ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ, ಡಿ.12ಕ್ಕೆ ವಾರ್ಡ್‌ಗೆ ಶಿಫ್ಟ್‌

ಚೆನ್ನೈ, ಡಿಸೆಂಬರ್ 11: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯ ಬಹುಳಷ್ಟು ಸುಧಾರಿಸಿದ್ದು, ಇಂದು ದ್ರವಾಹಾರ ಸೇವಸಿದ್ದಾರೆ ಎಂದು ರೇಲಾ ವೈದ್ಯರು ಹೇಳಿದ್ದಾರೆ.

ಶ್ರೀಗಳ ಆರೋಗ್ಯದ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆಸ್ಪತ್ರೆ ಆಡಳಿತಮಂಡಳಿಯು, ಸಿದ್ದಗಂಗಾ ಶ್ರೀಗಳ ಆರೋಗ್ಯ ಸಾಕಷ್ಟು ಸುಧಾರಿಸಿದ್ದು ನಾಳೆ ಜನರಲ್ ವಾರ್ಡ್‌ಗೆ ಶಿಫ್ಟ್‌ ಮಾಡಲಾಗುತ್ತದೆ ಎಂದು ಆಸ್ಪತ್ರೆ ಹೇಳಿದೆ.

ಶಸ್ತ್ರ ಚಿಕಿತ್ಸೆ ಬಳಿಕ ಅಂದುಕೊಂಡಿದ್ದಕ್ಕಿಂತಲೂ ಶೀಘ್ರವಾಗಿ ಶ್ರೀಗಳು ಗುಣಮುಖರಾಗುತ್ತಿದ್ದಾರೆ. ನಾಳೆ (ಡಿಸೆಂಬರ್ 12) ರಂದು ಬೆಳಿಗ್ಗೆ ವಿಶೇಷ ನಿಗಾ ಘಟಕದಿಂದ ಸಾಮಾನ್ಯ ವಾರ್ಡ್‌ಗೆ ಶ್ರೀಗಳನ್ನು ಶಿಫ್ಟ್‌ ಮಾಡಲಾಗುವುದು ಎಂದು ರೇಲಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

Positive development in Siddaganga Seers health condition

ಇಂದು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಲು ಹಲವು ಜನ ಆಸ್ಪತ್ರೆಗೆ ಬಂದರು ಆದರೆ ಯಾರಿಗೂ ಅವಕಾಶ ನೀಡಲಿಲ್ಲ. ನಾಳೆ ಸಾಮಾನ್ಯ ವಾರ್ಡ್‌ಗೆ ಶಿಫ್ಟ್‌ ಮಾಡಿದ ನಂತರ ಮುಖ್ಯವಾದ ವ್ಯಕ್ತಿಗಳಿಗೆ ಮಾತ್ರವೇ ಶ್ರೀಗಳನ್ನು ನೋಡಲು ಅವಕಾಶ ನೀಡಲಾಗುವುದು ಎಂದು ಕಿರಿಯ ಸ್ವಾಮಿಗಳು ಮಾಧ್ಯಮಗಳಿಗೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+