ಚಿನ್ನಮ್ಮ ಹೊಸ ದಾಳ: ಜಯ ಸೋದರಳಿಯ ದೀಪಕ್ ಗೆ ಪಟ್ಟ ಕಟ್ಟಲು ಕಸರತ್ತು

Posted By:
Subscribe to Oneindia Kannada
ಚೆನ್ನೈ, ಫೆಬ್ರವರಿ 14: ತಮಗೆ ತಮಿಳುನಾಡು ಸಿಎಂ ಪಟ್ಟ ತಪ್ಪಿಹೋಗಿದ್ದರೂ, ತಮ್ಮ ಆಯ್ಕೆಯ ವ್ಯಕ್ತಿಯೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆ ಮೂಲಕ ಇಡೀ ಆಡಳಿತ ವ್ಯವಸ್ಥೆ ಹಾಗೂ ಎಐಎಡಿಎಂಕೆ ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಶಶಿಕಲಾ ಮತ್ತೊಂದು ದಾಳ ಹಾಕಿದ್ದಾರೆ.

ಅದರಂತೆ, ಜಯಲಲಿತಾ ಸಾವಿನ ಸಂದರ್ಭದಲ್ಲಿ ತಮ್ಮನ್ನು ಬೆಂಬಲಿಸಿದ್ದ, ಜಯಲಲಿತಾ ಅವರ ಸೋದರಳಿಯ ಆಗಿರುವ ದೀಪಕ್ ಜಯಕುಮಾರ್ ಅವರನ್ನು ಸಿಎಂ ಪಟ್ಟದಲ್ಲಿ ಕೂರಿಸಲು ಶಶಿಕಲಾ ತಮ್ಮ ಆಪ್ತರಿಗೆ ಸಲಹೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.[20 ವರ್ಷಗಳ ನಂತರ ಸತ್ಯಕ್ಕೆ ಗೆಲುವು: ಸ್ವಾಮಿ]

Sasikala wants Deepak Jayakumar to become Chief Minister

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಶಶಿಕಲಾ ಅವರು ಇಂದು ಸಂಜೆಯ ವೇಳೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬಂದು ಶರಣಾಗಬೇಕಿದೆ. ಅಷ್ಟರೊಳಗೆ ದೀಪಕ್ ಅವರನ್ನು ಕರೆಸಿ ಮಾತನಾಡಿ ಸ್ಪಷ್ಟ ನಿಲುವು ತಾಳಲು ಪ್ರಯತ್ನಗಳು ಸಾಗಿವೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AIADMK leader Sasikala Natarajan has implemented another plan to have control over the party and the government of Tamilnadu. According to sources, she decided to bring Jayalalitha's niece Deepak Jayakumar to Chief Minister post.
Please Wait while comments are loading...