ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನಟರಾಜನ್?

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 15: ಆಲ್ ಇಂಡಿಯಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ನ ಮುಂದಿನ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನಟರಾಜನ್ ಅವರು ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ವಕ್ತಾರ ಪೊನ್ನೈಯಾನ್ ಹೇಳಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಧನ ನಂತರ ಪಕ್ಷದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶಶಿಕಲಾ ಅವರು ಪ್ರಧಾನ ಕಾರ್ಯದರ್ಶಿಯಾಗಬೇಕು ಎಂಬುದು ಪಕ್ಷದಲ್ಲಿ ಎಲ್ಲರ ಆಸೆಯಾಗಿದೆ. ಚಿನ್ನಮ್ಮ(ಶಶಿಕಲಾ) ಅವರು ಅಮ್ಮ(ಜಯಲಲಿತಾ) ಅವರ ಘನತೆ, ಗೌರವವನ್ನು ಕಾಪಾಡಿಕೊಂಡು ನಮ್ಮನ್ನು ಅಮ್ಮ ನಡೆಸಿದ ಮಾರ್ಗದಲ್ಲೇ ನಡೆಸುತ್ತಾರೆ ಎಂಬ ನಂಬಿಕೆ ಇದೆ ಎಂದು ಪೊನ್ನೈಯನ್ ಹೇಳಿದ್ದಾರೆ.

Sasikala will be next general secretary: AIADMK

ಎಐಎಡಿಎಂಕೆ ಪಕ್ಷದ ಕಾರ್ಯಕಾರಿ ಸಮಿತಿ ಸದ್ಯದಲ್ಲೇ ಸಭೆ ಸೇರಿ ಶಶಿಕಲಾ ಅವರನ್ನು ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಿದೆ. ಶಶಿಕಲಾ ಆಯ್ಕೆ ಕುರಿತಂತೆ ಯಾವುದೇ ಕಾನೂನು ತೊಡಕಿಲ್ಲ. ಹಾಗೇನಾದರೂ ಕಾನೂನಿನ ತೊಡಕು ಕಂಡು ಬಂದರೆ ಚಿನ್ನಮ್ಮನಿಗಾಗಿ ಹೊಸ ಕಾನೂನು ರೂಪಿಸಲಾಗುವುದು ಎಂದು ಪೊನ್ನೈಯನ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sasikala Natarajan will be the next General Secretary of the All India Dravida Munnetra Kazhagam (AIADMK), said party spokesperson Ponnaiyan.
Please Wait while comments are loading...