ಚೆನ್ನೈ : ಇನ್ನೂ ಪತ್ತೆಯಾಗಿಲ್ಲ ಸಿಜಿ-791 ವಿಮಾನ
ಚೆನ್ನೈ, ಜೂ. 10 : ನಾಪತ್ತೆಯಾದ ಕರಾವಳಿ ರಕ್ಷಕ ಪಡೆಯ ವಿಮಾನ ಸಿಜಿ-791ಗಾಗಿ ಹುಡುಕಾಟ ಮುಂದುವರೆದಿದೆ. ಚೆನ್ನೈ ಏರ್‌ಬೇಸ್‌ನಿಂದ ಸೋಮವಾರ ಸಂಜೆ ಹೊರಟಿದ್ದ ವಿಮಾನ ನಾಪತ್ತೆಯಾಗಿತ್ತು. ವಿಮಾನದಲ್ಲಿ ಮೂವರು ಸಿಬ್ಬಂದಿಗಳಿದ್ದರು.
ಕರಾವಳಿ ರಕ್ಷಕ ಪಡೆಯ ಅಧಿಕಾರಿಗಳು ಹುಡುಕಾಟದ ಕುರಿತು ಬುಧವಾರ ಮಾಹಿತಿ ನೀಡಿದ್ದು, ವಿಮಾನದ ಅವಶೇಷಗಳು ಪತ್ತೆಯಾದರೆ ತಕ್ಷಣ ಮಾಹಿತಿ ನೀಡುವಂತೆ ಮೀನುಗಾರರು ಮತ್ತು ಸ್ಥಳೀಯ ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. [ಕರಾವಳಿ ರಕ್ಷಕ ಪಡೆಯ ವಿಮಾನ ನಾಪತ್ತೆ]

ವಿಮಾನದ ಪತ್ತೆಗಾಗಿ 15 ಹೈಸ್ಪೀಡ್ ಬೋಟ್‌ಗಳು, ನೌಕಾಪಡೆಯ ಹಡಗು ಮತ್ತು ಪೆಟ್ರೋಲ್ ಬೋಟ್‌ಗಳಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದುವರೆಗೂ ವಿಮಾನದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ವಿಮಾನದಲ್ಲಿ ಡೆಪ್ಯೂಟಿ ಕಮಾಂಡೆಂಟ್ ವಿದ್ಯಾ ಸಾಗರ್, ಡೆಪ್ಯೂಟಿ ಕಮಾಂಡೆಂಟ್ ಎಂ.ಕೆ.ಸೋನಿ ಮತ್ತು ಸುಭಾಷ್ ಸುರೇಶ್ ಇದ್ದರು. ಮಹಾಬಲಿಪುರಂನಿಂದ ಕಾರಿಕಾಲ್ ತನಕ 70 ನಾಟಿಕಲ್ ಮೈಲಿ ದೂರದಲ್ಲಿ ವಿಮಾನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.
ಕರಾವಳಿ ಭದ್ರತೆಗೆ ನಿಯೋಜನೆ ಮಾಡಿದ್ದ ವಿಮಾನ ಚೆನ್ನೈ ಏರ್ ಬೇಸ್‌ನಿಂದ ಸೋಮವಾರ ಸಂಜೆ 5.30ರ ಸುಮಾರಿಗೆ ಹೊರಟಿತ್ತು. ರಾತ್ರಿ 9 ಗಂಟೆಗೆ ಕೊನೆಯ ಬಾರಿಗೆ ರಡಾರ್ ಸಂಪರ್ಕಕ್ಕೆ ವಿಮಾನ ಸಿಕ್ಕಿತ್ತು. ನಂತರ ನಾಪತ್ತೆಯಾಗಿದೆ.












Click it and Unblock the Notifications