ತಮಿಳುನಾಡು; ಸ್ಮಗ್ಲರ್ಸ್ ಕೈಯಲ್ಲಿದ್ದ ಶಿವನ ವಿಗ್ರಹಕ್ಕೆ 500 ವರ್ಷಗಳ ಇತಿಹಾಸ!

ಚೆನ್ನೈ, ಮೇ 18: ತಮಿಳುನಾಡು ಪೊಲೀಸರ ಐಡಲ್ ವಿಂಗ್ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಂಗಳವಾರ 500 ವರ್ಷಗಳಷ್ಟು ಹಳೆಯದಾದ ವಿಶಿಷ್ಟವಾದ ಹಸಿರು ಕಲ್ಲಿನ ಶಿವನ ಪ್ರತಿಮೆ ವಶಪಡಿಸಿಕೊಂಡಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ರಾಜ್ಯದ ಪೂನಮಲ್ಲಿ ಪಟ್ಟಣದ ಬಳಿ ಕೆಲವರು ಪುರಾತನ ಶಿವನ ವಿಗ್ರಹವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳಿವು ಆಧರಿಸಿ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ವಿಗ್ರಹದ ಸಹಿತ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

25 ಕೋಟಿ ರೂಪಾಯಿಗೆ ಪ್ರತಿಮೆಯನ್ನು ಖರೀದಿಸಲು ಆಸಕ್ತಿ ಹೊಂದಿರುವ ಶ್ರೀಮಂತ ಪುರಾತನ ಸಂಗ್ರಹಕಾರರಂತೆ ನಟಿಸುವ ವೇಷದಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ತಮಿಳುನಾಡು ಮೂಲದ ಭಕ್ತವಾಚಲಂ (46) ಮತ್ತು ಎಸ್. ಬಾಕಿಯರಾಜ್ (42) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸ್ ಕಾರ್ಯಾಚರಣೆ: ಪೊಲೀಸರು ಶ್ರೀಮಂತ ಖರೀದಿದಾರರಂತೆ ನಟಿಸಿದ ನಂತರ ಮತ್ತು ವಿಗ್ರಹದ ಬೆಲೆ ಬಗ್ಗೆ ಯಶಸ್ವಿಯಾಗಿ ಮಾತುಕತೆ ಮಾಡಲು ಸಾಧ್ಯವಾಯಿತು. ತದನಂತರ, ಅವರು ವಿಗ್ರಹದ ತುಂಡು ತೋರಿಸಲು ಮಾರಾಟಗಾರರಿಗೆ ಮನವರಿಕೆ ಮಾಡಿದರು. ಪುರಾತನ ವಸ್ತುಗಳನ್ನು ಬಚ್ಚಿಟ್ಟಿದ್ದ ಕ್ಲೋಸೆಟ್‌ಗೆ ಇಬ್ಬರು ಪೊಲೀಸರನ್ನು ಕರೆದೊಯ್ದರು. ಆಗ ಪೊಲೀಸರು ಅದನ್ನು ವಶಪಡಿಸಿಕೊಂಡರು ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಿದರು. ಐಡಲ್ ವಿಂಗ್‌ನ ಡಿಜಿಪಿಯಾಗಿರುವ ಐಪಿಎಸ್ ಅಧಿಕಾರಿ ಜಯಂತ್ ಮುರಳಿ ಅವರು ವಿಗ್ರಹದ ಫೋಟೋಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

Tamil Nadu police Recoverd 500-year-old Lord Shiva idol from smugglers

500 ವರ್ಷಗಳಷ್ಟು ಹಳೆಯದಾದ ವಿಗ್ರಹ: ತನಿಖಾಧಿಕಾರಿಗಳ ಪ್ರಕಾರ 500 ವರ್ಷಗಳಷ್ಟು ಹಳೆಯದಾದ ವಿಗ್ರಹವು ಶಿವನ ಐದು ಮುಖಗಳನ್ನು ಹೊಂದಿರುವ ವಿಶಿಷ್ಟ ಚಿತ್ರಣವಾಗಿದೆ. ಇದು ಮೂಲತಃ ನೇಪಾಳದ ದೇವಾಲಯಕ್ಕೆ ಸೇರಿದೆ ಎಂದು ಹೇಳಲಾಗುತ್ತದೆ. ತಮಿಳುನಾಡು ಪೊಲೀಸ್ ಐಡಲ್ ವಿಂಗ್ ಪ್ರಕಾರ, ವಿಗ್ರಹದ ಕಳ್ಳಸಾಗಣೆಯಲ್ಲಿ ಬಂಧಿತ ಇಬ್ಬರನ್ನು ಹೊರತುಪಡಿಸಿ ಇತರರೂ ಭಾಗಿಯಾಗಿದ್ದಾರೆ.

Tamil Nadu police Recoverd 500-year-old Lord Shiva idol from smugglers

ತಮಿಳುನಾಡಿನ ಪೊಲೀಸ್ ಐಡಲ್ ವಿಂಗ್ ಯಶಸ್ಸು: ಕಳ್ಳಸಾಗಾಣಿಕೆದಾರರು ಮತ್ತು ಪುರಾತನ ವಸ್ತುಗಳ ಮಾರಾಟಗಾರರಿಂದ ಇಂತಹ ಹಲವಾರು ವಿಗ್ರಹಗಳನ್ನು ವಶಪಡಿಸಿಕೊಳ್ಳುವಲ್ಲಿ ತಮಿಳುನಾಡಿನ ಪೊಲೀಸರ ಐಡಲ್ ವಿಂಗ್ ಯಶಸ್ವಿಯಾಗಿದೆ. ರಾಜ್ಯದ ದೇವಾಲಯಗಳಲ್ಲಿನ ಅನೇಕ ವಿಗ್ರಹಗಳನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಿದ್ದರಿಂದ ಅವುಗಳನ್ನು ಪತ್ತೆಹಚ್ಚಿದ ನಂತರ ಅದನ್ನು ಪುನಃಸ್ಥಾಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+