆ ಹೋಗುವಂತಿಲ್ಲ.

ಸರ್ಕಾರದ ಮಾರ್ಗ ಸೂಚಿ ಇಂತಿವೆ:
-10 ರಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ಅವಕಾಶ, ಶಿಕ್ಷಕರು ಎರಡು ಬ್ಯಾಚ್‌ಗಳಲ್ಲಿ ಪಾಠ ಮಾಡಬೇಕು. ಮೊದಲ ಬ್ಯಾಚ್ ಸೋಮವಾರ, ಮಂಗಳವಾರ, ಬುಧವಾರ ಶಾಲೆಗೆ ಬಂದರೆ ಮತ್ತೊಂದು ಬ್ಯಾಚ್ ಗುರುವಾರ, ಶುಕ್ರವಾರ, ಶನಿವಾರ ಶಾಲೆಗೆ ಬರಬೇಕು ಎಂದು ತಿಳಿಸಿದೆ.
-ಶಾಲೆಯಲ್ಲಿರುವ ಫರ್ನಿಚರ್, ಬಾಗಿಲುಗಳು, ಕಿಟಕಿಗಳಿಗೆ ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ಸೊಲ್ಯೂಷನ್ ನೀಡಬೇಕು, ಪ್ರತಿ ದಿನ ಬೆಳಗ್ಗೆ ಇದನ್ನು ಮಾಡಬೇಕು.
-ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಒಟ್ಟೊಟ್ಟಿಗೆ ಓಡಾಡುವುದನ್ನು ಕೂಡ ನಿಷೇಧಿಸಲಾಗಿದೆ.
-6 ಅಡಿಗಳವರೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸ್ಟಾಫ್‌ರೂಂ, ಕಚೇರಿ ಪ್ರದೇಶದಲ್ಲಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
-ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ.ಹಾಗೆಯೇ ಪದೇ ಪದೇ ಮಾಸ್ಕ್‌ನ್ನು ಕೂಡ ಮುಟ್ಟುತ್ತಿರಬಾರದು.
-ಪ್ರತಿ ಶಾಲೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಅಳವಡಿಸಿರಬೇಕು
-ಒಬ್ಬ ವಿದ್ಯಾರ್ಥಿಯ ನೋಟ್‌ಬುಕ್, ಪೆನ್, ಪೆನ್ಸಿಲ್, ರಬ್ಬರ್, ನೀರಿನ ಬಾಟಲಿಗಳನ್ನು ಮತ್ತೊಬ್ಬ ವಿದ್ಯಾರ್ಥಿ ಮುಟ್ಟಕೂಡದು.












Click it and Unblock the Notifications