ಚೆನ್ನೈ ಸಿಲ್ಕ್ಸ್ ಮಳಿಗೆಗೆ ಬೆಂಕಿ, 7 ಮಂದಿ ರಕ್ಷಣೆ
ಚೆನ್ನೈನ ಆಭರಣ ಹಾಗೂ ವಸ್ತ್ರ ಮಳಿಗೆಗೆ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕ ಮೂಡಿಸಿತ್ತು. ಸರಿಯಾದ ಸಮಯಕ್ಕೆ ನೆರವು ಸಿಕ್ಕಿದ್ದರಿಂದ 7 ಮಂದಿಯನ್ನು ರಕ್ಷಿಸಲು ಸಾಧ್ಯವಾಯಿತು.
ಚೆನ್ನೈ, ಮೇ 30 : ಚೆನ್ನೈನ ಆಭರಣ ಹಾಗೂ ವಸ್ತ್ರ ಮಳಿಗೆಗೆ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕ ಮೂಡಿಸಿತ್ತು. ಸರಿಯಾದ ಸಮಯಕ್ಕೆ ನೆರವು ಸಿಕ್ಕಿದ್ದರಿಂದ 7 ಮಂದಿಯನ್ನು ರಕ್ಷಿಸಲು ಸಾಧ್ಯವಾಯಿತು.
ಚೆನ್ನೈನ ಟಿ ನಗರದಲ್ಲಿರುವ ಪ್ರಖ್ಯಾತ ಮಳಿಗೆ 'ಚೆನ್ನೈ ಸಿಲ್ಕ್ಸ್' ನಲ್ಲಿ ಬೆಳಗ್ಗೆ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ನಂತರ ಇಡೀ ಕಟ್ಟಡವನ್ನು ವ್ಯಾಪ್ತಿಸಿತು. ಹೊಗೆ, ಬೆಂಕಿ ನಡುವೆ ಸಿಲುಕಿದ್ದ ಮಳಿಗೆಯ 7 ಸಿಬ್ಬಂದಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ಕಟ್ಟಡದ ಏಳನೆ ಮಹಡಿಯ ಕ್ಯಾಂಟೀನ್ ಬಳಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. ಆ ಸಂದರ್ಭದಲ್ಲಿ 12 ಮಂದಿ ಆ ಭಾಗದಲ್ಲಿದ್ದರು.
ಐವರು ಅಲ್ಲಿಂದ ಕೆಳಗಿಳಿದು ಸುರಕ್ಷಿತವಾಗಿ ನೆಲ ಮಹದಿ ತಲುಪಿದರು. ಆದರೆ, ಮಿಕ್ಕವರನ್ನು ರಕ್ಷಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಡಬೇಕಾಯಿತು. ಸ್ಕೈ ಲಿಫ್ಟ್ ಬಳಸಿ ಒಬ್ಬೊಬ್ಬರನ್ನೇ ಕೆಳಗಿಳಿಸಿದ್ದಾರೆ. ಬೆಂಕಿ ಅನಾಹುತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಳಿಗೆಗೆ ಆಗಿರುವ ನಷ್ಟದ ಅಂದಾಜು ಇನ್ನೂ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications