ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ: ಕಿಡಿಕಾರಿದ ಕಮಲ್ ಹಾಸನ್

|
Google Oneindia Kannada News

Recommended Video

ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ: ಕಿಡಿಕಾರಿದ ಕಮಲ್ ಹಾಸನ್

ಚೆನ್ನೈ, ಆಗಸ್ಟ್ 05: ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡಿರುವುದು ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ ಎಂದು ಮಕ್ಕಳ್ ನೀಧಿ ಮಯ್ಯಮ್ ಮುಖ್ಯಸ್ಥ, ನಟ ಕಮಲ್ ಹಾಸನ್ ಕಿಡಿಕಾರಿದ್ದಾರೆ.

ಇಂಥ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಸರ್ಕಾರ ಸಾಕಷ್ಟು ಸಮಾಲೋಚನೆ ನಡೆಸಬೇಕಿತ್ತು. ಆದರೆ ವಿಪಲಕ್ಷಗಳನ್ನು ಬಲವಂತವಾಗಿ ಬಾಯಿಮುಚ್ಚಿಸುವ ಮೂಲಕ ಕೇಮದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಕೊಂದುಹಾಕಿದೆ ಎಂದು ಕಮಲ್ ಹಾಸನ್ ಹೇಳಿದರು.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು : ಯಾರು, ಏನು ಹೇಳಿದರು?

ಈ ಸರ್ಕಾರ ಮಾಡಿದ ಅತ್ಯಂತ ಕೆಟ್ಟ ಮತ್ತು ನಿರುಂಕುಶವಾದಿ ನಿರ್ಧಾರಗಳಲ್ಲಿ ಅಪನಗದೀಕರಣ ಮತ್ತು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ್ದು ಅಗ್ರಪಂಕ್ತಿಯಲ್ಲಿ ನಿಲ್ಲುತ್ತವೆ ಎಂದು ಅವರು ಹೇಳಿದರು.

 Scrapping Article 370 In Jammu and Kashmir: Kamal Haasans Reaction

370 ನೇ ವಿಧಿಯನ್ನು ರದ್ದುಗೊಳಿಸಲು ಸರ್ಕಾರ ಹೋದ ಹಾದಿಯನ್ನು ನಾನು ಖಂಡಿಸುತ್ತೇನೆ. ಇದನ್ನು ನಮ್ಮ ಪಕ್ಷ ಬೆಂಬಲಿಸುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ರಾಜ್ಯಸಭೆಯಲ್ಲಿ ಕಾಶ್ಮೀರ ಪುನರ್ ರಚನೆ ವಿಧೇಯಕ ಅಂಗೀಕಾರರಾಜ್ಯಸಭೆಯಲ್ಲಿ ಕಾಶ್ಮೀರ ಪುನರ್ ರಚನೆ ವಿಧೇಯಕ ಅಂಗೀಕಾರ

ಆದರೆ ಕಾಂಗ್ರೆಸ್ ನ ಕೆಲವು ನಾಯಕರೇ ಎನ್ ಡಿಎ ಸರ್ಕಾರದ ಈ ನಡೆಯನ್ನು ಸ್ವಾಗತಿಸಿದ್ದು, ಕಾಂಗ್ರೆಸ್ ಮುಖಂಡ ಜನಾರ್ದನ ದ್ವಿವೇದಿ ಮಾತನಾಡಿ, ನನ್ನ ರಾಜಕೀಯ ಗುರು ರಾಮ್ ಮನೋಹರ್ ಲೋಹಿಯಾ ಅವರು ಯಾವತ್ತಿಗೂ ಈ ವಿಧಿಯನ್ನು ವಿರೋಧಿಸಿದ್ದರು. ಇತಿಹಾಸದಲ್ಲಿ ಮಾಡಿದ್ದ ತಪ್ಪನ್ನು ಈಗ ಸರಿಪಡಿಸಲಾಗಿದೆ ಎಂದರು.

English summary
Scrapping Article 370 In Jammu and Kashmir: Kamal Haasan's Reaction
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X