ಜಯಲಲಿತಾಗೆ ಹೃದಯಾಘಾತ, ಟ್ವಿಟ್ಟರ್ ನಲ್ಲೂ ಆಘಾತ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 04: ತಮಿಳುನಾಡಿನ ಸಿಎಂ ಜಯಲಲಿತಾ ಅವರಿಗೆ ಹೃದಯಾಘಾತವಾಗಿರುವ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ವ್ಯಾಪಿಸುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಜಯಾ ಅವರ ಆರೋಗ್ಯ ಸುಧಾರಣೆ ಬಗ್ಗೆ ಶುಭ ಹಾರೈಕೆ ಸಂದೇಶಗಳು ಹರಿದು ಬಂದಿವೆ. ಜತೆಗೆ ಗಾಳಿಸುದ್ದಿಗಳು ಹಬ್ಬುತ್ತಿವೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಭಾನುವಾರ ಸಂಜೆ ಜಯಾ ಅವರ ಆರೋಗ್ಯ ಸುಧಾರಣೆ ಬಗ್ಗೆ ಪ್ರಕಟಣೆ ಹೊರಡಿಸಿದ ಕೆಲ ಗಂಟೆಗಳಲ್ಲೇ ಹೃದಯಾಘಾತವಾದ ಸುದ್ದಿ ಹೊರ ಬಂದಿದೆ. [ಜಯಾಗೆ ಹೃದಯಾಘಾತ, ಅಪೊಲೊ ಆಸ್ಪತ್ರೆಗೆ ಬಿಗಿ ಭದ್ರತೆ]

Tamil Nadu CM Jayalalithaa suffers cardiac arrest Twitter Reaction

ಈ ನಡುವೆ ಗಾಳಿ ಸುದ್ದಿ ಹಬ್ಬಿಸಬೇಡಿ ಎಂದು ಎಐಎಡಿಎಂಕೆ ಮನವಿ ಮಾಡಿಕೊಂಡಿದೆ. ಅವಹೇಳನಕಾರಿ, ನಿಂದನೆ ಟ್ವೀಟ್, ಫೇಸ್ ಬುಕ್ ಪೋಸ್ಟ್ ಮೇಲೆ ಪೊಲೀಸರು ಈಗಾಗಲೇ ನಿಗಾ ವಹಿಸುತ್ತಿದ್ದಾರೆ.[ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಹೃದಯಾಘಾತ]

ಜಯಾ ಅವರ ಅನಾರೋಗ್ಯದ ಬಗ್ಗೆ ಬಂದಿರುವ ಟ್ವೀಟ್ ಗಳ ಸಂಗ್ರಹ ಇಲ್ಲಿದೆ. ಸೆಪ್ಟೆಂಬರ್ 22ರಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಾ ಅವರು ಇತ್ತೀಚೆಗೆ ಐಸಿಯುನಿಂದ ಹೊರ ಬಂದಿದ್ದರು.


ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There is heavy security outside the Apollo hospital where the Tamil Nadu Chief Minister J Jayalalithaa is being treated after suffering a cardiac arrest. Here are the Twitter reaction on the development
Please Wait while comments are loading...