ಜಯಲಲಿತಾಗೆ ಸೇರಿದ ಟೀ ಎಸ್ಟೇಟ್ ನಲ್ಲಿ ಕೊಲೆ!
ಕೊಡನಾಡ್ ಟೀ ಎಸ್ಟೇಟ್, ಜಯಲಲಿತಾ ಪಾಲಿಗೆ ಎರಡನೇ ಮನೆಯಂತಿತ್ತು ಎಂಬುದು ಇಲ್ಲಿನ ಜನರ ಅಭಿಪ್ರಾಯ.
ಚೆನ್ನೈ, ಏಪ್ರಿಲ್ 24: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸೇರಿದ ತಮಿಳುನಾಡಿನ ಕೋಟಗಿರಿ ಬಳಿಯ ಕೊಡನಾಡ್ ಟೀ ಎಸ್ಟೇಟ್ ನಲ್ಲಿ ಭದ್ರತಾ ಸಿಬ್ಬಂದಿಯೊಬ್ಬರ ಹತ್ಯೆಯಾಗಿದೆ.
ಟೀ ಎಸ್ಟೇಟ್ ನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಓಂಕಾರ್ ಎಂಬುವರ ಮೇಲೆ ಮಧ್ಯರಾತ್ರಿ ಎಸ್ಟೇಟ್ ಪ್ರವೇಶಿಸಿರುವ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಅದೇ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಭದ್ರತಾ ಸಿಬ್ಬಂದಿ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದು ಆತ ಬದುಕುಳಿದಿದ್ದಾರೆ.[AIADMK ವಿಲೀನ: ಪಳನಿಸ್ವಾಮಿ ಸಿಎಂ, ಪನ್ನೀರ್ ಸೆಲ್ವಂಗೆ ಪಕ್ಷದ ಹೊಣೆ]

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ಕೊಡನಾಡ್ ಟೀ ಎಸ್ಟೇಟ್, ಜಯಲಲಿತಾ ಪಾಲಿಗೆ ಎರಡನೇ ಮನೆಯಂತಿತ್ತು ಎಂಬುದು ಇಲ್ಲಿನ ಜನರ ಅಭಿಪ್ರಾಯ. ಬಿಡುವು ಸಿಕ್ಕಾಗಲೆಲ್ಲಾ ಇಲ್ಲಿಗೆ ಆಗಮಿಸುತ್ತಿದ್ದ ಜಯಲಲಿತಾ, ಕೆಲವು ದಿನ ಇಲ್ಲಿ ನಿಶ್ಚಿಂತೆಯಾಗಿ ಇದ್ದು ತೆರಳುತ್ತಿದ್ದರು.[ಮಹಾಭಾರತ ವಿವಾದ: ನಟ ಕಮಲ್ ಹಾಸನ್ ಗೆ ಸಮನ್ಸ್]
ಪ್ರತೀ ಬಾರಿ ಜಯಲಲಿತಾ ಬಂದಾಗಲೂ, ಇಲ್ಲಿನ ಟೀ ಎಸ್ಟೇಟ್ ನಲ್ಲಿ ಒಂದೆರಡು ಬಾರಿ ಸುತ್ತಾಡುತ್ತಿದ್ದರು. ಆಗೆಲ್ಲಾ, ತಮ್ಮ ಕಾರನ್ನು ಅಲ್ಲಲ್ಲಿ ನಿಲ್ಲಿಸಿ ಕಾರಿನಿಂದ ಕೆಳಗಿಳಿದು ಎಸ್ಟೇಟ್ ನ ವಿವಿಧ ಭಾಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕರೆದು ಮಾತನಾಡಿಸುತ್ತಿದ್ದರು ಎಂದು ಅಲ್ಲಿನ ಕಾರ್ಮಿಕರು ಅವರನ್ನು ಈಗಲೂ ತುಂಬಾ ನೆನೆಯುತ್ತಾರೆ.












Click it and Unblock the Notifications