ಒಳ್ಳೆಯ ಹಿಂದುವಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಬೇಕಿಲ್ಲ: ತರೂರ್
ಚೆನ್ನೈ, ಅಕ್ಟೋಬರ್ 15: 'ಒಳ್ಳೆಯ ಹಿಂದುವಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಬೇಕಿಲ್ಲ' ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
'ಮತ್ತೊಬ್ಬರ ಪೂಜಾ ಸ್ಥಳವನ್ನು ನಾಶಮಾಡಿ, ಆ ಜಾಗದಲ್ಲಿ ರಾಮಮಂದಿರ ಕಟ್ಟುವುದು ಒಬ್ಬ ಉತ್ತಮ ಹಿಂದುವಿಗೆ ಬೇಕಿಲ್ಲ, ಅದನ್ನು ಎಂದಿಗೂ ಆತ ಬಯಸುವುದಿಲ್ಲ' ಎಂದು ತರೂರ್ ಹೇಳಿದ್ದರು.
ಚೆನ್ನೈಯಲ್ಲಿ ನಡೆದ ಸಾಹಿತ್ಯ ಹಬ್ಬದಲ್ಲಿ ಮಾತನಾಡುತ್ತಿದ್ದ ಅವರು, ರಾಮಮಂದಿರದ ಬಗ್ಗೆ ಮತ್ತೆ ಬಿಜೆಪಿ ಮಾತನಾಡುತ್ತಿದೆ. 2019 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದುಗಳ ಓಲೈಕೆಗಾಗಿ ಬಿಜೆಪಿ ಈ ಕೆಲಸ ಮಾಡುತ್ತಿದೆ. ಆದರೆ ಒಬ್ಬ ಒಳ್ಳೆಯ ಹಿಂದುವಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಬೇಕಿಲ್ಲ' ಎಂದರು.

ಕಾಂಗ್ರೆಸ್ ಎಂದಿಗೂ ತನ್ನ ತಪ್ಪನ್ನು ಒಪ್ಪಿಕೊಳ್ಳುವಲ್ಲಿ ಹಿಂದೇಟು ಹಾಕಿಲ್ಲ ಎಂದ ಅವರು ತುರ್ತು ಪರಿಸ್ಥಿತಿಯನ್ನೂ ಸಮರ್ಥಿಸಿಕೊಂಡರು.
ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ಶಿಯಾ ವಕ್ಫ್ ಬೋರ್ಡ್ ಮುಖಂಡ ವಾಸೀಮ್ ರಿಜ್ವಿ ಮಾತನಾಡಿದ್ದರು. ಬಾಬ್ರಿ ಮಸೀದಿ ಈ ದೇಶಕ್ಕೆ ಒಂದು ಕಪ್ಪುಚುಕ್ಕೆ. ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಮೊದಲು ಹಿಂದು ದೇವಾಲಯವಿತ್ತು. ಅದನ್ನು ನೆಲಸಮ ಮಾಡಿ ಮಸೀದಿ ಕಟ್ಟಿದ್ದಕ್ಕೆ ಸಾಕ್ಷ್ಯಗಳಿವೆ ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications