ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ತಮಿಳರಿಗೆ ನೆರವಾಗಲು ಸದನದಲ್ಲಿ ಅಂಗೀಕಾರ ನಿರ್ಣಯ: ಸ್ಟಾಲಿನ್

|
Google Oneindia Kannada News

ಚೆನ್ನೈ, ಮೇ 01: ಶ್ರೀಲಂಕಾ ದೇಶಕ್ಕೆ ಅಗತ್ಯ ತುರ್ತು ನೆರವು ಒದಗಿಸಲು ತಮಿಳುನಾಡು ಸರ್ಕಾರವು ಮುಂದಾಗಿದೆ. ನೆರವು ನೀಡಲು ಕೇಂದ್ರ ಅನುಮತಿ ಕೋರಿ ಸದನದಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ. ಶ್ರೀಲಂಕಾ ದೇಶಕ್ಕೆ ನೆರವು ಒದಗಿಸುವ ಸಲುವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದರು.

ಆರ್ಥಿಕವಾಗಿ ನಲುಗಿ ಹೋಗಿರುವ ಶ್ರೀಲಂಕಾ ಅನೇಕ ದೇಶಗಳಿಂದ ನೆರವು ಕೋರಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶ್ರೀಲಂಕಾ ದೇಶಕ್ಕೆ ಅಕ್ಕಿ ಹಾಗೂ ಇತರೆ ಧಾನ್ಯ ಪದಾರ್ಥಗಳು ಹಾಗೂ ಅಗತ್ಯ ಔಷಧಿಗಳನ್ನು ಪೂರೈಸಲು ತಮಿಳುನಾಡು ಸದನದಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದ್ದು, ಕೇಂದ್ರವು ಅನುಮತಿ ನೀಡಲು ಸದನದಲ್ಲಿ ಒತ್ತಾಯಿಸಲಾಗಿದೆ.

ಶ್ರೀಲಂಕಾ ಬಿಕ್ಕಟ್ಟಿಗೆ ಏನು ಕಾರಣ? ಒಂದು ಅವಲೋಕನ ಶ್ರೀಲಂಕಾ ಬಿಕ್ಕಟ್ಟಿಗೆ ಏನು ಕಾರಣ? ಒಂದು ಅವಲೋಕನ

ಇನ್ನು ಶ್ರೀಲಂಕಾಕ್ಕೆ ನೀಡುತ್ತಿರುವ ಈ ಸಹಾಯವನ್ನು ತಮಿಳುನಾಡಿನ ಬಿಜೆಪಿಯ ಘಟಕವು ಕೂಡ ಸ್ವಾಗತಿಸಿದೆ ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳದೇ ತಮಿಳುನಾಡು ಈ ನಿರ್ಧಾರವನ್ನು ಅಂಗೀಕರಿಸಲಾಗಿದ್ದು ಪ್ರತಿಪಕ್ಷಗಳಿಂದ ಎಂ.ಕೆ. ಸ್ಟಾಲಿನ್ ವಿಧಾನಸಭೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಎಎಂಡಿಎಂಕೆ ಮತ್ತು ಬಿಜೆಪಿ ಪಕ್ಷಗಳಿಂದ ಸರ್ವಾನುಮತದಿಂದ ಸದನದಲ್ಲಿ ಈ ನಿರ್ಣಯವನ್ನು ಅಂಗೀಕರಿಲಾಯಿತು. ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಬೆಂಬಲವನ್ನು ನೀಡಿರುವ ವಿರೋಧ ಪಕ್ಷದ ಎಐಎಡಿಎಂಕೆಯ ಉಪ ನಾಯಕ ಓ ಪನ್ನೀರ ಸೆಲ್ವಂ ಅವರು ತಾವು ವೈಯಕ್ತಿಕವಾಗಿ 50 ಲಕ್ಷ ರೂ. ನೀಡುವುದಾಗಿ ಶ್ರೀಲಂಕಾ ತಮಿಳರಿಗೆ ಸಹಾಯ ನೀಡುವುದಾಗಿ ಸದನದಲ್ಲಿ ತಿಳಿಸಿದರು.

Tamil Nadu has not received any official approval from the Center for assistance to Sri Lanka

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ವಿಧಾನಸಭೆಯಲ್ಲಿ ಮಾತನಾಡಿ, ಶ್ರೀಲಂಕಾಕ್ಕೆ ನೆರವು ನೀಡಲು ಹಾಗೂ ಅಗತ್ಯ ಸರಬರಾಜು ಕಳುಹಿಸಲು ಕೇಂದ್ರದ ಒಪ್ಪಿಗೆಯನ್ನು ಪಡೆದುಕೊಳ್ಳಲು ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಅಧಿಕೃತವಾದ ಮಾಹಿತಿ ನಮಗೆ ತಲುಪಿಲ್ಲ ಹಾಗೂ ಯಾವುದೇ ಅಧಿಕೃತವಾದ ಸಂವಹನವೂ ಕೂಡ ಬಂದಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರಿದರು.

Tamil Nadu has not received any official approval from the Center for assistance to Sri Lanka

ನಿರ್ಣಯದಲ್ಲಿನ ವ್ಯತ್ಯಾಸಗಳನ್ನು ಎತ್ತಿ ತೋರಿಸಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥರು, "ತಮಿಳುನಾಡು ಅಸೆಂಬ್ಲಿಯಲ್ಲಿ ಅಂಗೀಕರಿಸಿದ ನಿರ್ಣಯವು ಈಗಾಗಲೇ ಶ್ರೀಲಂಕಾಕ್ಕೆ ಕೇಂದ್ರವು ಏನು ನೀಡಿದೆ ಮತ್ತು ಒದಗಿಸುತ್ತಿದೆ ಎಂಬುದರ ಕುರಿತು ಮಾಹಿತಿಯನ್ನು ಹೊಂದಿಲ್ಲದಿರುವುದು ದುರದೃಷ್ಟಕರ" ಎಂದು ಹೇಳಿದರು.

English summary
Tamil Nadu Chief Minister Stalin had recently met Prime Minister Narendra Modi in Delhi. But the resolution was passed in the House seeking permission from the Tamil Nadu government to provide emergency assistance to the Sri Lankan nation without obtaining any information from the Center,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X