ತಮಿಳುನಾಡಿನಲ್ಲಿ ಇನ್ಮುಂದೆ 'ಅಮ್ಮ ಪೆಟ್ರೋಲ್ ಬಂಕ್' ಓಪನ್
ಚೆನ್ನೈ, ಜೂನ್ 16: ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಜನಪ್ರಿಯ ಯೋಜನೆಗಳ ಸಾಲಿಗೆ ಮತ್ತೊಂದು ಸೇರ್ಪಡೆಗೊಂಡಿದೆ. 'ಅಮ್ಮ' ಬ್ರ್ಯಾಂಡ್ ಮತ್ತೊಮ್ಮೆ ಜೀವಂತಗೊಂಡಿದೆ.
ತಮಿಳುನಾಡಿನಲ್ಲಿ ಇನ್ಮುಂದೆ 'ಅಮ್ಮ ಪೆಟ್ರೋಲ್ ಬಂಕ್' ಗಳು ಕಾರ್ಯನಿರ್ವಹಿಸಲಿವೆ ಎಂದು ತಮಿಳುನಾಡಿನ ಆಹಾರ ಸಚಿವ ಕಾಮರಾಜ್ ಅವರು ಶುಕ್ರವಾರದಂದು ಘೋಷಿಸಿದ್ದಾರೆ. ಮೊದಲ ಹಂತದಲ್ಲಿ ರಾಜ್ಯದ ಹತ್ತು ಕಡೆಗಳಲ್ಲಿ ಪೆಟ್ರೋಲ್ ಬಂಕ್ ಓಪನ್ ಆಗಲಿದೆ.

ಚೆನ್ನೈ, ವೆಲ್ಲೂರು, ಸೇಲಂ, ತಾಂಜಾವೂರ್, ಮದುರೈ, ವಿಲ್ಲುಪುರಂ, ಕರೂರು, ತಿರುವರೂರು, ನಾಗಪಟ್ಟಣಂ ಗಳಲ್ಲಿ ಪೆಟ್ರೋಲ್ ಬಂಕ್ ಆರಂಭವಾಗಲಿದೆ. ಅಮ್ಮ ಪೆಟ್ರೋಲ್ ಬಂಕ್ ಗಳಲ್ಲಿ ಸಬ್ಸಿಡಿ ದರದಲ್ಲಿ ಉತ್ಪನ್ನ ಹಾಗೂ ಸೇವೆಗಳು ಲಭ್ಯವಾಗಲಿದೆ. ದಿವಂಗತ ಜೆ ಜಯಲಲಿತಾ ಅವರ ಆಶಯದಂತೆ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.












Click it and Unblock the Notifications