ಅಮ್ಮ ಎಂದರೆ ನನಗೆ ಪ್ರಾಣ, ಭಾವುಕರಾಗಿ ನುಡಿದ ಚಿನ್ನಮ್ಮ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 31: ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಚಿನ್ನಮ್ಮ ಶಶಿಕಲಾ ನಟರಾಜರ್ ಅವರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ, ಅಮ್ಮ ನಮ್ಮೊಂದಿಗಿದ್ದಾರೆ ಅಮ್ಮ ಎಂದರೆ ನನಗೆ ಪ್ರಾಣ ಎಂದು ಭಾವುಕವಾಗಿ ನುಡಿದರು.

ಚೆನ್ನೈ ನಲ್ಲಿರುವ ಅಣ್ಣಾ ಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ, ಅಮ್ಮ(ಜಯಲಲಿತಾ) ನಮ್ಮ ಬಳಿ ದೈಹಿಕವಾಗಿ ಇಲ್ಲದೇ ಇರುಬಹುದು ಆಧರೆ ಪಕ್ಷವನ್ನು ಅವರು ಇನ್ನೂ ನೂರು ವರ್ಷಗಳ ನಡೆಸಲಿದ್ದಾರೆ. ಅಮ್ಮನಿಗೆ ಪಕ್ಷ ಎಂದರೆ ಜೀವ, ಅಮ್ಮ ಎಂದರೆ ಪ್ರಾಣ ಎಂದು ಹೇಳುತ್ತಾ ಬಾವುಕರಾದರು. ಅಮ್ಮನ ಕನಸುಗಳು ಇನ್ನು ತಮಿಳುನಾಡಿನಲ್ಲಿ ನನಸಾಗಲಿವೆ ಎಂದು ಭಾವುಕರಾಗಿ ನುಡಿದರು.[ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಚಿನ್ನಮ್ಮ]

chinnamma

ಪಕ್ಷದ ನಿರ್ಮಾತೃ ಎಂ.ಜಿ.ರಾಮಚಂದ್ರನ್ ಅವರ ಆದರ್ಶಗಳನ್ನು ಕಾರ್ಯಕರ್ತರು ಅನುಸರಿಸಬೇಕು. ಅಲ್ಲದೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಸಹಕರಿಸಿದ ಎಲ್ಲ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದರು. ತಮಿಳುನಾಡಿನ ಜನತೆಗಾಗಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ದುಡಿಯಬೇಕು ಎಂದು ತಿಳಿಸಿದರು.

chinnamma

ಚಿನ್ನಮ್ಮ, ಅಮ್ಮ ನಿಧನ ಹೊಂದಿದ ಒಂದು ತಿಂಗಳಲ್ಲಿಯೇ ಅಧಿಕಾರ ಸ್ವೀಕರಿಸಿದ್ದು, ಅನೇಕ ರಾಜಕೀಯ ಚಿಂತಕರಿಗೆ ಆಶ್ಚರ್ಯ ಮೂಡಿಸಿದೆ. ಇನ್ನು ಪಕ್ಷದ ಕಾರ್ಯಕಾರಿ ಸಮಿತಿ ಶಶಿಕಲಾ ಅವರನ್ನು ಇನ್ನು ನಾಲ್ಕೂವರೆ ವರ್ಷ ರಾಜ್ಯದ ಅಧಿಕಾರವನ್ನು ವಹಿಸಿಕೊಳ್ಳಲು ಕೋರಿತ್ತು. ಅದರೆ ಇದರ ಬಗ್ಗೆ ಕೆಲ ಪಕ್ಷ ಪ್ರಮುಖ ಅಸಮಾಧಾನವಿತ್ತು. ಮುಂದೆ ವಿರೋಧ ಪಕ್ಷದಲ್ಲಿ ಯರಾದರೂ ಮುಖ್ಯಮಂತ್ರಿಯಾದಲ್ಲಿ ಪಕ್ಷಾಂತರ ವಾಗಲು ಪಕ್ಷದಲ್ಲಿಯೇ ಕೆಲವರು ಸಿದ್ದರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sasikala Natarajan, a long-time close aide to late chief minister J Jayalalithaa, formally took over as the general secretary of the AIADMK in Chennai. ‘Chinnamma’, as she is popularly called among party cadres, offered floral tributes to Jayalalithaa and later held a meeting with senior party functionaries.
Please Wait while comments are loading...