ಶಶಿಕಲಾ ಸಾಮ್ರಾಜ್ಯದ ಮೇಲೆ ಐಟಿ ಕಣ್ಣು: ಚೆನ್ನೈನ 187 ಕಡೆ ಐಟಿ ದಾಳಿ

Posted By:
Subscribe to Oneindia Kannada

ಚೆನ್ನೈ, ನವೆಂಬರ್ 09: ದಿವಂಗತ ಜಯಲಲಿತಾ ಒಡೆತನದ ಜಯಾ ಟಿವಿ ಕಚೇರಿ ಮೇಲೆ ಇಂದು ಬೆಳಿಗ್ಗೆ ಆದಾಯ ತೆರಿಗೆ ಅಧಿಕಾರಿಗಳು(ಐಟಿ) ದಾಳಿನಡೆಸಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿರುವ ಜಯಾಟಿವಿ ಕಚೇರಿ ಸೇರಿದಂತೆ 187 ಸ್ಥಳಗಳಲ್ಲಿ ದಾಳಿ ನಡೆಸಿರುವ 700 ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಚಿತ್ರಗಳು: ಶಶಿಕಲಾ ನಟರಾಜನ್ ಸಾಮ್ರಾಜ್ಯದ ಮೇಲೆ ಐಟಿ ದಾಳಿ

'ಆಪರೇಶನ್ ಕ್ಲೀನ್ ಮನಿ' ಎಂಬ ಯೋಜನೆಯ ಅಡಿಯಲ್ಲಿ ಐಟಿ ಇಲಾಖೆ ಈ ದಾಳಿ ನಡೆಸುತ್ತಿದೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಯಾ ಟಿವಿ ಕಚೇರಿ ಮೇಲೆ ದಾಳಿ ನಡೆದಿದೆ.

ಎಐಎಡಿಎಂಕೆ ಮುಖ್ಯಸ್ಥನ ಮನೆ ಮೇಲೆ ಬೆಂಗಳೂರಿನಲ್ಲೂ ಐಟಿ ದಾಳಿ

Tamil Nadu: IT raid on Jaya Tv office in Chennai

ಟಿಟಿವಿ ದಿನಕರನ್ ಅವರಿಗೆ ಸೇರಿದ ಹಲವು ಸ್ಥಳಗಳಲ್ಲೂ ದಾಳಿ ನಡೆದಿದೆ.

ಜಯಲಲಿತಾ ಸಾವಿನ ವಿಚಾರದ ಸ್ಫೋಟಕ ಮಾಹಿತಿ ಹೊರಹಾಕಿದ ಸಚಿವ

Tamil Nadu: IT raid on Jaya Tv office in Chennai

ಆದಾಯ ತೆರಿಗೆ ವಂಚಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಜಯಲಲಿತಾ ಅವರು ಬದುಕಿರುವವರೆಗೂ ಅವರ ಸುಪರ್ದಿಯಲ್ಲಿದ್ದ ಜಯಾ ಟಿವಿಯ ಉಸ್ತುವಾರಿಯನ್ನು ಅವರ ಮರಣಾನಂತರ ಅವರ ಆಪ್ತೆ ಶಶಿಕಲಾ ನಟರಾಜನ್ ವಹಿಸಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Income tax raid on Jaya Tv office in Chennai which was owned by late Jayalalita, former chief minister of Tamil Nadu.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ