'ಆಯುಷ್ಮಾನ್ ಭಾರತ' ನೀಡಿದ್ದಕ್ಕೆ ನರೇಂದ್ರ ಮೋದಿಗೆ ನೊಬೆಲ್ ಶಾಂತಿ ಪುರಸ್ಕಾರ?

Recommended Video

      ನರೇಂದ್ರ ಮೋದಿಗೆ ನೊಬೆಲ್ ಶಾಂತಿ ಪುರಸ್ಕಾರ? | Oneindia Kannada

      ಚೆನ್ನೈ, ಸೆಪ್ಟೆಂಬರ್ 25: ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ ಡಾ.ತಮಿಳ್ ಸಾಯಿ ಸೌಂದರಾಜನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಸೂಚಿಸಿದ್ದಾರೆ.

      ವಿಶ್ವದ ಅತೀ ದೊಡ್ಡ ಆರೋಗ್ಯ ವಿಮೆ ಆಯುಷ್ಮಾನ್ ಭಾರತವನ್ನು ಉದ್ಘಾಟಿಸಿದ ಮೋದಿ ಅವರಿಗೆ ಈ ಗೌರವ ಸಿಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

      ಅಲ್ಲದೆ, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮೋದಿ ಅವರ ಹೆಸರನ್ನು ಶಿಫಾರಸ್ಸು ಮಾಡಲು ತಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಅವರು ಜನರ ಬಳಿ ಮನವಿ ಮಾಡಿದ್ದಾರೆ.

      Tamil Nadu BJP chief nominates PM Narendra Modi for Nobel Peace Prize

      "ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಆಯುಷ್ಮಾನ್ ಭಾರತ ಯೋಜನೆಯೂ ಕೋಟ್ಯಂತರ ಬಡವರ ಬದುಕಿನ ಆಶಾಕಿರಣವಾಗಲಿದೆ. ಇದು ಹಲವರ ಬದುಕನ್ನು ಬದಲಿಸಲಿದೆ" ಎಂದು ಅವರು ಹೇಳಿದರು.

      ಭಾರತದಲ್ಲಿ ಅತೀ ಹೆಚ್ಚು ವೆಚ್ಚವಾಗುವುದೇ ಆರೋಗ್ಯ ಕ್ಷೇತ್ರದಲ್ಲಿ. ಆದ್ದರಿಂದ ಜನರ ನಾಡಿಮಿಡಿತವನ್ನು ಅರಿತು, ಆಯುಷ್ಮಾನ್ ಭಾರತ ಅಥವಾ ಮೋದಿ ಕೇರ್ ನಂಥ ಯೋಜನೆಯನ್ನು ಜಾರಿಗೆ ತಂದಿದ್ದು ಮೋದಿ ಅವರ ಹೆಗ್ಗಳಿಕೆ ಎಂದು ಅವರು ಹೇಳಿದರು.

      ಮೋದಿಯವರ ಹೆಸರನ್ನು ಸೂಚಿಸುವುದಕ್ಕೆ ಜನವರಿ 31, 2019 ಕೊನೆಯ ದಿನವಾಗಿದೆ. ಸೆ.23 ರಂದು ಮೋದಿಯವರು ರಾಂಚಿಯಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೆ ತಂದರು. ಸುಮಾರು 10 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ವಾರ್ಷಿಕ ಸುಮಾರು 5 ಲಕ್ಷ ರೂ. ವರೆಗೆ ನಗದು ರಹಿತ ಆರೋಗ್ಯ ವಿಮೆ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+