ವೈರಲ್ ವಿಡಿಯೋ: ಮೋದಿ-ಕ್ಸಿ 'ಅರ್ಜುನ ತಪಸ್ಸಿನ ಶಿಲಾಕೆತ್ತನೆ' ನೋಡುವಾಗ
ಚೆನ್ನೈ, ಅಕ್ಟೋಬರ್ 11: ಪಲ್ಲವ ಸಾಮ್ರಾಜ್ಯದ ಶಿಲ್ಪಕಲಾ ವೈಭವ ನಗರಿಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ 2ನೇ ಅನೌಪಚಾರಿಕ ಸಭೆ ನಡೆದಿದೆ. ಈ ಇಬ್ಬರು ನಾಯಕರು ಮಹಾಬಲಿಪುರಂನ ಶಿಲ್ಪಕಲೆಯನ್ನು ನೋಡುವಾಗ ಪ್ರಮಾದವೊಂದು ಸಂಭವಿಸಿದೆ. ಎಲ್ಲಿಂದಲೋ ಕರಿನಾಯಿಯೊಂದು ನುಸುಳಿ ಓಡಿ ಬಂದಿದೆ. ಈ ವಿಡಿಯೋ ನಿಧಾನಗತಿಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ತಮಿಳುನಾಡಿನ ಸಾಂಪ್ರದಾಯಿಕ ಉಡುಗೆ ಬಿಳಿ ಪಂಚೆ, ಶರ್ಟ್ ಮತ್ತು ಶಲ್ಯ ಧರಿಸಿದ್ದ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್ಪಿಂಗ್ ಮಹಾಬಲಿಪುರಂ ದೇಗುಲವನ್ನು ಸುತ್ತು ಹಾಕಿ ಅಲ್ಲಿನ ವಾಸ್ತುಶಿಲ್ಪ ಕಂಡರು. ನರೇಂದ್ರ ಮೋದಿಯವರು ಜಿನ್ಪಿಂಗ್ಗೆ ವಿವರಣೆ ನೀಡಿದರು.
#WATCH Prime Minister Narendra Modi and Chinese President Xi Jinping visit group of temples at Mahabalipuram. The group of monuments at Mahabalipuram is prescribed by UNESCO as a world heritage site. #TamilNadu pic.twitter.com/Yf8mHXCxh5
— ANI (@ANI) October 11, 2019
ಮಹಾಬಲಿಪುರಂ ದೇಗುಲದ ಬಗ್ಗೆ ಪ್ರಧಾನಿ ಮೋದಿ ವಿವರಿಸಿದ್ದನ್ನು ದುಭಾಷಿಗಳ ಸಹಾಯದಿಂದ ಜಿನ್ಪಿಂಗ್ ವಿವರಿಸಲಾಗುತ್ತಿತ್ತು. ವಿಶೇಷವಾಗಿ ಮಹಾಭಾರತದಲ್ಲಿ ಬರುವ ಕಿರಾತಾರ್ಜುನ ತಪಸ್ಸು ಮಾಡಿದ್ದ ಎನ್ನಲಾದ ಅರ್ಜುನ ತಪಸ್ಸಿನ ಶಿಲಾಕೆತ್ತನೆ ಸ್ಥಳದ ಬಗ್ಗೆ ಪ್ರಧಾನಿ ಮೋದಿ ತುಂಬಾ ಹೊತ್ತು ವಿವರಣೆ ನೀಡಿದರು.
ಮೋದಿ ಅವರು ಈ ಕೆತ್ತನೆ ಬಗ್ಗೆ ವಿವರಿಸುವಾಗ ಕಪ್ಪು ನಾಯಿಯೊಂದು ಎಡದಿಂದ ಬಲಕ್ಕೆ ಹಾದು ಹೋಗಿದೆ. ಅತ್ಯಂತ ಬಿಗಿ ಭದ್ರತೆ, ಸುರಕ್ಷತೆಯನ್ನು ಒದಗಿಸುವ ಈ ತಾಣದಲ್ಲಿ ಈ ರೀತಿ ಪ್ರಮಾದ ಸಂಭವಿಸಿರುವುದಕ್ಕೆ ತಮಿಳುನಾಡಿನ ಸರ್ಕಾರ ತಲೆ ತಗ್ಗಿಸುವಂತಾಗಿದೆ.

ನಂತರ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಜಿನ್ಪಿಂಗ್ ಶೋರ್ ದೇಗುಲ ತಲುಪಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದರು.
ಬಂಗಾಳಕೊಲ್ಲಿ ಹೊಂದಿಕೊಂಡಿರುವ ಮಾಮಲ್ಲಪುರಂ ಬಂದರು ಜೊತೆಗೆ ವಾಸ್ತುಶಿಲ್ಪ ಶ್ರೀಮಂತಿಕೆ ಹೊಂದಿದೆ. ಪಂಚರಥ, ಕೃಷ್ಣನ ಬೆಣ್ಣೆಮುದ್ದೆ ಬಂಡೆ, ಅರ್ಜುನ ತಪಸ್ಸಿನ ಶಿಲಾಕೆತ್ತನೆ, ತೀರ ಪ್ರದೇಶದಲ್ಲಿ ದೇವಾಲಯವಿದೆ.
Mamallapuram: Prime Minister #NarendraModi is explaining the finer details of the motifs in the Arjuna's Penance to Chinese President #XiJinping. pic.twitter.com/Tr8ta8XxSR
— All India Radio News (@airnewsalerts) October 11, 2019
ಅಲ್ಲಾರಿಪ್ಪು, ಪುರಪದ್ದು, ಸೇತುಬಂಧಂ, ಭಜಾವ್ ರೇ ಭಯ್ಯಾ ರಾಮ್ ಗೋವಿಂದ್ ಹರಿ, ತಿಲ್ಲಾನ ಮತ್ತು ಶಾಂತಿ ನಿಲವಾ. ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ತಂಜಾವೂರ್ ಚಿತ್ರವನ್ನು ಉಡುಗೊರೆಯಾಗಿ ನೀಡಿದರು.
ಪಲ್ಲವರ ಕಾಲದಲ್ಲಿ ಚೀನಾದ ಜೊತೆಗೆ ವ್ಯಾಪಾರ, ವಹಿವಾಟು ಜೋರಾಗಿ ನಡೆದಿತ್ತು ಚೀನಾ ಲಿಪಿಯ ನಾಣ್ಯ, ಶಾಸನಗಳು ತಮಿಳನಾಡಿನಲ್ಲಿ ಪತ್ತೆಯಾಗಿವೆ. ಭಾರತ-ಚೀನಾ ನಡುವೆ ರೇಷ್ಮೆ, ಸಾಂಬಾರ ಪದಾರ್ಥಗಳ ವಹಿವಾಟು ಚೆನ್ನಾಗಿದ್ದಾರೆ. ಕಾಂಚೀಪುರಂ ರೇಷ್ಮೆಗೆ ಬೇಕಾದ ಕಚ್ಚಾವಸ್ತು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ಚೀನಾದಿಂದ ಭಾರತಕ್ಕೆ ಮಹಾಬಲೀಪುರಂ ಮಾರ್ಗವಾಗಿ ಬಂದಿದ್ದ ಯಾತ್ರಿಕ ಹ್ಯೂಯೆನ್‍ತ್ಸಾಂಗ್ ಬರೆದಿದ್ದಾರೆ.
-
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
April 7 Horoscope: ಸ್ಪರ್ಧೆಯಲ್ಲಿ ಜಯ ಮತ್ತು ಹೊಸ ಉದ್ಯೋಗ ಅವಕಾಶಗಳು












Click it and Unblock the Notifications