ಸ್ಟಾಲಿನ್ ಕೆಸಿಆರ್ ಭೇಟಿ ಮಾಡುತ್ತಿರುವುದೇಕೆ? ಡಿಎಂಕೆ ಸ್ಪಷ್ಟನೆ
ಚೆನ್ನೈ, ಮೇ 13: ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಭೇಟಿ ರಾಷ್ಟ್ರ ಮಟ್ಟದಲ್ಲಿ ಕುತೂಹಲ ಕೆರಳಿಸಿದೆ.
ಸೋಮವಾರ ಅಪರಾಹ್ನ 4 ಗಂಟೆಗೆ ಚೆನ್ನೈಯ ಸ್ಟಾಲಿನ್ ನಿವಾಸದಲ್ಲಿ ಉಭಯ ನಾಯಕರೂ ಭೇಟಿ ಮಾಡಲಿದ್ದಾರೆ. ಕೆ ಚಂದ್ರಶೇಖರ್ ರಾವ್ ಅವರು ತೃತೀಯ ರಂಗದ ಕುರಿತು ಸ್ಟಾಲಿನ್ ಬಳಿ ಪ್ರಸ್ತಯಾಪಮಾಡುವ ಸಾಧ್ಯತೆ ಇದೆ ಎನ್ನಲಾಗಿದೆಯಾದರೂ ಇಬ್ಬರು ನಾಯಕರ ಭೇಟಿ ಬಗ್ಗೆ ಡಿಎಂಕೆ ಸ್ಪಷ್ಟನೆ ನೀಡಿದೆ.
"ಸ್ಟಾಲಿನ್ ಮತ್ತು ಕೆಸಿಆರ್ ಭೇಟಿ ಕೇವಲ ಸೌಜನ್ಯದ ಭೇಟಿಯಾಗಿದ್ದು, ಬೇರೇನೂ ಇಲ್ಲ" ಎಂದು ಡಿಎಂಕೆ ವಕ್ತಾರ ಶರವಣನ್ ಹೇಳಿದ್ದಾರೆ.

ಕಳೆದ ವಾರವೇ ಸ್ಟಾಲಿನ್ ಅವರನ್ನು ಭೇಟಿ ಮಾಡಲು ಕೆಸಿಆರ್ ನಿರ್ಧರಿಸಿದ್ದರು. ಆದರೆ ಸ್ಟಾಲಿನ್, ತಾವು ಚುನಾವಣೆ ಕೆಲಸದಲ್ಲಿ ಬ್ಯುಸಿ ಎಂದು ಭೇಟಿಯಾಗಿರಲಿಲ್ಲ. ಕಾಂಗ್ರೆಸ್, ಬಿಜೆಪಿಯನ್ನು ಹೊರಗಿಟ್ಟು ತೃತೀಯ ರಂಗ ಸೃಷ್ಟಿಸುವ ಸಲುವಾಗಿ ಕೆಸಿಆರ್ ಓಡಾಟ ನಡೆಸುತ್ತಿದ್ದರು.
ಈಗಾಗಲೇ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೂ ಚರ್ಚೆ ನಡೆಸಿದ್ದಾರೆ.












Click it and Unblock the Notifications