ಜಯಾ ಸಿಂಗಪುರಕ್ಕೆ ಹೋಗ್ಲಿ ಎಂದಿದ್ದು ಬದ್ಧವೈರಿ ಸ್ವಾಮಿ!

Posted By:
Subscribe to Oneindia Kannada

ಚೆನ್ನೈ, ಸೆ. 24: ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಜೈಲು ಸೇರುವಂತೆ ಮಾಡಿದ್ದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಎಂಬುದು ಗೊತ್ತಿರಬಹುದು. ಈಗ ಅನಾರೋಗ್ಯ ಪೀಡಿತರಾದ ಜಯಲಲಿತಾ ಅವರಿಗೆ ಸಿಂಗಪುರಕ್ಕೆ ತೆರಳುವಂತೆ ಸ್ವಾಮಿ ಅವರೇ ಸಲಹೆ ನೀಡಿದ್ದಂತೆ. ಈ ಬಗ್ಗೆ ಟ್ವೀಟ್ ಕೂಡಾ ಹರಿದಾಡುತ್ತಿದೆ.

ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ತಮಿಳುನಾಡಿನ ಮೈಲಾಪುರ ಮೂಲದವರು ಎಂಬುದನ್ನು ಮರೆಯುವಂತಿಲ್ಲ. 77 ವರ್ಷ ವಯಸ್ಸಿನ ಸ್ವಾಮಿ ಅವರು ಹಿರಿಯರಾಗಿ 68 ವರ್ಷ ವಯಸ್ಸಿನ ಜಯಲಲಿತಾ ಅವರಿಗೆ ಸಲಹೆ ನೀಡಿದ್ದಾರೆ.[ಜಯಲಲಿತಾಗೆ ಸಿಂಗಪುರದಲ್ಲಿ ಹೆಚ್ಚಿನ ಚಿಕಿತ್ಸೆ]

ಏನೆಂದು ಟ್ವೀಟ್ ಮಾಡಿದ್ದಾರೆ: ಜೆಜೆ(ಜೆ ಜಯಲಲಿತಾ) ಅವರು ನನ್ನ ಸಲಹೆ ಪಡೆದು ಚಾರ್ಟರ್ ವಿಮಾನ ಪಡೆದು ಕೂಡಲೇ ಸಿಂಗಪುರಕ್ಕೆ ತೆರಳಿ ಹೆಚ್ಚಿನ ಚಿಕಿತ್ಸೆ ಪಡೆಯಲಿ. [ಜಯಲಲಿತಾರಿಗೆ ನಿಜಕ್ಕೂ ಏನು ಕಾಯಿಲೆ?]

ನಾವು ಬದ್ಧವೈರಿಗಳೇ ಇರಬಹುದು. ಆದರೆ, ಈ ಸಮಯದಲ್ಲಿ ಅವರಿಗೆ ನಾನು ಆಯುರ್, ಆರೋಗ್ಯ ಸಿದ್ಧಿಸಲಿ ಎಂದು ಶುಭ ಹಾರೈಸುತ್ತೇನೆ ಎಂದಿದ್ದಾರೆ. ಸಿಂಗಪುರವೇ ಏಕೆ? ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ ಮುಂದೆ ಓದಿ

ಸ್ವಾಮಿ ಎಂದರೆ ಜಯಲಲಿತಾಗೆ ಭಯ, ಅಭಯ

ಸ್ವಾಮಿ ಎಂದರೆ ಜಯಲಲಿತಾಗೆ ಭಯ, ಅಭಯ

ಸುಮಾರು 19 ವರ್ಷಗಳ ಕಾಲ ಕಾನೂನು ಸಮರ(ಅಕ್ರಮ ಆಸ್ತಿ ಪ್ರಕರಣ) ದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಅಂತಿಮವಾಗಿ ಜಯ ಲಭಿಸಿತ್ತು. ಈ ಸುದೀರ್ಘದ ಹೋರಾಟದಲ್ಲಿ ಒಬ್ಬ ಸ್ವಾಮಿ(ಸುಬ್ರಮಣಿಯನ್ ಸ್ವಾಮಿ) ಜಯಾಗೆ ಜೈಲು ದರ್ಶನ ಮಾಡಿಸಿದರೆ, ಮತ್ತೊಬ್ಬ ಸ್ವಾಮಿ(ನ್ಯಾ. ಕುಮಾರಸ್ವಾಮಿ)ಗಳು ಕೇಸಿನಿಂದ 'ನಿರ್ದೋಷಿ' ಎಂದು ಆದೇಶ ಇತ್ತಿದ್ದರು.

ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಾ ಸಿಕ್ಕಿಸಿದ್ದ ಸ್ವಾಮಿ

ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಾ ಸಿಕ್ಕಿಸಿದ್ದ ಸ್ವಾಮಿ

ಜನತಾ ಪಾರ್ಟಿ ನಾಯಕರಾಗಿದ್ದ(ಈಗ ಬಿಜೆಪಿ ಸೇರಿರುವ) ಡಾ. ಸುಬ್ರಮಣ್ಯಂ ಸ್ವಾಮಿ ಅವರು ಜಯಲಲಿತಾ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ 66.65 ಕೋಟಿ ರು ಆಸ್ತಿಯನ್ನು ಅಕ್ರಮವಾಗಿ ಗಳಿಕೆ(1991 ರಿಂದ 1996ರ ಅವಧಿ) ಮಾಡಿರುವ ಆರೋಪ ಹೊರೆಸಿ ಕೇಸ್ ದಾಖಲಿಸಿದರು. ಅಲ್ಲಿಂದ ಇಂದಿನ ತನಕ ಜಯಲಲಿತಾ ಅವರಿಗೆ 'ಸ್ವಾಮಿ' ಭೀತಿ ಎದುರಾಗಿತ್ತು. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಜೆಜೆ ಸಿಂಗಪುರಕ್ಕೆ ಹೋಗಲಿ, ಶುಭಹಾರೈಕೆ

ಜೆಜೆ ಸಿಂಗಪುರಕ್ಕೆ ಹೋಗಿ ಹೆಚ್ಚಿನ ಚಿಕಿತ್ಸೆ ಪಡೆಯಲಿ. ನಾವು ಬದ್ಧವೈರಿಗಳೇ ಇರಬಹುದು. ಆದರೆ, ಈ ಸಮಯದಲ್ಲಿ ಅವರಿಗೆ ನಾನು ಆಯುರ್, ಆರೋಗ್ಯ ಸಿದ್ಧಿಸಲಿ ಎಂದು ಶುಭ ಹಾರೈಸುತ್ತೇನೆ ಎಂದಿದ್ದಾರೆ.

ಸಿಂಗಪುರಕ್ಕೆ ಏಕೆ ಇಲ್ಲಿ ಆಸ್ಪತ್ರೆಗಳಿಲ್ಲವೇ?

ಸಿಂಗಪುರಕ್ಕೆ ಏಕೆ ಇಲ್ಲಿ ಆಸ್ಪತ್ರೆಗಳಿಲ್ಲವೇ? ಸರ್ಕಾರಿ ಆಸ್ಪತ್ರೆಗಳು, ಮೆಡಿಕಲ್ ಟೂರಿಸಂ ಬಗ್ಗೆ ಮಾತನಾಡುತ್ತೀರಿ. ಈ ಬಗ್ಗೆ ನಿಮ್ಮ ಗೆಳೆಯರಿಗೆ ಸಲಹೆ ನೀಡುತ್ತೀರಿ, ಆದರೆ, ಜಯಲಲಿತಾ ಅವರನ್ನು ಏಕೆ ಸಿಂಗಪುರಕ್ಕೆ ಹೋಗಿ ಎಂದು ಹೇಳುತ್ತಿದ್ದೀರಿ?

ಸಿಂಗಪುರಕ್ಕೆ ಹೋಗಲಿ ಎಂಬ ಸಲಹೆ ಏಕೆಂದರೆ

ಸಿಂಗಪುರಕ್ಕೆ ಹೋಗಲಿ ಎಂಬ ಸಲಹೆ ಏಕೆಂದರೆ, ಇದು ನನ್ನ ಸಲಹೆ ಅಷ್ಟೇ ಅಲ್ಲ, ಅಪೊಲೋ ಆಸ್ಪತ್ರೆ ವೈದ್ಯರ ಸಲಹೆ, ಆಕೆಗೆ ನೆಫ್ರಿಟಿಸ್ ಆಗಿದೆ. ಕಿಡ್ನಿ ಉಳಿಸಿಕೊಳ್ಳಬೇಕಾದರೆ ನುರಿತ ತಜ್ಞರಿಂದ ಚಿಕಿತ್ಸೆ ಅಗತ್ಯವಿದೆ. ಇದು ತಮಿಳುನಾಡು ಜನರ ಹಿತದೃಷ್ಟಿಯಿಂದ ಕೊಟ್ಟಿರುವ ಸಲಹೆ. ಈ ವಿಷಯದಲ್ಲಿ ತಡ ಮಾಡಿದರೆ ಅಪಾಯ ಎಂದು ಸ್ವಾಮಿ ಉತ್ತರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP leader Subramanian Swamy advices Tamil Nadu CM Jayalalithaa to go to Singapore for treatment. Swamy tweeted We may be opponents but wish her long life and health.
Please Wait while comments are loading...