ಉದ್ಯಮಿ ಶೇಖರ್ ರೆಡ್ಡಿ ಡೈರಿಯಲ್ಲಿ ಎಐಎಡಿಎಂಕೆ ನಾಯಕರು
ಬೆಂಗಳೂರು, ಡಿಸೆಂಬರ್ 08: ಗಣಿ ಉದ್ಯಮಿ ಶೇಖರ್ ರೆಡ್ಡಿ ಡೈರಿ ಮತ್ತೆ ಸುದ್ದಿಯಲ್ಲಿದೆ. ತನಿಖಾ ಸಂಸ್ಥೆಗಳು ಡೈರಿ ಕೆದಕಿದಾಗ ಎಐಎಡಿಎಂಕೆ ನಾಯಕರಿಗೆ ಕಪ್ಪ ಕಾಣಿಕೆ ಸಲ್ಲಿಕೆಯಾಗಿರುವುದು ಪತ್ತೆಯಾಗಿದೆ.
ಡೈರಿಯಲ್ಲಿ ಎಐಎಡಿಎಂಕೆ ನಾಯಕರ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದೆ. ಡೈರಿಯಲ್ಲಿ ತಮಿಳುನಾಡು ಸರ್ಕಾರದ ಕ್ಯಾಬಿನೆಟ್ ಸಚಿವರುಗಳ ಹೆಸರುಗಳೇನು ಸಿಕ್ಕಿಲ್ಲ. ಆದರೆ, ಕೋಟ್ಯಂತರ ರುಪಾಯಿ ಮೊತ್ತದ ಬಗ್ಗೆ ಉಲ್ಲೇಖವಿದೆ.
ಸುಮಾರು 2.5 ಕೋಟಿ ರು ಮುಖ್ಯಮಂತ್ರಿಗೆ ಸಲ್ಲಿಕೆಯಾಗಿರುವ ಬಗ್ಗೆ ಮಾಹಿತಿ ಇದೆ. ಆದರೆ, ಯಾವ ಮುಖ್ಯಮಂತ್ರಿ ಎಂಬುದು ತಿಳಿದು ಬಂದಿಲ್ಲ.

'ಹೆಲ್ತ್' ಹೆಸರಿನ ವ್ಯಕ್ತಿಗೆ ಹಣ ಸಂದಾಯವಾಗಿದ್ದು, ಅವಧಿಯನ್ನು ಗಮನಿಸಿದರೆ ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದ ಕಾಲವನ್ನು ಸೂಚಿಸುತ್ತದೆ. ನವೆಂಬರ್ 23,2016ರಲ್ಲಿ 2ಕೋಟಿ ರು 'health' ಗೆ ಸಂದಾಯವಾಗಿದೆ. ನಂತರ ಅದೇ ವ್ಯಕ್ತಿಗೆ 3 ಕೋಟಿ ರು ಸಲ್ಲಿಸಲಾಗಿದೆ.
ರೆಡ್ಡಿ ವಿರುದ್ಧ ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ ಪಿಎಂಎಲ್ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅಪನಗದೀಕರಣ ಜಾರಿಗೆ ಬಂದ ಬಳಿಕ ಕಪ್ಪು ಹಣವನ್ನು ಬಿಳಿ ಮಾಡಲು ಯತ್ನಿಸಿದ ಆರೋಪದ ಮೇಲೆ ಸಿಬಿಐ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.












Click it and Unblock the Notifications