• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಮಲ ಪಕ್ಷದ ಪರ ವಾಲಿದರೆ 'ಕಬಾಲಿ' ರಜನಿ ಕಾಂತ್?

|

ಚೆನ್ನೈ, ನವೆಂಬರ್ 12: ಸೂಪರ್ ಸ್ಟಾರ್ ರಜನಿಕಾಂತ್ ಅವರು ಯಾವ ಪಕ್ಷಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂಬ ಕುತೂಹಲ ಇನ್ನೂ ಇದೆ. ಹೊಸ ಪಕ್ಷ ಸ್ಥಾಪಿಸಿ, ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ರಜನಿ ಅವರು ಯಾಕೋ ಬಿಜೆಪಿ ಪರ ವಾಲುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ಸೆನ್ಸಾರ್ ಒಪ್ಪಿದ ಮೇಲೆ ನಿಮ್ಮದೇನು ತಕರಾರು: ಜಯಾ ಪಕ್ಷಕ್ಕೆ ರಜನಿ ತರಾಟೆ

ಮುಂಬರುವ ಲೋಕಸಭೆ ಚುನಾವಣೆ 2019ರಲ್ಲಿ ರಜನಿಕಾಂತ್‌ ಅವರು ಬಿಜೆಪಿಗೆ ಬೆಂಬಲ ಸೂಚಿಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಮೋದಿ ಸರ್ಕಾರದ ವಿರುದ್ಧ ರೂಪುಗೊಳ್ಳುತ್ತಿರುವ ಮಹಾಘಟಬಂದನ್ ವಿರುದ್ಧ ರಜನಿ ಮಾತನಾಡಿದ್ದಾರೆ.

ಯಾರ ತಾಳಕ್ಕೋ ಕುಣಿಯುತ್ತಿದ್ದಾರೆ ರಜನೀಕಾಂತ್: ಡಿಎಂಕೆ

ಚೆನ್ನೈ ಏರ್‌ಪೋರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಸೋಮವಾರಂದು ಮಾತನಾಡಿದ ರಜನಿ, ಬಿಜೆಪಿ ವಿರುದ್ಧ ಇಡೀ ರಾಜಕೀಯ ಸಮುದಾಯವೇ ಒಗ್ಗಟ್ಟಾಗಿ ಮಹಾಘಟಬಂಧನ್‌ ಮಾಡಿಕೊಳ್ಳಲು ಮುಂದಾಗಿರುವುದು ಬಿಜೆಪಿ ಅಷ್ಟೊಂದು ಕೆಟ್ಟ ಪಕ್ಷ ಎಂಬುದನ್ನು ತೋರಿಸುತ್ತಿದೆಯೇ? ಇದೆಲ್ಲವೂ ಅವರ ಯೋಚನೆಗೆ ಬಿಟ್ಟದ್ದು. ಮುಂಬರುವ 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳೆಲ್ಲ ಸೇರಿಕೊಂಡು ರಚಿಸಲಿರುವ ಒಕ್ಕೂಟವನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ನೋಟ್ ಬ್ಯಾನ್ ಅಥವಾ ಅಪನಗದೀಕರಣ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅಪನಗದೀಕರಣ ಜಾರಿಗೆ ತಂದ ಕ್ರಮ ಸರಿಯಿರಲಿಲ್ಲ. ಇದು ತಪ್ಪು ಮತ್ತು ನೋಟು ಅಮಾನ್ಯೀಕರಣವನ್ನು ಜಾರಿ ಮಾಡುವ ಮುನ್ನ ಈ ಕುರಿತು ವಿಸ್ತೃತ ಚರ್ಚೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ರಜನೀಕಾಂತ್ ಪಕ್ಷದ ರೂಲ್ ಬುಕ್ ಸಿದ್ಧ, ಅದರಲ್ಲಿ ಏನೇನಿದೆ ಗೊತ್ತಾ?!

ನಟ ರಜಿನಿಕಾಂತ್‌ ಅವರು ಡಿಸೆಂಬರ್‌ 12 ರಂದು ತಮ್ಮ ಹುಟ್ಟು ಹಬ್ಬದ ದಿನದಂದೇ ಹೊಸ ಪಕ್ಷದ ಹೆಸರು ಮತ್ತು ಲಾಂಛನವನ್ನು ಘೋಷಿಸಿದ್ದರು. 'ರಜಿನಿ ಮಕ್ಕಲ್‌ ಮಂಡ್ರಂ'(RMM) ಎನ್ನುವ ಪಕ್ಷವನ್ನು ಘೋಷಿಸಿ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿಲ್ಲ.

English summary
Superstar Rajinikanth, who is on the cusp of taking the political plunge, sounded a strong pro-BJP message on Monday, saying he doesn't agree with the parties that are joining hands against the ruling BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X