• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ವಿಮಾನದಲ್ಲಿ ಚೆನ್ನೈಗೆ ಬಂದವನಲ್ಲಿ ಸಿಕ್ಕಿದ್ದು ಕೋತಿ, ಹಾವು, ಆಮೆಗಳು!

|
Google Oneindia Kannada News

ಚೆನ್ನೈ, ಆಗಸ್ಟ್ 13: ಬ್ಯಾಂಕಾಕ್‌ನಿಂದ ಜೀವಂತ ಪ್ರಾಣಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಆಗಸ್ಟ್ 11ರಂದು ವಿಮಾನ ಸಂಖ್ಯೆ TG-337 ನಲ್ಲಿ ಜೀವಂತ ಪ್ರಾಣಿಗಳನ್ನು ಈ ವ್ಯಕ್ತಿ ಸಾಗಿಸುತ್ತಿದ್ದ ಎಂದು ಗೊತ್ತಾಗಿತ್ತು. ಜೀವಂತ ಪ್ರಾಣಿಗಳೊಂದಿಗೆ ಬ್ಯಾಂಕಾಕ್‌ನಿಂದ ಆಗಮಿಸುತ್ತಿದ್ದ ಪುರುಷ ಪ್ರಯಾಣಿಕರ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಂಕ್ ಪ್ರಯಾಣಿಕರನ್ನು ಪರೀಕ್ಷಿಸಿದಾಗ ಜೀವಂತ ಪ್ರಾಣಿಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಪ್ರಯಾಣಿಕನ ಬಳಿ ಒಂದು ಡಿ ಬ್ರಾಝಾ ಕೋತಿ, 15 ಕಿಂಗ್ ಹಾವುಗಳು, ಐದು ಬಾಲ್ ಹೆಬ್ಬಾವುಗಳು ಮತ್ತು ಎರಡು ಅಲ್ಡಾಬ್ರಾ ಆಮೆಗಳು ಪತ್ತೆಯಾಗಿವೆ. ಈ ಎಲ್ಲ ಜೀವಂತ ಪ್ರಾಣಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Monkey, pythons, tortoises recovered from Bangkok passenger by chennai Customs

ಅಕ್ರಮವಾಗಿ ಜೀವಂತ ಪ್ರಾಣಿಗಳ ಆಮದು:

ಜೀವಂತ ಪ್ರಾಣಿಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ. ಈ ಪ್ರಾಣಿಗಳ ಕ್ವಾರಂಟೈನ್ ಮತ್ತು ಪ್ರಮಾಣೀಕರಣ ಸೇವೆಗಳೊಂದಿಗೆ (ಎಕ್ಯೂಸಿಎಸ್) ಸಮಾಲೋಚಿಸಿದ ನಂತರ ಥಾಯ್ ಏರ್‌ವೇಸ್ ಮೂಲಕ ಮೂಲ ದೇಶಕ್ಕೆ ಗಡೀಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Monkey, pythons, tortoises recovered from Bangkok passenger by chennai Customs. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X