ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾಗೆ ಸಿಂಗಪುರದಲ್ಲಿ ಹೆಚ್ಚಿನ ಚಿಕಿತ್ಸೆ

By Mahesh
|
Google Oneindia Kannada News

ಚೆನ್ನೈ, ಸೆ. 24: ತಮಿಳರ ಪಾಲಿನ 'ಅಮ್ಮ' ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ತೆರಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಜಯಲಲಿತಾ ಅವರಿಗೆ ಸದ್ಯ ಇಲ್ಲಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾದ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದರೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಆಪ್ತರು ಬಯಸಿದ್ದಾರೆ. [ಜಯಾ ಸಿಂಗಪುರಕ್ಕೆ ಹೋಗ್ಲಿ ಎಂದಿದ್ದು ಬದ್ಧವೈರಿ ಸ್ವಾಮಿ!]

ನಿತ್ರಾಣರಾಗಿದ್ದ ಜಯಲಲಿತಾ ಅವರಿಗೆ ಇದ್ದ ಸುಸ್ತು, ಜ್ವರ ಕಡಿಮೆಯಾಗಿದೆ. ಆದರೆ, ಸಿಂಗಪುರಕ್ಕೆ ಹೋಗುವುದು ಏಕೆ? ಬೇಡ ಇಲ್ಲೇ ಚಿಕಿತ್ಸೆ ಕೊಡಿ ಎಂದು ಜಯಲಲಿತಾ ಅವರು ಹಠ ಮಾಡುತ್ತಿದ್ದಾರಂತೆ.[ಜಯಲಲಿತಾ ಅವರ ಕಿಡ್ನಿ ಕಾರ್ಯ ನಿರ್ವಹಿಸುತ್ತಿಲ್ಲವೇ?]

Tamil Nadu CM Jayalalithaa to fly to Singapore for treatment
ಜಯಲಲಿತಾ ಅವರ ಆರೋಗ್ಯ ಸುಧಾರಣೆಗಾಗಿ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಜಯಲಲಿತಾ ಅವರಿಗೆ ಏನೇನು ಕಾಯಿಲೆ ಇದೆ ಎಂಬುದರ ಬಗ್ಗೆ ಊಹಾಪೋಹ ಸುದ್ದಿಗಳು ಹಬ್ಬುತ್ತಲೇ ಇರುತ್ತದೆ. ಇಲ್ಲಿ ತನಕ ಎಐಎಡಿಎಂಕೆ ಕೂಡಾ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.

ಆದರೆ, ಜಯಲಲಿತಾ ಅವರಿಗೆ ಅಧಿಕ ರಕ್ತದೊತ್ತಡ, ಬೆನ್ನು ನೋವು, ಮಧುಮೇಹ ಕಾಯಿಲೆ ಇದೆ. ಇದಕ್ಕೆಲ್ಲ ಇಲ್ಲೇ ಚಿಕಿತ್ಸೆ ಸಿಕ್ಕರೂ ಬಹುವರ್ಷಗಳಿಂದ ಕಾಡುತ್ತಿರುವ ಕಿಡ್ನಿ ಸಮಸ್ಯೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರ ಅಥವಾ ಅಮೆರಿಕಕ್ಕೆ ತೆರಳುವುದು ಅನಿವಾರ್ಯವಾಗಿದೆ.

English summary
Tamil Nadu Chief Minister J Jayalalithaa, admitted to Apollo Hospital late Thursday, likely to flown to Singapore for high sugar and kidney treatment, a report said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X