ಜನರಿಗೆ ಮತಬ್ಯಾಂಕ್ ರಾಜಕಾರಣ ಬೇಕಿಲ್ಲ, ಅಭಿವೃದ್ಧಿ ಬೇಕು: ಮೋದಿ

ಕನ್ಯಾಕುಮಾರಿ, ಮಾರ್ಚ್ 01: ಕನ್ಯಾಕುಮಾರಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನರೇಂದ್ರ ಮೋದಿ ಅವರು ಮಾಡಿದರು. ರಸ್ತೆಗಳು, ರೈಲ್ವೆ ಹಳಿ, ಹೈವೇ ಯೋಜನೆಗಳಿಗೆ ಮೋದಿ ಅಡಿಗಲ್ಲು ಹಾಕಿದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಜಯಲಲಿತಾ ಅವರು ಮಾಡಿದ ಅತ್ಯುತ್ತಮ ಜನಪರ ಕಾರ್ಯಗಳನ್ನು ಈಗಿನ ಸರ್ಕಾರ ಮುಂದುವರೆಸಿಕೊಂಡು ಹೋಗುತ್ತಿದೆ ಎಂದರು.

ಮೊದಲ ಮಹಿಳಾ ರಕ್ಷಣಾ ಸಚಿವೆ ತಮಿಳುನಾಡಿನವರು, ಅಷ್ಟೆ ಅಲ್ಲ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ತಮಿಳುನಾಡಿನವರು ಎಂದು ಮೋದಿ ಹೇಳಿದರು.

 Narendra Modi put foundation stone to many development programs in Tamilnadu

ಕಾಂಗ್ರೆಸ್‌ನವರು ಈವರೆಗೂ ಕೃಷಿಕರಿಗಾಗಿ ಏನೂ ಮಾಡಿಲ್ಲ, ಆದರೆ ಚುನಾವಣೆ ಬಂದಾಗ ಸಾಲಮನ್ನಾ ಎಂದುಬಿಡುತ್ತಾರೆ. ಅದೂ ಹತ್ತು ವರ್ಷಕ್ಕೊಮ್ಮೆ ಸಾಲಮನ್ನಾ ಮಾಡಿದರೆ ಏನೂ ಪ್ರಯೋಜನವಿಲ್ಲ ಆದರೆ ನಮ್ಮ 'ಕಿಸಾನ್ ಸಮ್ಮಾನ್' ಯೋಜನೆ ವರ್ಷಗಳ ವರೆಗೆ ರೈತರಿಗೆ ಆರ್ಥಿಕ ಬಲ ತುಂಬಲಿದೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಜನರಿಗೆ ವಂಶಪಾರ್ಯ ಬೇಡ, ನೀತಿ ಪಾರ್ಶ್ವವಾಯು, ಮತ ಬ್ಯಾಂಕ್ ರಾಜಕೀಯ ಬೇಕಾಗಿಲ್ಲ ಜನರಿಗೆ ಅಭಿವೃದ್ಧಿ ಒಂದೇ ಬೇಕಾಗಿದೆ. ಅದನ್ನು ನಾವು 'ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್‌' ಮೂಲಕ ಮಾಡುತ್ತಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+