ವೈರಲ್ ವಿಡಿಯೋ: ಹಣ ಹುಡುಕಿಕೊಂಡು ಎಟಿಎಂಗೆ ಬಂದ ಹಾವು!

ಚೆನ್ನೈ, ಏಪ್ರಿಲ್ 24: ಹಣ ಡ್ರಾ ಮಾಡೋಕಂತ ಎಟಿಎಂ ಗೆ ಹೋದರೆ, ಭುಸ್ ಅಂತ ನಾಗಪ್ಪನೇನಾದರೂ ಪ್ರತ್ಯಕ್ಷನಾದರೆ ಏನಾಗುತ್ತದೆ? ಅಯ್ಯೋ ದೇವ್ರೆ, ಈ ದುಡ್ಡು ಬೇಡ, ಏನೂ ಬೇಡ ಎಂದು ಕಾಲಿಗೆ ಬುದ್ಧಿ ಹೇಳಲೇಬೇಕಾಗುತ್ತದೆ! ಅಷ್ಟಕ್ಕೂ ಈ ಎಟಿಎಂ ಗೂ, ನಾಗಪ್ಪಂಗೂ ಏನು ಸಂಬಂಧ ಅಂತಿದ್ದೀರಾ? ಹೇಳ್ತೀವಿ ಕೇಳಿ...

ತಮಿಳುನಾಡಿನ ಕೊಯಿಮತ್ತೂರಿನ ತನೀರ್ ಪಂಡಲ್ ರಸ್ತೆಯ ಎಟಿಎಂ ವೊಂದರಲ್ಲಿ ನಾಗರಹಾವು ಸೇರಿಕೊಂಡು ಗ್ರಾಹಕರಿಗೆ ಭಾರೀ ಭಯ ಹುಟ್ಟಿಸಿತ್ತು. ಆ ಎಟಿಎಂ ನತ್ತ ಹೋಗುವುದಕ್ಕೂ ಜನರು ಹೆದರುತ್ತಿದ್ದರು. ನಂತರ ಉರಗ ತಜ್ಞರೊಬ್ಬರು ಆ ಹಾವನ್ನು ಎಟಿಎಂ ಯಂತ್ರದಿಂದ ಸುರಕ್ಷಿತವಾಗಿ ಹೊರತೆಗೆದು ಕಾಡಿಗೆ ಬಿಟ್ಟರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Tamil Nadu: A Snake found inside an ATM near Thaneerpandal Road in Coimbatore

ಮಂಗಳವಾರವಷ್ಟೇ, ಮೂರನೇ ಹಂತದ ಲೋಕಸಭೆ ಚುನಾವಣೆಯ ಸಮಯದಲ್ಲಿ ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರ ವಿವಿ ಪ್ಯಾಟ್ ನಲ್ಲಿ ಸಣ್ಣ ಹಾವೊಂದು ಕಾಣಿಸಿಕೊಂಡು ಮತದಾರರಲ್ಲಿ ಆತಂಕ ಮೂಡಿಸಿತ್ತು. ನಂತರ ಹಾವನ್ನು ಉರಗ ತಜ್ಞರು ವಿವಿಪ್ಯಾಟ್ ಮಶಿನ್ ನಿಂದ ತೆಗೆದು ಬೇರೆಡೆಗೆ ಸಾಗಿಸಿದ ನಂತರ ಮತದಾನ ಮುಂದುವರಿಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+