ಶ್ರೀಲಂಕಾದ ಸ್ಫೋಟದಲ್ಲಿ ಅದೃಷ್ಟವಶಾತ್ ಪಾರಾದ ನಟಿ ರಾಧಿಕಾ

ಕೊಲಂಬೋ, ಏಪ್ರಿಲ್ 21 : ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯ ತಮಿಳು ಚಿತ್ರರಂಗದ ನಟಿ ರಾಧಿಕಾ ಶರತ್ ಕುಮಾರ್ ಅವರು ಅದೃಷ್ಟವಶಾತ್ ಶ್ರೀಲಂಕಾದ ಬಾಂಬ್ ಸ್ಫೋಟದಿಂದ ಪಾರಾಗಿದ್ದಾರೆ. ಈ ಕುರಿತಂತೆ ರಾಧಿಕಾ ಅವರು ಟ್ವೀಟ್ ಮಾಡಿ, ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ರಾಧಿಕಾ ಅವರು ಈಗ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ'ದಲ್ಲಿ ಅಭಿನಯಿಸುತ್ತಿದ್ದಾರೆ.

ಶ್ರೀಲಂಕಾದ ಕೊಲಂಬೋ ಸೇರಿದಂತೆ ಹಲವೆಡೆ 8 ಬಾರಿ ಬಾಂಬ್​ಸ್ಫೋಟವಾಗಿದ್ದು, ಸುಮಾರು 185 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

SL Bomb Blast : Actress Radhika Sarath Kumar had a miraculous escape

ಬಾಂಬ್​ಸ್ಫೋಟವಾದ ಹೋಟೆಲ್​ಗಳಲ್ಲಿ ಒಂದಾದ ಸಿನ್ನಾಮೋನ್ ಗ್ರ್ಯಾಂಡ್​ನಲ್ಲಿ ರಾಧಿಕಾ ಶರತ್​ಕುಮಾರ್​ಉಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಟ್ವೀಟ್ ಮಾಡಿ, ಆ ಹೋಟೆಲ್​ನಿಂದ ಹೊರಟ ನಂತರ ಅಲ್ಲಿ ಬಾಂಬ್ ಸ್ಫೋಟವಾಗಿದೆ ಎಂದಿದ್ದಾರೆ.

'ಘಟನೆ ನಡೆದ ವಿಷಯ ನನಗೆ ನ್ಯೂಸ್​ನಿಂದ ತಿಳಿದಿದ್ದು, ಇದರಿಂದ ಆಘಾತವಾಗಿದೆ. ಇದು ವಿಷಾದನೀಯ ಘಟನೆ. ನೊಂದವರ ಕುಟುಂಬದವರಿಗೆ ದೇವರು ಶಕ್ತಿ ಕೊಡಲಿ' ಎಂದು ಟ್ವೀಟ್ ಮಾಡಿದ್ದಾರೆ.

ಕೊಲಂಬೋದಲ್ಲಿ ಇಂದು ಬಾಂಬ್​ಸ್ಫೋಟ ನಡೆದ ಚರ್ಚ್​ಗೂ ರಾಧಿಕಾ ಅವರು ಭೇಟಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ, ಈ ಬಾರಿ ಇಂದು ಚರ್ಚ್ ಗೆ ಭೇಟಿ ನೀಡಿರಲಿಲ್ಲ. ಆದರೆ, ಅವರು ಉಳಿದುಕೊಂಡ ಹೋಟೆಲ್ ನಲ್ಲಿ ಸ್ಫೋಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+